Home> India
Advertisement

ಪುಲ್ವಾಮ ದಾಳಿಗೆ ಪ್ರತೀಕಾರ: ಗಡಿ ನಿಯಂತ್ರಣ ರೇಖೆ ಬಳಿ ಜೈಶ್ ಅಡಗುದಾಣಗಳ ಧ್ವಂಸ

ಸುಮಾರು 12 ಮಿರಾಜ್ 2000 ಯುದ್ಧ ವಿಮಾನಗಳಿಂದ ವಾಯುಪಡೆ ದಾಳಿ

ಪುಲ್ವಾಮ ದಾಳಿಗೆ ಪ್ರತೀಕಾರ: ಗಡಿ ನಿಯಂತ್ರಣ ರೇಖೆ ಬಳಿ ಜೈಶ್ ಅಡಗುದಾಣಗಳ ಧ್ವಂಸ

ನವದೆಹಲಿ:  ಪುಲ್ವಾಮಾ ದಾಳಿಗೆ ಪ್ರತೀಕಾರ ಕೈಗೊಂಡಿರುವ ಭಾರತೀಯ ಸೇನೆ ಈಗ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳನ್ನು ನಾಶ ಮಾಡಲು ವೈಮಾನಿಕ ದಾಳಿ ನಡೆಸಿದೆ. ಭಾರತೀಯ ಏರ್ ಫೋರ್ಸ್ (ಐಎಎಫ್) ಇಂದು ನಸುಕಿನ ವೇಳೆ 3:30ರಲ್ಲಿ 12 ಮಿರಾಜ್ ಯುದ್ಧ ವಿಮಾನಗಳಿಂದ ಪಾಕಿಸ್ತಾನ ಮೂಲದ ಪ್ರಮುಖ ಭಯೋತ್ಪಾದನಾ ಶಿಬಿರಗಳ ಮೇಲೆ ದಾಳಿ ನಡೆಸಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಜೈಶ್ ಅಡಗುದಾಣಗಳ ಧ್ವಂಸಗೊಳಿಸಿದೆ ಎಂದು ಐಎಎಫ್ ಮೂಲಗಳು ತಿಳಿಸಿವೆ.

ಪಾಕ್‌ ಆಕ್ರಮಿತ ಕಾಶ್ಮೀರದ ಬಾಲ್‌ಕೋಟ್‌ನಲ್ಲಿ ಭಾರತೀಯ ಯುದ್ಧ ವಿಮಾನಗಳು ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಈ ಭಾಗದಲ್ಲಿದ್ದ ಉಗ್ರ ನೆಲೆಗಳು ಬಹುತೇಕ ನಾಶಗೊಂಡಿದೆ. 

ಸುಮಾರು 12 ಮಿರಾಜ್‌ 2000 ಯುದ್ಧ ವಿಮಾನಗಳಿಂದ ಭಾರತೀಯ ವಾಯುಪಡೆ ಸುಮಾರು 1000 ಕೆಜಿ ಬಾಂಬ್‌ ಸ್ಫೋಟಕಗಳನ್ನು ಪಾಕಿಸ್ತಾನ ಮೂಲದ ಪ್ರಮುಖ ಭಯೋತ್ಪಾದನಾ ಸಂಘಟನೆಯಾದ ಜೈಶ್ ನೆಲೆಯ ಮೇಲೆ ಹಾಕಿದೆ ಎಂದು ವಾಯು ಪಡೆಯ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
 

Read More