Home> India
Advertisement

ಛತ್ತೀಸ್ ಗಡ್ ಚುನಾವಣಾ ಫಲಿತಾಂಶ ಸಂತಸ ತಂದಿದೆ- ಅಜಿತ್ ಜೋಗಿ

ಛತ್ತೀಸ್ ಗಡ್ ದಲ್ಲಿನ ಚುನಾವಣಾ ಫಲಿತಾಂಶ ಸಂತಸ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜನತಾ ಕಾಂಗ್ರೆಸ್ ನ ಅಜಿತ್ ಜೋಗಿ ಸಂತಸ ವ್ಯಕ್ತಪಡಿಸಿದ್ದಾರೆ. 

ಛತ್ತೀಸ್ ಗಡ್ ಚುನಾವಣಾ ಫಲಿತಾಂಶ ಸಂತಸ ತಂದಿದೆ- ಅಜಿತ್ ಜೋಗಿ

ನವದೆಹಲಿ:ಛತ್ತೀಸ್ ಗಡ್ ದಲ್ಲಿನ ಚುನಾವಣಾ ಫಲಿತಾಂಶ ಸಂತಸ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜನತಾ ಕಾಂಗ್ರೆಸ್ ನ ಅಜಿತ್ ಜೋಗಿ ಸಂತಸ ವ್ಯಕ್ತಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅಜೀತ್ ಜೋಗಿ ಛತ್ತೀಸ್ ಗಡ್ ದಲ್ಲಿನ ಫಲಿತಾಂಶ ಸಂತಸ ತಂದಿದೆ.ಜನರು ಬಿಜೆಪಿಗೆ ಪರ್ಯಾಯವಾಗಿರುವ ಪಕ್ಷವನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು. ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ರಮಣಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಈ ಬಾರಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಿತ್ತು ಈ ಹಿನ್ನಲೆಯಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದೆ.

ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಅಜಿತ್ ಜೋಗಿ ತಮ್ಮದೇ ಆದ ಜನತಾ ಕಾಂಗ್ರೆಸ್ ಪಕ್ಷವನ್ನು ಹುಟ್ಟು ಹಾಕಿದ್ದರು.ಈಗ ಮೂರನೇ ಶಕ್ತಿಯಾಗಿ ತಮ್ಮ ಪಕ್ಷ ರಾಜ್ಯದಲ್ಲಿ ಬೆಳೆಯಲಿದೆ ಎಂದು ಅವರು ತಿಳಿಸಿದರು

Read More