Home> India
Advertisement

Ministry of Education: ಮನೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ, ಪೋಷಕರಿಗೆ ಶಿಕ್ಷಣ ಸಚಿವಾಲಯದ ಮಾರ್ಗಸೂಚಿ

ಸಚಿವಾಲಯದ ಈ ಮಾರ್ಗಸೂಚಿಯು ಮನೆಯಲ್ಲಿ ಪೋಷಕರು ಶಿಕ್ಷಣ ಸೇರಿದಂತೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುವ ಅಗತ್ಯವನ್ನು ಒತ್ತಿಹೇಳುತ್ತದೆ ಮತ್ತು ಸಕಾರಾತ್ಮಕ ವಿಷಯಗಳನ್ನು ಕಲಿಯುವ ವಾತಾವರಣವನ್ನು ಸೃಷ್ಟಿಸುತ್ತದೆ.

Ministry of Education: ಮನೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ, ಪೋಷಕರಿಗೆ ಶಿಕ್ಷಣ ಸಚಿವಾಲಯದ ಮಾರ್ಗಸೂಚಿ

 ನವದೆಹಲಿ: ಕೋವಿಡ್ -19 (Covid-19) ಕಾರಣದಿಂದಾಗಿ 2020 ರಿಂದ ಶಾಲೆಗಳನ್ನು ನಿರಂತರವಾಗಿ ಮುಚ್ಚಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ವಿದ್ಯಾರ್ಥಿಗಳು ಮನೆಯಲ್ಲಿಯೇ ಇದ್ದು ಆನ್‌ಲೈನ್ ತರಗತಿಗಳ ಮೂಲಕ ಕಲಿಯುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಸಚಿವಾಲಯವು ಪೋಷಕರು ಮನೆಯಲ್ಲಿ ಮಕ್ಕಳ ಅಧ್ಯಯನಕ್ಕೆ ಸಹಾಯ ಮಾಡಲು ಅನುಕೂಲವಾಗುವಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಚಿವಾಲಯದ ಈ ಮಾರ್ಗಸೂಚಿಯು ಮನೆಯಲ್ಲಿ ಪೋಷಕರು ಶಿಕ್ಷಣ ಸೇರಿದಂತೆ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುವ ಅಗತ್ಯವನ್ನು ಒತ್ತಿಹೇಳುತ್ತದೆ ಮತ್ತು ಸಕಾರಾತ್ಮಕ ವಿಷಯಗಳನ್ನು ಕಲಿಯುವ ವಾತಾವರಣವನ್ನು ಸೃಷ್ಟಿಸುತ್ತದೆ. ಇದಲ್ಲದೆ, ಅಧ್ಯಯನದ ಜೊತೆಗೆ, ಪೋಷಕರು ತಮ್ಮ ಮಕ್ಕಳ ಆರೋಗ್ಯ, ಆಹಾರ ಮತ್ತು ಸಂತೋಷದ ವಾತಾವರಣವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆಯೂ ಒತ್ತು ನೀಡಲಾಗಿದೆ.

ಅಭಿವೃದ್ಧಿ ಚಟುವಟಿಕೆಯಲ್ಲಿ ಮಕ್ಕಳಿಗೆ ಪೋಷಕರ ಸಹಾಯ:
ವಾಸ್ತವವಾಗಿ, ಕರೋನಾವೈರಸ್ (Coronavirus) ನಿಂದಾಗಿ ಶಾಲೆಗಳು ಮುಚ್ಚಲ್ಪಟ್ಟ ಕಾರಣ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರ ಜವಾಬ್ದಾರಿಯಾಗಿದೆ. ಶಿಕ್ಷಣ ಸಚಿವಾಲಯ ಹೊರಡಿಸಿದ ಈ ಮಾರ್ಗಸೂಚಿಗಳು ಪೋಷಕರಿಗೆ ಮಾತ್ರವಲ್ಲ, ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಆರೈಕೆದಾರರು, ಇತರ ಕುಟುಂಬ ಸದಸ್ಯರಿಗೂ ಅನ್ವಯವಾಗುತ್ತದೆ. 'ಸಾಂಕ್ರಾಮಿಕ ಈ ಸಮಯದಲ್ಲಿ ಮಕ್ಕಳ ಅಭಿವೃದ್ಧಿ ಮತ್ತು ಕಲಿಕೆಗೆ ಪೋಷಕರ ಪಾತ್ರವನ್ನು ಪರಿಗಣಿಸಿ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ' ಎಂದು ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ 'ನಿಶಾಂಕ್'  (Dr. Ramesh Pokhriyal Nishank)  ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಅದೇ ಸಮಯದಲ್ಲಿ, 'ಮನೆಯೇ ಮಗುವಿನ ಮೊದಲ ಶಾಲೆ ಮತ್ತು ಪೋಷಕರೇ ಮೊದಲ ಗುರು ಎಂದು ನಾನು ನಂಬುತ್ತೇನೆ' ಎಂದು ಹೇಳಿದರು.

ಇದನ್ನೂ ಓದಿ- ಸಂಕಷ್ಟದಲ್ಲಿರುವ ಮಕ್ಕಳಿಗೆ ಆರ್ಥಿಕ ನೆರವು ನೀಡಲು ಮುಂದಾದ ದೆಹಲಿ ಸರ್ಕಾರ

 

ಮಕ್ಕಳಿಗೆ ಅಧ್ಯಯನದಲ್ಲಿ (Studies) 'ಏಕೆ, ಏನು ಮತ್ತು ಹೇಗೆ' ಸಹಾಯ ಮಾಡುವುದು ಎಂಬಂತಹ ಹಲವು ಅಂಶಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಈ ವಯಸ್ಸಿನ ಮಕ್ಕಳು - ಅಡಿಪಾಯ ಹಂತದಿಂದ (3 ವರ್ಷದಿಂದ 8 ವರ್ಷಗಳು), ಪೂರ್ವಸಿದ್ಧತಾ ಹಂತ (8-11 ವರ್ಷಗಳು), ಮಧ್ಯಮ ಹಂತ (11-14 ವರ್ಷಗಳು) ಮತ್ತು ದ್ವಿತೀಯ ಹಂತದಿಂದ ಪ್ರೌಢಾವಸ್ಥೆಯವರೆಗೆ ವಿವಿಧ ಅಭಿವೃದ್ಧಿ ಚಟುವಟಿಕೆಗಳಲ್ಲಿ ಅವರನ್ನು ಹೇಗೆ ಬೆಂಬಲಿಸಬಹುದು? ಎಂಬ ಮಾಹಿತಿಯನ್ನು ಸಹ ಒಳಗೊಂಡಿದೆ. 

ಇದನ್ನೂ ಓದಿ- 3T+V Formula: ಲಾಕ್ ಡೌನ್ ಸಡಿಲಿಕೆ ದುಬಾರಿ ಬೀಳದಿರಲಿ, ರಕ್ಷಣೆಗಾಗಿ ಕೇಂದ್ರದಿಂದ ರಾಜ್ಯಗಳಿಗೆ 3T+V ಫಾರ್ಮುಲಾ

 

ಶಿಕ್ಷಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿ ಏನು ಹೇಳುತ್ತೆ?

>> ಮೊದಲನೆಯದಾಗಿ, ಪೋಷಕರು ತಮ್ಮ ಮಕ್ಕಳಿಗೆ ದಿನಚರಿಯನ್ನು ಮಾಡಬೇಕು. ಬಲವಂತದ ದಿನಚರಿ ಇರಬಾರದು, ಮಕ್ಕಳೊಂದಿಗೆ ಮಾತನಾಡಿ ಮತ್ತು ಅವರ ಅಧ್ಯಯನವನ್ನು ಹೊಂದಿಸಿ ಮತ್ತು ಆಟಕ್ಕೂ ಸಮಯ ಮೀಸಲಿಡಿ.
>> ಪೋಷಕರಿಗೆ ಈ ಮಾರ್ಗಸೂಚಿಯಲ್ಲಿ, ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣವನ್ನು ಹೇಗೆ ನೀಡಬಹುದು ಎಂದು 10 ಅಧ್ಯಾಯಗಳನ್ನು ವಿವರವಾಗಿ ವಿವರಿಸಲಾಗಿದೆ.

>> ಇದಲ್ಲದೆ, ಶಾಲೆ ತೆರೆದಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ  ವಿಷಯಗಳನ್ನು ಯಾವಾಗಲೂ ಅವರೊಂದಿಗೆ ಪ್ರಸ್ತಾಪಿಸುತ್ತಾ ಅವುಗಳ ಬಗ್ಗೆ ಮಕ್ಕಳಿಗೆ ಕಲಿಸಬೇಕು.

>> ಮಕ್ಕಳನ್ನು ಶಾಲೆಗೆ ಹೋಗಲು ಮಾನಸಿಕವಾಗಿ ಸಿದ್ಧರಾಗಿ ಮಾಡಿರಿ. ಶೀಘ್ರದಲ್ಲೇ ಶಾಲೆಗಳು ತೆರೆಯಲ್ಪಡುತ್ತವೆ ಎಂದು ಭರವಸೆ ನೀಡಿ.
>> ಮಕ್ಕಳನ್ನು ಯೋಗ ಮತ್ತು ವ್ಯಾಯಾಮ ಮಾಡುವಂತೆ ಮಾಡಿ ಮತ್ತು ಅವರನ್ನು ಸದೃಢವಾಗಿರಿಸಿಕೊಳ್ಳಿ.
>> ಪ್ರತಿದಿನ ಕಥೆ ಹೇಳುವುದು, ಹಾಡುಗಳನ್ನು ಹಾಡುವುದು, ಮೆಮೊರಿ ಆಟಗಳನ್ನು ಆಡಿಸಿ.
>> ಮಕ್ಕಳೊಂದಿಗೆ ಅವರ ಶಿಕ್ಷಕರ ಬಗ್ಗೆ ಮಾತನಾಡಿ ಮತ್ತು ಅವರ ನೆಚ್ಚಿನ ವಿಷಯಗಳನ್ನೂ ಕೇಳಿ.
>> ಸಕಾರಾತ್ಮಕ ಶಿಸ್ತು ವಾತಾವರಣವನ್ನು ಕಾಪಾಡಿಕೊಳ್ಳಿ. ಮಕ್ಕಳೊಂದಿಗೆ ಆನಂದಿಸಲು ಸಮಯ ತೆಗೆದುಕೊಳ್ಳಿ
>> ಕುಟುಂಬದಲ್ಲಿ ಪ್ರತಿದಿನ ಒಂದು ಚಟುವಟಿಕೆಯನ್ನು ಮಾಡಿ, ಇದರಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಭಾಗವಹಿಸಬೇಕು.
>> ಮಕ್ಕಳು ದೊಡ್ಡವರ ಆದರ್ಶಪ್ರಾಯರು ಎಂಬುದನ್ನು ನೆನಪಿನಲ್ಲಿಡಿ. 
>> ಸಕಾರಾತ್ಮಕ ಭಾಷೆಯನ್ನು ಬಳಸಿ.
>> ಮಕ್ಕಳ ಮುಂದೆ ಟಿವಿ ಮತ್ತು ಫೋನ್ ಬಳಕೆಯನ್ನು ಕಡಿಮೆ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

  

Read More