Home> India
Advertisement

Makaravilakku 2023: ಮಣಿಕಂಠ ಅಯ್ಯಪ್ಪ ಸ್ವಾಮಿಯಾಗಿದ್ದು ಹೇಗೆ? ಹರಿಹರ ಪುತ್ರನಿಗೆ ವರ್ಷಕ್ಕೊಮ್ಮೆ ಮಾತ್ರ ಆಭರಣ ತೊಡಿಸುವುದೇಕೆ ಗೊತ್ತಾ?

Makaravilakku 2023 Timings: ಇನ್ನು ಮಕರ ಸಂಕ್ರಮಣದ ಪ್ರಯುಕ್ತ ಶಬರೀಶ ಮೂರ್ತಿಗೆ ಹಾಕಲಾಗುವ ತಿರುವಾಭರಣಗಳನ್ನು ಇಂದು ಪಂದಳ ಅರಮನೆಯಿಂದ ಮೆರವಣಿಗೆ ಮೂಲಕ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ. ಗಂಗಾಧರನ್ ಪಿಳ್ಳೈ ನೇತೃತ್ವದಲ್ಲಿ ತಿರುವಾಭರಣಗಳನ್ನು ತಲೆ ಮೇಲೆ ಹೊತ್ತು ಕಾಲ್ನಡಿಗೆಯ ಮೂಲಕ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ. ಈ ಆಭರಣಗಳನ್ನು ಗುರುಸ್ವಾಮಿ ಕುಲವು ಪಂದಳಂ ಶ್ರಾಂಪಿಕಲ್ ಅರಮನೆಯಲ್ಲಿ ಸುರಕ್ಷಿತ ಕೋಣೆಯಲ್ಲಿ ಇರಿಸಲಾಗುತ್ತದೆ.  

Makaravilakku 2023: ಮಣಿಕಂಠ ಅಯ್ಯಪ್ಪ ಸ್ವಾಮಿಯಾಗಿದ್ದು ಹೇಗೆ? ಹರಿಹರ ಪುತ್ರನಿಗೆ ವರ್ಷಕ್ಕೊಮ್ಮೆ ಮಾತ್ರ ಆಭರಣ ತೊಡಿಸುವುದೇಕೆ ಗೊತ್ತಾ?

Makaravilakku 2023 Timings: ಮಕರ ಸಂಕ್ರಮಣ ಎಂದಾಗ ಮೊದಲಿಗೆ ನೆನಪಾಗುವುದು ಸಂಕ್ರಾಂತಿ ಹಬ್ಬ ಮತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ಮಕರವಿಳಕ್ಕು (ಮಕರ ಜ್ಯೋತಿ). ಜನವರಿ 14ರಂದು ಶಬರಿಮಲೆಯ ಪೊನ್ನಂಬಲಮೇಡು ಕಾನನದಲ್ಲಿ ಗೋಚರಿಸುವ ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಲು ಅದೆಷ್ಟೋ ಭಕ್ತರು ಕಾಯುತ್ತಿದ್ದಾರೆ. ಇನ್ನು ಮಕರ ಜ್ಯೋತಿಗೂ ಮುನ್ನ ಶಬರಿಮಲೆಯ ಗುಡಿಯಲ್ಲಿರುವ ಶಬರೀಶನಿಗೆ ಅಲಂಕಾರ ಮಾಡಲಾಗುತ್ತದೆ. ವರ್ಷಕ್ಕೆ ಒಂದು ಬಾರಿ ಸರ್ವಾಲಂಕಾರ ಭೂಷಿತನಾಗಿ ಭಕ್ತರಿಗೆ ದರ್ಶನ ನೀಡಲಿದ್ದಾರೆ ಅಯ್ಯಪ್ಪ.

ಇನ್ನು  ಮಕರ ಸಂಕ್ರಮಣದ ಪ್ರಯುಕ್ತ ಶಬರೀಶ ಮೂರ್ತಿಗೆ ಹಾಕಲಾಗುವ ತಿರುವಾಭರಣಗಳನ್ನು ಇಂದು ಪಂದಳ ಅರಮನೆಯಿಂದ ಮೆರವಣಿಗೆ ಮೂಲಕ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ. ಗಂಗಾಧರನ್ ಪಿಳ್ಳೈ ನೇತೃತ್ವದಲ್ಲಿ ತಿರುವಾಭರಣಗಳನ್ನು ತಲೆ ಮೇಲೆ ಹೊತ್ತು ಕಾಲ್ನಡಿಗೆಯ ಮೂಲಕ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ. ಈ ಆಭರಣಗಳನ್ನು ಗುರುಸ್ವಾಮಿ ಕುಲವು ಪಂದಳಂ ಶ್ರಾಂಪಿಕಲ್ ಅರಮನೆಯಲ್ಲಿ ಸುರಕ್ಷಿತ ಕೋಣೆಯಲ್ಲಿ ಇರಿಸಲಾಗುತ್ತದೆ.  

ಇದನ್ನೂ ಓದಿ: Viral Video : ಜಸ್ಟ್‌ ಮಿಸ್‌! ಹುಲಿ ಬಾಯಿಗೆ ಸಿಕ್ಕವರು ಬಚಾವ್‌ ಆಗಿದ್ದು ಹೇಗೆ ನೋಡಿ..

ಪಂದಳಂ ಅರಮನೆಯ ವಲಿಯ ತಂಬುರಾನ್ ಮಕೈರಂ ನಾಲ್ ರಾಘವ ವರ್ಮ ಪ್ರತಿನಿಧಿಯಾಗಿ ರಾಜರಾಜ ವರ್ಮ ಈ ಬಾರಿಯ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾರೆ. ಜನವರಿ 12 ರಂದು ಬೆಳಿಗ್ಗೆ ಆಭರಣಗಳನ್ನು ವಲಿಯಕೋಯಿಕಲ್ ಧರ್ಮಶಾಸ್ತಾ ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಬೆಳಗ್ಗೆ 11 ಗಂಟೆವರೆಗೆ ಭಕ್ತರಿಗೆ ಆಭರಣಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆ ಬಳಿಕ ಮಧ್ಯಾಹ್ನ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಪೂಜೆ ಕಾರ್ಯ ಮುಗಿದ ಬಳಿಕ ರಾಜರಾಜ ವರ್ಮ ಅವರು ದೇವಾಲಯದಿಂದ ಹೊರಗೆ ಬಂದು ಪಲ್ಲಕ್ಕಿಗೆ ಚಾಲನೆ ನೀಡುತ್ತಾರೆ. ಹೀಗೆ ಗಂಗಾಧರನ್ ಪಿಳ್ಳೈ ನೇತೃತ್ವದ ತಂಡವು ತಲೆಯ ಮೇಲೆ ರತ್ನಖಚಿತ ಪೆಟ್ಟಿಗೆಯನ್ನು ಹೊತ್ತು ಶಬರಿಮಲೆಯತ್ತ ಸಾಗಲಿದೆ.

ಮೊದಲ ದಿನ ತಂಡವು ಸಾಂಪ್ರದಾಯಿಕ ತಿರುವಾಭರಣ ಹೊತ್ತು ಕುಳನಾಡ, ಉಳ್ಳನ್ನೂರು, ಅರನ್ಮುಳ ಮಾರ್ಗವಾಗಿ ಐರೂರು ಪುತ್ತಿಕಾವ್ ದೇವಸ್ಥಾನ ತಲುಪಲಿದೆ. ಎರಡನೇ ದಿನ ಮೆರವಣಿಗೆಯು ಪೆರುನಾಡು ಮಾರ್ಗವಾಗಿ ಲಾಹಾ ಅರಣ್ಯ ಇಲಾಖೆ ಹೋಟೆಲ್ ತಲುಪಿ ಅಲ್ಲಿಯೇ ಬಿಡಾರ ಹೂಡಲಿದೆ. ಮೂರನೇ ದಿನ ಕಾನನಪಥದ ಮೂಲಕ ಮೆರವಣಿಗೆ ಸಾಗುತ್ತದೆ. ಪ್ಲಾಪ್ಪಲ್ಲಿಯಿಂದ ವಲಿಯಾನವಟ್ಟಂ ಮತ್ತು ಚೆರಿಯಾನವಟ್ಟಂ ಮೂಲಕ ಅಟ್ಟಮೋತ್ ಮೂಲಕ ಸಂಜೆ ಶಬರಿಮಲೆ ತಲುಪಲಿದೆ.  ಇದಾದ ನಂತರ ಶಬರೀಶ ಮೂರ್ತಿಯ ಮೇಲೆ ತಿರುವಾಭರಣಗಳನ್ನು ಇಟ್ಟು ದೀಪಾರಾಧನೆ ಮಾಡಿದಾಗ ಪೊನ್ನಂಬಲಮೇಡದಲ್ಲಿ ಮಕರಜ್ಯೋತಿ ಬೆಳಗುತ್ತದೆ.

ಮೆರವಣಿಗೆಯೊಂದಿಗೆ ಪ್ರಯಾಣಿಸಿದ ರಾಜನು ಪಂಪಾವನ್ನು ತಲುಪಿ, ಅಲ್ಲಿ ಭಕ್ತರಿಗೆ ಭಸ್ಮವನ್ನು ನೀಡುತ್ತಾರೆ. ಮೂರನೇ ದಿನ ಶಬರಿಮಲೆಯಲ್ಲಿ ನಡೆದ ಕಲಭ ಮತ್ತು ಕುರುಟಿಯ ನಂತರ ಆಲಂಕಾರಿಕ ಸಮೇತ ಶಬರಿಗಿರಿ ಹತ್ತಿದ್ದ ರಾಜನು ಪಂದಳಂಗೆ ಹಿಂದಿರುಗುತ್ತಾರೆ.

ಇದನ್ನೂ ಓದಿ: Covid-19 New Wave: ನಾಳೆಯಿಂದ ಬದಲಾಗಲಿದೆ ವಿಮಾನ ಪ್ರಯಾಣದ ನಿಯಮ

ಅಯ್ಯಪ್ಪ ಸ್ವಾಮಿಗೆ ವರ್ಷಕ್ಕೊಮ್ಮೆ ಆಭರಣ ತೊಡಿಸುವುದೇಕೆ ಗೊತ್ತಾ?

ಪಂದಳ ಅರಮನೆಯನ್ನು ತೊರೆದು ಲೋಕಕಲ್ಯಾಣಕ್ಕೆಂದು ತೆರಳುವ ಮಣಿಕಂಠನನ್ನು ಕಂಡು ತಂದೆ ಪಂದಳ ರಾಜನಿಗೆ ಬಹಳ ಮನಸ್ಸಿಗೆ ನೋವುಂಟಾಗುತ್ತದೆ. ಪುತ್ರನಿಗೆ ಪಟ್ಟಾಭಿಷೇಕ ಮಾಡಿ ಕಣ್ತುಂಬಿಕೊಳ್ಳಬೇಕೆಂಬ ಮಹದಾಸೆ ಈಡೇರುವುದಿಲ್ಲವಲ್ಲ ಎಂಬ ಕೊರಗಿನಿಂದ ಕಣ್ಣೀರಿಡುತ್ತಾರೆ. ಆಗ ಮಣಿಕಂಠ ತಂದೆಯ ಬಳಿ ಹೀಗೆ ಹೇಳುತ್ತಾರೆ; “ನನ್ನ ಪಟ್ಟಾಭಿಷೇಕ ಕಂಡು ಪಾವನರಾಗಬೇಕೆಂದು ಬಯಸಿದ ನಿಮಗೆ ನಿರಾಶೆ ಮಾಡಲಾರೆನು. ನನಗೆ ಶಬರಿಮಲೆಯಲ್ಲಿ ಒಂದು ಗುಡಿ ನಿರ್ಮಾಣ ಮಾಡಿ. ಪ್ರತೀ ವರ್ಷ ಮಕರ ಸಂಕ್ರಾತಿ ದಿನ ಅರಮನೆಯಿಂದ ತಂದ ತಿರುವಾಭರಣಗಳಿಂದ ನನ್ನ ಮೂರ್ತಿಗೆ ಸರ್ವಾಲಂಕಾರ ಮಾಡಿ ಆರಾಧಿಸಿ. ನನ್ನ ನೋಡಲು ಬಂದ ಭಕ್ತರಿಗೆ ಮಕರ ಜ್ಯೋತಿಯ ಮೂಲಕ ಪೊನ್ನಂಬಲಮೇಡುವಿನಲ್ಲಿ ದರ್ಶನ ನೀಡುತ್ತೇನೆ. ಇನ್ನು ಮುಂದೆ ನನ್ನನ್ನು ನನ್ನ ಭಕ್ತರೆಲ್ಲರೂ ಅಯ್ಯಪ್ಪ ಎಂದು ಕರೆಯುತ್ತಾರೆ” ಎಂದು ನುಡಿಯುತ್ತಾರೆ. ಈ ಬಗ್ಗೆ ಅನೇಕ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More