Home> India
Advertisement

ಹಿಜಾಬ್ ವಿವಾದಕ್ಕೆ ಅಲ್ ಖೈದಾ ಎಂಟ್ರಿ, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿಗೆ ಶಬ್ಬಾಸ್ ಗಿರಿ


ಕರ್ನಾಟಕ ಹಿಜಾಬ್ ವಿವಾದಕ್ಕೆ ಇದೀಗ ಅಲ್ ಖೈದಾ ಎಂಟ್ರಿಯಾಗಿದೆ.  ಭಯೋತ್ಪಾದಕ ಸಂಘಟನೆಯ ನಾಯಕ ಅಯ್ಮಾನ್ ಅಲ್ ಜವಾಹಿರಿ (Ayman Al Zawahiri), ಹಿಜಾಬ್ ನಿಷೇಧದ ವಿರುದ್ಧ ಧ್ವನಿ ಎತ್ತುವಂತೆ ಭಾರತೀಯ ಮುಸ್ಲಿಮರಿಗೆ ಕರೆ ನೀಡಿದ್ದಾನೆ. 

ಹಿಜಾಬ್ ವಿವಾದಕ್ಕೆ ಅಲ್ ಖೈದಾ ಎಂಟ್ರಿ, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿಗೆ  ಶಬ್ಬಾಸ್ ಗಿರಿ

ಬೆಂಗಳೂರು : ಕರ್ನಾಟಕ ಹಿಜಾಬ್ ವಿವಾದಕ್ಕೆ ಇದೀಗ ಅಲ್ ಖೈದಾ (AlQaida)ಎಂಟ್ರಿಯಾಗಿದೆ.  ಭಯೋತ್ಪಾದಕ ಸಂಘಟನೆಯ ನಾಯಕ ಅಯ್ಮಾನ್ ಅಲ್ ಜವಾಹಿರಿ (Ayman Al Zawahiri), ಹಿಜಾಬ್ ನಿಷೇಧದ ವಿರುದ್ಧ ಧ್ವನಿ ಎತ್ತುವಂತೆ ಭಾರತೀಯ ಮುಸ್ಲಿಮರಿಗೆ ಕರೆ ನೀಡಿದ್ದಾನೆ.  'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿದ ಗುಂಪಿನ ಎದುರು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಕರ್ನಾಟಕದ ವಿದ್ಯಾರ್ಥಿ ಮುಸ್ಕಾನ್ ಖಾನ್ ಅವರನ್ನು ಶ್ಲಾಘಿಸುವ 9 ನಿಮಿಷಗಳ ವೀಡಿಯೊವನ್ನು ಜವಾಹಿರಿ ಬಿಡುಗಡೆ ಮಾಡಿದ್ದಾನೆ.  

 ನೋಬಲ್ ವುಮೆನ್ ಆಫ್ ಇಂಡಿಯಾ  ಎಂದ ಉಗ್ರ : 

ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿ (Ayman Al Zawahiri) ಕೂಡ  ಮುಸ್ಕಾನ್ ನನ್ನು ಹೊಗಳಿ  ಕವನ ಓದಿದ್ದಾನೆ . ಜವಾಹಿರಿಯ ಈ ವೀಡಿಯೊವನ್ನು ಅಲ್ ಖೈದಾದ ಅಧಿಕೃತ ಶಬಾಬ್ ಮೀಡಿಯಾ ಬಿಡುಗಡೆ ಮಾಡಿದೆ.  ಇದನ್ನೂ SITE ಇಂಟೆಲಿಜೆನ್ಸ್ ಗ್ರೂಪ್ ಕೂಡಾ ದೃಢಪಡಿಸಿದೆ. ಒಸಾಮಾ ಬಿನ್ ಲಾಡೆನ್ ನಂತರ ಅಲ್ ಖೈದಾ ನಾಯಕನಾದ ಜವಾಹಿರಿ ಕರ್ನಾಟಕ ಕಾಲೇಜು ವಿದ್ಯಾರ್ಥಿ ಮುಸ್ಕಾನ್ ಖಾನ್ ನನ್ನು (Muskan Khan) ಮುಕ್ತಕಂಠದಿಂದ ಹೊಗಳಿದ್ದಾನೆ. ಬಿಡುಗಡೆ ಮಾಡಿದ ವಿಡಿಯೋಗೆ ನೋಬಲ್ ವುಮನ್ ಆಫ್ ಇಂಡಿಯಾ ಎಂದು ಶೀರ್ಷಿಕೆ ನೀಡಲಾಗಿದೆ. 

ಇದನ್ನೂ ಓದಿ  : BJP Foundation Day:ಇಂದು ಬಿಜೆಪಿ 42ನೇ ಸಂಸ್ಥಾಪನಾ ದಿನ: ದಿನದ ಪ್ರಾಮುಖ್ಯತೆ ತಿಳಿಸಿದ ಪ್ರಧಾನಿ

ಸಾಮಾಜಿಕ ಮಾಧ್ಯಮದ ಮೂಲಕ ಮುಸ್ಕಾನ್ ಬಗ್ಗೆ ತಿಳಿದಿದೆ ಎಂದು ವಿಡಿಯೋದಲ್ಲಿ ಜವಾಹಿರಿ ಹೇಳಿದ್ದಾನೆ. ಈ ಸಹೋದರಿ ತಕ್ಬೀರ್ ಧ್ವನಿಯನ್ನು ಎತ್ತುವ ಮೂಲಕ ನನ್ನ ಹೃದಯವನ್ನು ಗೆದ್ದಿದ್ದಾಳೆ ಎಂದಿದ್ದಾನೆ. ಅಲ್ಲದೆ, ಮುಸ್ಕಾನ್ ಹೊಗಳಿಕೆಯಲ್ಲಿ ಕವನ ಓದುತ್ತಿರುವುದಾಗಿಯೂ  ಹೇಳಿ ಕವನ  ಯಾಚಿಸಿದ್ದಾನೆ. ಅಲ್ಲದೆ ಕವಿತೆಯನ್ನು ಓದಿದ ನಂತರ, ಹಿಜಾಬ್ (Hijab) ಅನ್ನು ನಿಷೇಧಿಸಿದ  ದೇಶಗಳ ಮೇಲೆ ವಾಗ್ದಾಳಿ ನಡೆಸಿದ್ದಾನೆ. ಈ ರಾಷ್ಟ್ರಗಳು ಪಾಶ್ಚಿಮಾತ್ಯ ದೇಶಗಳ ಮಿತ್ರರಾಷ್ಟ್ರಗಳು ಎಂದು ಕರೆದಿದ್ದಾನೆ. 

ನವೆಂಬರ್ ನಂತರ ಜವಾಹಿರಿಯ ಮೊದಲ ವೀಡಿಯೊ : 
ಕಳೆದ ವರ್ಷ ನವೆಂಬರ್ ನಂತರ ಜವಾಹಿರಿ ಮಾಡಿರುವ ಮೊದಲ ವೀಡಿಯೊ ಇದಾಗಿದೆ.  ಈ ವರ್ಷದ ಜನವರಿಯಲ್ಲಿ ಕರ್ನಾಟಕದಲ್ಲಿ ಹಿಜಾಬ್ ವಿವಾದ ಶುರುವಾಗಿತ್ತು. ನಂತರ ಹಿಜಾಬ್ ಪರ ವಿರೋಧವಾಗಿ ದೇಶಾದ್ಯಂತ ಪ್ರತಿಭಟನೆಗಳು ನಡೆದವು (Hijab Contraversy). ಈ ಪ್ರಕರಣ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ತೀರ್ಪು ನೀಡಿತ್ತು.  

ಇದನ್ನೂ ಓದಿ  : Viral Video: ಮಂಟಪದಲ್ಲಿಯೇ ಇದ್ದಕ್ಕಿದ್ದಂತೆ ಅಳಲು ಶುರುಮಾಡಿದ ವರ, ವಧು ಮಾಡಿದ್ದೇನು..?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More