Home> India
Advertisement

ಹರಿಯಾಣ ವಿಧಾನಸಭಾ ಚುನಾವಣೆಗೆ 2-3 ದಿನಗಳಲ್ಲಿ ಬಿಜೆಪಿ ಟಿಕೆಟ್ ಫೈನಲ್

ಬಿಜೆಪಿ ಟಿಕೆಟ್‌ಗಾಗಿ ಸಾಕಷ್ಟು ಸ್ಪರ್ಧಿಗಳು ಇದ್ದಾರೆ ಎಂದು ಹರಿಯಾಣ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಬರಲಾ ಹೇಳಿದ್ದಾರೆ.

ಹರಿಯಾಣ ವಿಧಾನಸಭಾ ಚುನಾವಣೆಗೆ 2-3 ದಿನಗಳಲ್ಲಿ ಬಿಜೆಪಿ ಟಿಕೆಟ್ ಫೈನಲ್

ಪಂಚಕುಲ: ಮುಂದಿನ 2-3 ದಿನಗಳಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯ 2019 ರ ಅಭ್ಯರ್ಥಿಗಳ ಟಿಕೆಟ್‌ಗಳನ್ನು ರಾಜ್ಯ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಅಂತಿಮಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಹರಿಯಾಣ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾ ಅವರ ಪ್ರಕಾರ, ಪಕ್ಷದಲ್ಲಿ ಟಿಕೆಟ್ ವಿತರಣೆಗೆ ಸಂಬಂಧಿಸಿದಂತೆ ನಿರಂತರ ಸಭೆಗಳು ನಡೆಯುತ್ತಿವೆ. ಪಕ್ಷವು ನವರಾತ್ರಿಯಲ್ಲಿ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣಾ ಕುರಿತು ಹರಿಯಾಣ ಚುನಾವಣಾ ಸಮಿತಿಯ ಚರ್ಚೆ ನಡೆಯುತ್ತಿದೆ ಎಂದು ಡಾ. ಅನಿಲ್ ಜೈನ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಟಿಕೆಟ್‌ಗಾಗಿ ಸಾಕಷ್ಟು ಸ್ಪರ್ಧಿಗಳು ಇದ್ದಾರೆ ಎಂದು ಹರಿಯಾಣ ರಾಜ್ಯ ಘಟಕದ ಅಧ್ಯಕ್ಷ ಸುಭಾಷ್ ಬರಲಾ ಹೇಳಿದ್ದಾರೆ.

ಅಕ್ಟೋಬರ್ 21 ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹರಿಯಾಣ ವಿಧಾನಸಭಾ ಚುನಾವಣೆಗೆ ಟಿಕೆಟ್ ಬಯಸುವ ಅಭ್ಯರ್ಥಿಗಳಿಗೆ ಕಾಂಗ್ರೆಸ್ 10 ಪಾಯಿಂಟ್ ಮಾನದಂಡಗಳನ್ನು ನೀಡಿದೆ. ಮಾನದಂಡಗಳ ಪ್ರಕಾರ, ಖಾದಿ ಧರಿಸುವವರು, ಮದ್ಯಪಾನ ಮಾಡದವರು, ಗಾಂಧಿ ಜೀವನ ವಿಧಾನವನ್ನು ಅನುಸರಿಸುವವರು, ಜಾತ್ಯತೀತ ಮೌಲ್ಯಗಳನ್ನು ನಂಬುವವರು ಅಥವಾ ಜಾತಿ, ಧರ್ಮ ಅಥವಾ ಧರ್ಮದ ಆಧಾರದ ಮೇಲೆ ಖಾಸಗಿ ಅಥವಾ ಸಾರ್ವಜನಿಕ ಜೀವನದಲ್ಲಿ ತಾರತಮ್ಯ ಮಾಡದವರು ಅಭ್ಯರ್ಥಿ ಆಗಬಹುದು ಎನ್ನಲಾಗಿದೆ. ಕಾಂಗ್ರೆಸ್ ಹೊರಡಿಸಿದ ಅರ್ಜಿಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಪಕ್ಷದ ಮಾರ್ಗಗಳು ಮತ್ತು ನೀತಿಗಳಿಗೆ ವಿರುದ್ಧವಾಗಿ ಹೋಗುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ.

ಖಾದಿ ಒಂದು ಜೀವನಶೈಲಿ ಮತ್ತು ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಗಾಂಧಿವಾದಿ ಕಲ್ಪನೆಯನ್ನು ಅನುಸರಿಸಬೇಕು ಎಂದು ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಅಶೋಕ್ ತನ್ವಾರ್ ಹೇಳಿದ್ದಾರೆ. 

Read More