Home> India
Advertisement

Gyanvapi mosque: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಯ್ತು ಶಿವಲಿಂಗ!

ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಜ್ಞಾನವಾಪಿ ಮಸೀದಿ ಹೊಂದಿಕೊಂಡಿದೆ. ಈ ಮಸೀದಿಯ ಗೋಡೆ ಮೇಲಿರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಮಾಡಲು ಅನುಮತಿ ನೀಡಬೇಕೆಂದು ಕೋರಿ ದೆಹಲಿ ಮೂಲದ ಐವರು ಮಹಿಳೆಯರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

Gyanvapi mosque: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಯ್ತು ಶಿವಲಿಂಗ!

ಉತ್ತರಪ್ರದೇಶದ ಜ್ಞಾನವಾಪಿ ಮಸೀದಿಯ ಪರಿಶೀಲನೆ ನಡೆದಿದ್ದು, ಶಿವಲಿಂಗ ಪತ್ತೆಯಾಗಿದೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದೆ. ಈ ಶಿವಲಿಂಗದ ರಕ್ಷಣೆಗಾಗಿ ಅಲ್ಲಿನ ಸಿವಿಲ್‌ ಕೋರ್ಟ್‌ ಮೊರೆ ಹೋಗುವುದಾಗಿ ಹಿಂದೂ ಸಂಘಟನೆ ಪರ ವಕೀಲ ವಿಷ್ಣು ಜೈನ್  ಹೇಳಿದ್ದಾರೆ.  

ಇದನ್ನು ಓದಿ: Gyanvapi mosque :ಬಿಗಿ ಭದ್ರತೆಯೊಂದಿಗೆ ನಡೆದ ವಿವಾದಿತ ಜ್ಞಾನವಾಪಿ ಮಸೀದಿ ಸಮೀಕ್ಷೆ

ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಜ್ಞಾನವಾಪಿ ಮಸೀದಿ ಹೊಂದಿಕೊಂಡಿದೆ. ಈ ಮಸೀದಿಯ ಗೋಡೆ ಮೇಲಿರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಮಾಡಲು ಅನುಮತಿ ನೀಡಬೇಕೆಂದು ಕೋರಿ ದೆಹಲಿ ಮೂಲದ ಐವರು ಮಹಿಳೆಯರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಸದ್ಯ ಈ ಪ್ರಕರಣ ಸದ್ಯ ಸುಪ್ರೀಂ ಕೋರ್ಟ್‌ ಕೈಯಲ್ಲಿದ್ದು, ಇಂದು ಭಾರೀ ಭದ್ರತೆಯ ಜೊತೆಗೆ ಎರಡನೇ ದಿನ  ಪರಿಶೀಲನೆ ಮುಂದುವರೆದಿದೆ. 

ಜ್ಞಾನವಾಪಿ ಮಸೀದಿಯನ್ನು ಸಮೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರರು ಹೇಳಿದರೆ, ಮುಸಲ್ಮಾನರು ಇಲ್ಲ ಎಂದು ಹೇಳುತ್ತಿದ್ದಾರೆ. ಸದ್ಯ ಈ ವಿಚಾರದಲ್ಲಿ ಗೊಂದಲಗಳಿದ್ದರೂ ಸಹ ವಕೀಲ  ವಿಷ್ಣು ಜೈನ್ ಹೇಳಿದ್ದು ಹೀಗೆ: "ಜ್ಞಾನವಾಪಿ ಮಸೀದಿಯಲ್ಲಿರುವ ಬಾವಿಯಲ್ಲಿ ಶಿವಲಿಂಗ ಪತ್ತೆಯಾಗಿದೆ.  ಶಿವಲಿಂಗ ರಕ್ಷಣೆಗಾಗಿ ಸಿವಿಲ್ ಕೋರ್ಟ್‌ಗೆ ಹೋಗುತ್ತಿದ್ದೇನೆ. ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ. ಶಿವನ ಮುಂದೆ ನಂದಿಯ ವಿಗ್ರಹವೂ ಇದೆ" ಎಂದು ಹೇಳಿದರು.  

ಇದೇ ಸಂದರ್ಭದಲ್ಲಿ ಸೋಹನ್‌ಲಾಲ್ ಅವರು ಮಾತನಾಡಿ, "ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ. ಈ ವೇಳೆ ʼಹರಹರ ಮಹಾದೇವ್ʼ ಎಂಬ ಘೋಷಗಳು ಮೊಳಗಿದವು. ಜನರು ಸಂತೋಷದಿಂದ ಕುಣಿಯಲು ಪ್ರಾರಂಭಿಸಿದರು" ಎಂದರು.

ಏನಿದು ಪ್ರಕರಣ: 
ಉತ್ತರಪ್ರದೇಶದ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯೊಳಗೆ ಹಿಂದೂ ದೇವತೆಗಳ ಅಸ್ತಿತ್ವವಿದೆ ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಾರಣಾಸಿಯ ಸಿವಿಲ್‌ ಕೋರ್ಟ್‌ ಪರಿಶೀಲನೆ ನಡೆಸುವಂತೆ ಆದೇಶಿಸಿತ್ತು. ಅಷ್ಟೇ ಅಲ್ಲದೆ ಸಾಕ್ಷಿಗಳನ್ನು ಖಚಿತವಾಗಿ ನೋಡಲು ವಿಡಿಯೋ ಚಿತ್ರೀಕರಣ ಮಾಡುವಂತೆ ನಿರ್ದೇಶಿಸಿತ್ತು. ಆದರೆ ಮಸೀದಿಯ ಸಮಿತಿಯು ವಿಡಿಯೋ ಚಿತ್ರೀಕರಣಕ್ಕೆ ವಿರೋಧ ವ್ಯಕ್ತಪಡಿಸಿತ್ತು.  

ಇದನ್ನು ಓದಿ: "ನನಗೆ ಮುಸ್ಲೀಂರ ಮತಗಳು ಬೇಡ, ಹಿಂದೂಗಳ ಮತಗಳಷ್ಟೇ ಸಾಕು"

ಈ ವಿಚಾರ ತಿಳಿಯುತ್ತಿದ್ದಂತೆ ಐವರು ಮಹಿಳೆಯರು ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ದೇವಸ್ಥಾನ ಸೇರಿದಂತೆ ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪ್ರತೀ ದಿನ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ನ್ಯಾಯಾಲಯದ ಮೆಟ್ಟಿಲೇರಿದರು. ಅರ್ಜಿಯನ್ನು ಪರಿಶೀಲನೆ ನಡೆಸಿದ ವಾರಣಾಸಿ ಸಿವಿಲ್‌ ಕೋರ್ಟ್‌ ಸಮೀಕ್ಷೆ ನಡೆಸಲು ಆದೇಶ ನೀಡಿದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More