Home> India
Advertisement

New Labor Laws ಜಾರಿಗೆ ಮುಂದಾದ ಕೇಂದ್ರ ಸರ್ಕಾರ, ನೌಕರರಿಗೆ ಸಿಗಲಿದೆ ಬಿಗ್ ಗಿಫ್ಟ್

ಹೊಸ ಕಾರ್ಮಿಕ ಸಂಹಿತೆ  (Labour Laws) ಅಡಿಯಲ್ಲಿ, ನಿಗದಿತ ಸಮಯಕ್ಕಿಂತ  15 ನಿಮಿಷ ಹೆಚ್ಚಿನ ಕೆಲಸ ಮಾಡಿದರೆ ಅಧಿಕಾವಧಿ ಎಂದು ಪರಿಗಣಿಸಲಾಗುತ್ತದೆ ಮತ್ತು ಕಂಪನಿಗಳು ಇದಕ್ಕಾಗಿ ತಮ್ಮ ಉದ್ಯೋಗಿಗಳಿಗೆ ಓವರ್ ಟೈಮ್  ಪಾವತಿಸಬೇಕಾಗುತ್ತದೆ.

New Labor Laws ಜಾರಿಗೆ ಮುಂದಾದ ಕೇಂದ್ರ ಸರ್ಕಾರ, ನೌಕರರಿಗೆ ಸಿಗಲಿದೆ ಬಿಗ್ ಗಿಫ್ಟ್

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಕಾರ್ಮಿಕ ಸಚಿವಾಲಯ ಸಿದ್ಧತೆ ನಡೆಸಿದೆ. ಅದನ್ನು ಅಂತಿಮಗೊಳಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಹೊಸ ನಿಯಮಗಳನ್ನು ಜಾರಿಗೆ ತಂದ ನಂತರ, ದೇಶದ ಕಾರ್ಮಿಕ ಮಾರುಕಟ್ಟೆಯಲ್ಲಿ ಹೊಸ ಸುತ್ತಿನ ಸುಧಾರಿತ ನಿಯಮಗಳು ಪ್ರಾರಂಭವಾಗುತ್ತವೆ. ಇದರೊಂದಿಗೆ ಹೊಸ ಕಾರ್ಮಿಕ ಕಾನೂನುಗಳಿಂದಾಗಿ ಉದ್ಭವಿಸಿರುವ ಅನುಮಾನಗಳನ್ನು ತೆಗೆದುಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ.

ನಿಗದಿತ ಸಮಯಕ್ಕಿಂತ 15 ನಿಮಿಷ ಹೆಚ್ಚಿನ ಕೆಲಸ ಮಾಡಿದರೆ ಓವರ್ ಟೈಮ್ ಎಂದು ಪರಿಗಣನೆ:

ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಹೊಸ ಕಾರ್ಮಿಕ ಸಂಹಿತೆ  (Labour Laws) ಅಡಿಯಲ್ಲಿ, ನಿಗದಿತ ಸಮಯಕ್ಕಿಂತ  15 ನಿಮಿಷ ಹೆಚ್ಚಿನ ಕೆಲಸ ಮಾಡಿದರೆ ಅಧಿಕಾವಧಿ ಎಂದು ಪರಿಗಣಿಸಲಾಗುತ್ತದೆ ಮತ್ತು ಕಂಪನಿಗಳು ಇದಕ್ಕಾಗಿ ತಮ್ಮ ಉದ್ಯೋಗಿಗಳಿಗೆ ಓವರ್ ಟೈಮ್  ಪಾವತಿಸಬೇಕಾಗುತ್ತದೆ. ಅಂದರೆ, ಕೆಲಸದ ಸಮಯ ಮುಗಿದ ನಂತರ, ನೀವು ಇನ್ನೂ 15 ನಿಮಿಷಗಳಿಗಿಂತ ಹೆಚ್ಚು ಕೆಲಸ ಮಾಡಿದರೆ, ಕಂಪನಿಯು ಅದಕ್ಕಾಗಿ ಹಣ ಪಾವತಿಸುತ್ತದೆ. ಹಳೆಯ ನಿಯಮಗಳ ಪ್ರಕಾರ, ಈ ಸಮಯದ ಮಿತಿ ಅರ್ಧ ಘಂಟೆ ಇತ್ತು.

ಇದನ್ನೂ ಓದಿ - Pension: ಕೇಂದ್ರ ಸರ್ಕಾರದ ನೌಕರರಿಗೆ, ಪಿಂಚಣಿದಾರರಿಗೆ 'ಭರ್ಜರಿ ಗುಡ್ ನ್ಯೂಸ್'..!

ಈ ತಿಂಗಳ ಅಂತ್ಯದ ವೇಳೆಗೆ ಪ್ರಕ್ರಿಯೆಗಳು ಪೂರ್ಣಗೊಳ್ಳುವ ನಿರೀಕ್ಷೆ :
ಈ ಕುರಿತಂತೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು ಹೊಸ ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದಂತೆ ಕಾರ್ಮಿಕ (Labour) ಸಚಿವಾಲಯವು ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸಿದೆ ಮತ್ತು ಈ ತಿಂಗಳ ಅಂತ್ಯದ ವೇಳೆಗೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತವೆ. ಇದರ ನಂತರ, ನಿಯಮಗಳನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ - ಈ ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಸಿಗುತ್ತಿದೆ ಎರಡು ಸಾವಿರದಿಂದ 2 ಲಕ್ಷದವರೆಗೆ ಸೌಲಭ್ಯ

ಪಿಎಫ್ (PF) ಮತ್ತು ಇಎಸ್ಐ ನಿಯಮಗಳು :
ಹೊಸ ಕಾನೂನಿನಲ್ಲಿ, ಎಲ್ಲಾ ಉದ್ಯೋಗಿಗಳಿಗೆ ಪಿಎಫ್  (PF) ಮತ್ತು ಇಎಸ್ಐನಂತಹ ಸೌಲಭ್ಯಗಳು ಸಿಗುವಂತೆ ಕಂಪನಿಗಳು ಖಚಿತಪಡಿಸಿಕೊಳ್ಳಬೇಕು. ಹೊಸ ನಿಯಮಗಳ ಪ್ರಕಾರ, ಯಾವುದೇ ಕಂಪನಿಯು ಗುತ್ತಿಗೆದಾರ ಅಥವಾ ಮೂರನೇ ವ್ಯಕ್ತಿಯ ಮೂಲಕ ಬಂದಿದೆ ಎಂದು ಹೇಳುವ ಮೂಲಕ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದಲ್ಲದೆ, ಒಪ್ಪಂದದಡಿಯಲ್ಲಿ ಅಥವಾ ಮೂರನೇ ವ್ಯಕ್ತಿಯಡಿಯಲ್ಲಿ ಕೆಲಸ ಮಾಡುವವರಿಗೆ ಪೂರ್ಣ ವೇತನ ಸಿಗುತ್ತದೆ, ಇದನ್ನು ಪ್ರಮುಖ ಉದ್ಯೋಗದಾತರು ಅಂದರೆ ಕಂಪನಿಗಳು ಖಚಿತಪಡಿಸಿಕೊಳ್ಳುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More