Home> India
Advertisement

ಖಾಸಗಿ ವಾಹನ ಚಾಲಕರಿಗೆ ಸಿಹಿ ಸುದ್ದಿ, ಇನ್ನು ಪಾವತಿಸಬೇಕಿಲ್ಲ ಟೋಲ್‌ ತೆರಿಗೆ

ಈಗ ವಾಣಿಜ್ಯ ವಾಹನಗಳಿಗೆ ಮಾತ್ರ  ಈ ರಾಜ್ಯದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಟೋಲ್ ತೆರಿಗೆಗೆ ಸಂಬಂಧಿಸಿದ ನೀತಿಯನ್ನು ಬದಲಾಯಿಸಿದ ನಂತರ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ. 

ಖಾಸಗಿ ವಾಹನ ಚಾಲಕರಿಗೆ ಸಿಹಿ ಸುದ್ದಿ,  ಇನ್ನು ಪಾವತಿಸಬೇಕಿಲ್ಲ ಟೋಲ್‌ ತೆರಿಗೆ

ನವದೆಹಲಿ : ಖಾಸಗಿ ವಾಹನಗಳ ಚಾಲಕರಿಗೆ ದೊಡ್ಡ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ. ಮಧ್ಯಪ್ರದೇಶ ಸರ್ಕಾರವು (MP Government)ರಾಜ್ಯದಲ್ಲಿ ಖಾಸಗಿ ವಾಹನಗಳಿಗೆ ಟೋಲ್ ತೆರಿಗೆಯನ್ನು ಮನ್ನಾ ಮಾಡಲು ನಿರ್ಧರಿಸಿದೆ (Toll Tax Waive Off). ಈಗ ವಾಣಿಜ್ಯ ವಾಹನಗಳಿಗೆ ಮಾತ್ರ  ಈ ರಾಜ್ಯದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಟೋಲ್ ತೆರಿಗೆಗೆ ಸಂಬಂಧಿಸಿದ ನೀತಿಯನ್ನು ಬದಲಾಯಿಸಿದ ನಂತರ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ.  ರಾಜ್ಯದಲ್ಲಿ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಸಾರ್ವಜನಿಕರಿಗೆ ಈ ಪ್ರಯೋಜನವನ್ನು ನೀಡಿದೆ ಎಂದು ಹೇಳಲಾಗುತ್ತಿದೆ. 

ಇನ್ನು ಪಾವತಿಸಬೇಕಾಗಿಲ್ಲ ಟೋಲ್ : 

ವಾಣಿಜ್ಯ ವಾಹನಗಳಾಗಿ ಬಳಸದ ಎಲ್ಲಾ ವಾಹನಗಳನ್ನು ಟೋಲ್ ತೆರಿಗೆ ರಿಯಾಯಿತಿ ಅಡಿಯಲ್ಲಿ ಅನುಮತಿಸಲಾಗಿದೆ (Toll Tax Waive Off)
. ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು ಇತ್ತೀಚೆಗೆ ಈ ನೀತಿಯನ್ನು ಬದಲಾಯಿಸಿದೆ. ಆಪರೇಟ್ ಅಂಡ್ ಟ್ರಾನ್ಸ್ಫರ್ ಅಡಿಯಲ್ಲಿ ನಿರ್ಮಿಸಲಾದ ಎಲ್ಲಾ ರಸ್ತೆಗಳಲ್ಲಿಯೂ ಇನ್ನು ಮುಂದೆ ಟೋಲ್ ಸಂಗ್ರಹಿಸುವಂತಿಲ್ಲ (toll Tax). ಬಿಲ್ಡ್ ಆಪರೇಟ್ ಮತ್ತು ಟ್ರಾನ್ಸ್‌ಪೋರ್ಟ್ ನೀತಿಯ ಅಡಿಯಲ್ಲಿ, ಏಜೆನ್ಸಿಗಳು ರಸ್ತೆಯನ್ನು ನಿರ್ಮಿಸುತ್ತವೆ ಮತ್ತು ಅದಕ್ಕೆ ಟೋಲ್ ಸಂಗ್ರಹಿಸುತ್ತವೆ. ಇದಲ್ಲದೇ ರಸ್ತೆ ನಿರ್ಮಾಣದ ಮೊತ್ತವನ್ನು ರಾಜ್ಯ ಸರಕಾರವು ಈ ಏಜೆನ್ಸಿಗಳಿಗೆ ಸುಲಭ ಕಂತುಗಳಲ್ಲಿ ಪಾವತಿಸುತ್ತದೆ. ಈ ಎರಡು ರೀತಿಯ ರಸ್ತೆಗಳಲ್ಲಿ ಖಾಸಗಿ ಚಾಲಕರಿಂದ ಸರ್ಕಾರ ತೆರಿಗೆ ಸಂಗ್ರಹಿಸುವುದಿಲ್ಲ.

ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿರುವ 5000 ವಿದ್ಯಾರ್ಥಿಗಳ ವೆಚ್ಚವನ್ನು ಭರಿಸಲಿರುವ ತಮಿಳುನಾಡು..!

200 ರಸ್ತೆಗಳ ಸಮೀಕ್ಷೆ :
ಈ ನೀತಿಯನ್ನು ಬದಲಾಯಿಸುವ ಮೊದಲು, ಮಧ್ಯಪ್ರದೇಶ ಸರ್ಕಾರವು PWD ಅಂದರೆ ಲೋಕೋಪಯೋಗಿ ಇಲಾಖೆಯಿಂದ ರಾಜ್ಯದ 200 ರಸ್ತೆಗಳ ಸಮೀಕ್ಷೆ ನಡೆಸಿತ್ತು. ಒಟ್ಟಾರೆ ಟೋಲ್ ತೆರಿಗೆಯಲ್ಲಿ ಶೇ.80ರಷ್ಟು ವಾಣಿಜ್ಯ ವಾಹನಗಳಿಂದ ಬರುತ್ತಿದ್ದು, ಇದರಲ್ಲಿ ಖಾಸಗಿ ವಾಹನಗಳ ಕೊಡುಗೆ ಶೇ.20ರಷ್ಟು ಮಾತ್ರ ಎಂದು ಸಮೀಕ್ಷೆ ಬಹಿರಂಗಪಡಿಸಿದೆ (Survey on road) . ಈ ಮೊತ್ತ ಹಾಗೂ ಅದನ್ನು ಮನ್ನಾ ಮಾಡುವುದರಿಂದ ಸಾರ್ವಜನಿಕರಿಗೆ ಆಗುವ ಲಾಭವನ್ನು ಗಮನದಲ್ಲಿಟ್ಟುಕೊಂಡು,  ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಈ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರಕ್ಕೂ ಮುನ್ನ ಪಿಡಬ್ಲ್ಯುಡಿ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ಖಾಸಗಿ ವಾಹನಗಳ ಟೋಲ್ ತೆರಿಗೆಯನ್ನು ಮನ್ನಾ ಮಾಡುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

ಇದನ್ನೂ ಓದಿ: Road Rage Case Verdict Review: ನವಜೋತ್ ಸಿಂಗ್ ಸಿಧುಗೆ ಎದುರಾಯ್ತು ಕಂಟಕ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More