Home> India
Advertisement

Google Mapsನಲ್ಲಿ ಶೀಘ್ರದಲ್ಲಿಯೇ ಬರಲಿದೆ ಈ ವೈಶಿಷ್ಟ್ಯ, ಕೊರೊನಾ ಕಾಲದಲ್ಲಿ ಬಳಕೆದಾರರಿಗೆ ನೆಮ್ಮದಿ

ಗೂಗಲ್ ಪ್ರಸ್ತುತ ಪಡಿಸಲಿರುವ ಈ ವೈಶಿಷ್ಟ್ಯ ಖಾಸಗಿ ಹಾಗೂ ಸಾರ್ವಜನಿಕ ವಾಹನಗಳ ಮೂಲಕ ಸಂಚರಿಸುವಾಗ ಡ್ರೈವಿಂಗ್ ರೂಟ್ ಗಳ ಮೇಲೆ ಬರುವ Covid-19 ಚೆಕ್ ಪಾಯಿಂಟ್ ಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಮಾಸ್ಕ್ ಧರಿಸಲು ಸಲಹೆ ಕೂಡ ನೀಡುತ್ತದೆ.

Google Mapsನಲ್ಲಿ ಶೀಘ್ರದಲ್ಲಿಯೇ ಬರಲಿದೆ ಈ ವೈಶಿಷ್ಟ್ಯ, ಕೊರೊನಾ ಕಾಲದಲ್ಲಿ ಬಳಕೆದಾರರಿಗೆ ನೆಮ್ಮದಿ

ನವದೆಹಲಿ: ಕೊರೊನಾ ಕಾಲದಲ್ಲಿ ಗೂಗಲ್ ತನ್ನ ಗೂಗಲ್ ಮ್ಯಾಪ್ಸ್ ನಲ್ಲಿ ವಿಶೇಷ ವೈಶಿಷ್ಟ್ಯವೊಂದನ್ನು ಸೇರಿಸಲು ಹೊರಟಿದೆ. ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು ಕೊರೊನಾ ವೈರಸ್ ಗೆ ಸಂಬಂಧಿಸಿದ ಟ್ರಾವೆಲ್ ನಿರ್ಬಂಧನೆಗಳ ಮಾಹಿತಿ ಪಡೆಯಬಹುದಾಗಿದೆ. ಇದೊಂದು ರೀತಿಯ ಅಲರ್ಟ್ ವೈಶಿಷ್ಟ್ಯವಾಗಿರಲಿದ್ದು, ಜನಸಂದಣಿ ಹೊಂದಿರುವ ಪಬ್ಲಿಕ್ ಟ್ರಾನ್ಸ್ಪೋರ್ಟ್ ಹಾಗೂ ಲಾಕ್ ಡೌನ್ ಕಾರಣ ಬಂದ್ ಆಗಿರುವ ರೋಡ್ ಕುರಿತು ಅಲರ್ಟ್ ನೀಡುತ್ತದೆ.

ಮೂಲಗಳು ನೀಡಿರುವ ಮಾಹಿತಿಗಳ ಪ್ರಕಾರ, ಗೂಗಲ್ ಪ್ರಸ್ತುತ ಪಡಿಸಲಿರುವ ಈ ವೈಶಿಷ್ಟ್ಯ ಖಾಸಗಿ ಹಾಗೂ ಸಾರ್ವಜನಿಕ ವಾಹನಗಳ ಮೂಲಕ ಸಂಚರಿಸುವಾಗ ಡ್ರೈವಿಂಗ್ ರೂಟ್ ಗಳ ಮೇಲೆ ಬರುವ Covid-19 ಚೆಕ್ ಪಾಯಿಂಟ್ ಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಮಾಸ್ಕ್ ಧರಿಸಲು ಸಲಹೆ ಕೂಡ ನೀಡುತ್ತದೆ.

ಈಗಾಗಲೇ ಗೂಗಲ್ ಮ್ಯಾಪ್ಸ್ ಅರ್ಜೆಂಟಿನ, ಆಸ್ಟ್ರೇಲಿಯಾ, ಬೆಲ್ಜಿಯಂ, ಕೊಲಂಬಿಯಾ, ಫ್ರಾನ್ಸ್, ಭಾರತ, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ಸ್ಪೇನ್, ಥೈಲ್ಯಾಂಡ್, ಯುನೈಟೆಡ್ ಕಿಂಗ್ ಡಂ ಹಾಗೂ ಅಮೇರಿಕಾಗಳಲ್ಲಿ ಅಲರ್ಟ್ ಸೌಲಭ್ಯ ಆರಂಭಿಸಿದೆ. ಶೀಘ್ರದಲ್ಲಿಯೇ ಈ ವೈಶಿಷ್ಟ್ಯವನ್ನೂ ಕೂಡ ಕಂಪನಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗುತ್ತಿದೆ.

ಗೂಗಲ್ ಮ್ಯಾಪ್ಸ್ ನ ಈ ಹೊಚ್ಚ ಹೊಸ ಸೌಲಭ್ಯ ಅಂಡ್ರಾಯಿಡ್ ಹಾಗೂ ಐಓಎಸ್ ಬಳಕೆದಾರರು ಪಡೆಯಬಹುದು.  ಇದಕ್ಕೂ ಮೊದಲು ಗೂಗಲ್ ತನ್ನ ಆಪ್ ನಲ್ಲಿ ವೀಲ್ ಚೇರ್ ಸೌಲಭ್ಯವಿರುವ ಸ್ಥಾನಗಳ ಬಗ್ಗೆಯೂ ಕೂಡ ಮಾಹಿತಿ ಸೇರಿಸಿತ್ತು. ಇದರಿಂದ ಜನರಿಗೆ ಅವರ ಯಾತ್ರೆಯ ವೇಳೆ ಸುಲಭವಾಗಿ ನೆರವು ಸಿಗುತ್ತಿದೆ.

Read More