Home> India
Advertisement

ಗುಡ್ ನ್ಯೂಸ್: ಈ ವರ್ಷವೂ ಹೆಚ್ಚಾಗಲಿದೆ ವೇತನ

ಅನೇಕ ಪ್ರಸಿದ್ಧ ಕಂಪನಿಗಳು ಅಪ್ರೈಸಲ್ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.
 

ಗುಡ್ ನ್ಯೂಸ್: ಈ ವರ್ಷವೂ ಹೆಚ್ಚಾಗಲಿದೆ ವೇತನ

ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ಮತ್ತು ಲಾಕ್‌ಡೌನ್ (Lockdown) ಕಾರಣದಿಂದಾಗಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ಈ ವರ್ಷ ತಮ್ಮ ಹೆಚ್ಚಾಗುವುದಿಲ್ಲ ಎಂದು ಭಾವಿಸುತ್ತಿದ್ದಾರೆ. ಎಲ್ಲವೂ ನಿಶ್ಚಲವಾಗಿರುವುದರಿಂದ ಮತ್ತು ಸುಮಾರು ನಾಲ್ಕು ತಿಂಗಳುಗಳವರೆಗೆ ವ್ಯಾಪಾರ-ವಹಿವಾಟು ನಡೆಯದ ಕಾರಣ ವೇತನ ಹೆಚ್ಚಳ ಅಸಾಧ್ಯ ಎಂಬ ಭಯವೂ ಇತ್ತು. ಆದರೆ ಈ ಮಧ್ಯೆ ಒಂದು ಒಳ್ಳೆಯ ಸುದ್ದಿ ಬಂದಿದೆ. ಈ ವರ್ಷವೂ ಕಾರ್ಮಿಕರ ವೇತನ ಹೆಚ್ಚುತ್ತಿದೆ. ಅನೇಕ ಪ್ರಸಿದ್ಧ ಕಂಪನಿಗಳು ಅಪ್ರೈಸಲ್ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ.

ದೇಶದ ಎಲ್ಲಾ ಖಾಸಗಿ ಬ್ಯಾಂಕುಗಳಾದ ಐಸಿಐಸಿಐ ಬ್ಯಾಂಕ್ (ICICI Bank), ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಮತ್ತು ಆಕ್ಸಿಸ್ ಬ್ಯಾಂಕ್ (Axis Bank)  ತಮ್ಮ ಉದ್ಯೋಗಿಗಳಿಗೆ ವೇತನ ಹೆಚ್ಚಳ ಘೋಷಿಸಿವೆ. ಲಾಕ್‌ಡೌನ್ ಮತ್ತು ಕಡಿಮೆ ವ್ಯವಹಾರದ ಹೊರತಾಗಿಯೂ ಈ ಎಲ್ಲಾ ಬ್ಯಾಂಕುಗಳು ಈ ವರ್ಷ ತಮ್ಮ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಹೆಚ್ಚಳ ಘೋಷಿಸಿವೆ. ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ತನ್ನ ಉದ್ಯೋಗಿಗಳು ಮತ್ತು ಅಧಿಕಾರಿಗಳಿಗೆ 8% ಹೆಚ್ಚಳವನ್ನು ಘೋಷಿಸಿದೆ.

ವಾಹನ ವಲಯದಲ್ಲೂ ವೇತನ ಹೆಚ್ಚಳ:
ಕಳೆದ ತ್ರೈಮಾಸಿಕದಲ್ಲಿ ಕಾರು ತಯಾರಕ ಕಂಪನಿಗಳಿಗೆ ದೊಡ್ಡ ನಷ್ಟವಾಗಿದೆ. ಇದರ ಹೊರತಾಗಿಯೂ ಈ ಆಟೋ ಕಂಪನಿಗಳು ತಮ್ಮ ಉದ್ಯೋಗಿಗಳ ಸ್ಥೈರ್ಯವನ್ನು ಹೆಚ್ಚಿಸಲು ಸಂಬಳವನ್ನು ಹೆಚ್ಚಿಸಲು ನಿರ್ಧರಿಸಿದೆ. ಲಭ್ಯವಾದ ಮಾಹಿತಿಯ ಪ್ರಕಾರ, ಮಾರುತಿ ಸುಜುಕಿ ತನ್ನ ನೌಕರರು ಮತ್ತು ಅಧಿಕಾರಿಗಳ ವೇತನವನ್ನು ಆಗಸ್ಟ್‌ನಲ್ಲಿ ಹೆಚ್ಚಿಸುತ್ತದೆ. ಆದಾಗ್ಯೂ ಈ ವರ್ಷ ಮಂದಗತಿಯನ್ನು ಗಮನಿಸಿದರೆ, ವೇತನ ಹೆಚ್ಚಳವು ಹಿಂದಿನ ವರ್ಷಕ್ಕಿಂತ ಕಡಿಮೆಯಿರುತ್ತದೆ. ಮತ್ತೊಂದೆಡೆ ಇತ್ತೀಚೆಗೆ ಪ್ರಾರಂಭಿಸಲಾದ ಕಂಪನಿಗಳಾದ ಕೆಐಎ ಮೋಟಾರ್ಸ್ ಮತ್ತು ಜಿಎಂ ಮೋಟಾರ್ಸ್ ಈಗಾಗಲೇ ತಮ್ಮ ಸಂಬಳವನ್ನು ಹೆಚ್ಚಿಸಿವೆ.

ಲಾಕ್‌ಡೌನ್ ಕಾರಣದಿಂದಾಗಿ ಎಲ್ಲಾ ಪ್ರಮುಖ ರೇಟಿಂಗ್ ಏಜೆನ್ಸಿಗಳು ದೇಶದಲ್ಲಿ ಆರ್ಥಿಕ ಕುಸಿತದ ಸಾಧ್ಯತೆಯನ್ನು ವ್ಯಕ್ತಪಡಿಸಿವೆ. ಕಳೆದ ನಾಲ್ಕು ತಿಂಗಳಲ್ಲಿ ಎಲ್ಲವನ್ನೂ ಮುಚ್ಚಿದ್ದರಿಂದ ಅನೇಕ ಕಂಪನಿಗಳು ಸಂಬಳ ಹೆಚ್ಚಿಸುವ ಪ್ರಸ್ತಾಪವನ್ನು ಮುಂದಿನ ವರ್ಷಕ್ಕೆ ಮುಂದೂಡಿವೆ.

Read More