Home> India
Advertisement

ಕಾಶ್ಮೀರಿ ಸೇಬು ಬೆಳೆಗಾರರಿಗೆ ಬರಲಿದೆ 'ಅಚ್ಚೇ ದಿನ್'!

ರಾಜ್ಯದಲ್ಲಿ ಸೇಬು ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ಮೋದಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಇದರ ಅಡಿಯಲ್ಲಿ ಸರ್ಕಾರವು ನೇರವಾಗಿ 12 ಲಕ್ಷ ಮೆಟ್ರಿಕ್ ಟನ್ ಸೇಬುಗಳನ್ನು ರೈತರಿಂದ ಖರೀದಿಸಲು ನಿರ್ಧರಿಸಿದೆ.

ಕಾಶ್ಮೀರಿ ಸೇಬು ಬೆಳೆಗಾರರಿಗೆ ಬರಲಿದೆ 'ಅಚ್ಚೇ ದಿನ್'!

ನವದೆಹಲಿ: ಕಾಶ್ಮೀರದಿಂದ ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ ಮೋದಿ ಸರ್ಕಾರ ಜಮ್ಮು ಕಾಶ್ಮೀರದ ಸಮೃದ್ಧಿಗೆ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈಗ ರಾಜ್ಯದಲ್ಲಿ ಸೇಬು ಬೆಳೆಯುವ ರೈತರಿಗೆ ಅನುಕೂಲವಾಗುವಂತೆ ಮೋದಿ ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದು, ಇದರ ಅಡಿಯಲ್ಲಿ ಸರ್ಕಾರವು ನೇರವಾಗಿ 12 ಲಕ್ಷ ಮೆಟ್ರಿಕ್ ಟನ್ ಸೇಬುಗಳನ್ನು ರೈತರಿಂದ ಖರೀದಿಸಲು ನಿರ್ಧರಿಸಿದೆ. ಇದು ಸುಮಾರು 2000 ಕೋಟಿಗಳಷ್ಟು ಸೇಬು ಬೆಳೆಗಾರರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ.

ವಾಸ್ತವವಾಗಿ, ಸೇಬು ಬೆಳೆಗಾರರಿಗಾಗಿ ವಿಶೇಷ ಮಾರುಕಟ್ಟೆ ಬೆಲೆ ಹಸ್ತಕ್ಷೇಪ ಯೋಜನೆಯನ್ನು ಘೋಷಿಸಲಾಗಿದೆ. 12 ಲಕ್ಷ ಮೆಟ್ರಿಕ್ ಟನ್ ಸೇಬುಗಳನ್ನು ನೇರವಾಗಿ ರೈತರಿಂದ ಖರೀದಿಸಲಾಗುವುದು ಮತ್ತು ಹಣ ನೇರವಾಗಿ ರೈತರ ಖಾತೆಗೆ ತಲುಪಲಿದೆ ಎಂದು ಸರ್ಕಾರ ತಿಳಿಸಿದೆ. ಅಂದರೆ, ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ತಾವು ಬೆಳೆದ ಬೆಲೆಗೆ ನೇರ ಲಾಭವನ್ನು ಪಡೆಯುತ್ತಾರೆ. ಇದರಿಂದ ಸೇಬು ಬೆಳೆಗಾರರಿಗೆ ಸುಮಾರು 2,000 ಕೋಟಿ ರೂ. ಲಾಭವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಇದಲ್ಲದೆ ಬೀಜಗಳು ಮತ್ತು ಸೇಬು ರೈತರು ಮತ್ತು ವ್ಯಾಪಾರಿಗಳ ಆದಾಯವನ್ನು ಹೆಚ್ಚಿಸಲು 8000 ಕೋಟಿ ರೂ.ಗಳ ಹೂಡಿಕೆ ಮಾಡಲು ಕೂಡ ಮೋದಿ ಸರ್ಕಾರ ನಿರ್ಧರಿಸಿದೆ.

Read More