Home> India
Advertisement

ಮಿಗ್-29ಕೆ ವಿಮಾನದಿಂದ ಬಿದ್ದ ಇಂಧನ ಟ್ಯಾಂಕ್; ಗೋವಾ ವಿಮಾನ ನಿಲ್ದಾಣದಲ್ಲಿ ಬೆಂಕಿ

ಬೆಂಕಿ ಹೊತ್ತಿಕೊಂಡ ಪರಿಣಾಮ ಪಣಜಿ ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಯಾವುದೇ ವಿಮಾನ ಹಾರಾಟ ಮತ್ತು ಲ್ಯಾಂಡಿಂಗ್​ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಮಿಗ್-29ಕೆ ವಿಮಾನದಿಂದ ಬಿದ್ದ ಇಂಧನ ಟ್ಯಾಂಕ್; ಗೋವಾ ವಿಮಾನ ನಿಲ್ದಾಣದಲ್ಲಿ ಬೆಂಕಿ

ಪಣಜಿ: ಗೋವಾ ವಿಮಾನ ನಿಲ್ದಾಣದಲ್ಲಿ ಮಿಗ್-29ಕೆ ಯುದ್ದ ವಿಮಾನ  ರನ್​ವೇಯಲ್ಲಿ ಟೆಕ್​ಆಫ್ ಆಗುವ ವೇಳೆ ವಿಮಾನದ ಇಂಧನ ಟ್ಯಾಂಕ್​ ಬೇರ್ಪಡೆಗೊಂಡು ಕೆಳಗೆ ಬಿದ್ದ ಕಾರಣ ಬೆಂಕಿ ಹೊತ್ತಿಕೊಂಡ ಘಟನೆ ಶನಿವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ನಡೆದಿದೆ. 

ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಂಡ ಪರಿಣಾಮ ಪಣಜಿ ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಯಾವುದೇ ವಿಮಾನ ಹಾರಾಟ ಮತ್ತು ಲ್ಯಾಂಡಿಂಗ್​ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಆದಷ್ಟು ಬೇಗ ಮತ್ತೆ ವಿಮಾನ ಹಾರಾಟಕ್ಕೆ ಪ್ರಯತ್ನಿಸಲಾಗುವುದು. ಸದ್ಯ ಮಿಗ್ 29ಕೆ ವಿಮಾನ ಸುರಕ್ಷಿತವಾಗಿದೆ ಎಂದು ಭಾರತೀಯ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ವಿಮಾನಗಳ ಹಾರಾಟ ಮತ್ತು ನಿಲುಗಡೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ ಕಾರಣ ವಿಮಾನಗಳ ಆಗಮನ ಮತ್ತು ನಿರ್ಗಮನದಲ್ಲಿ ವ್ಯತ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More