Home> India
Advertisement

'ಗರ್ಭ ಸಂಸ್ಕಾರ'ದ ಕುರಿತು ತರಬೇತಿ ನೀಡಲು ಮುಂದಾದ ಯುನಿವರ್ಸಿಟಿ

ಈ ಕುರಿತು ಮಾಹಿತಿ ನೀಡಿರುವ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ  ಎಸ್. ಎನ್. ಶುಕ್ಲಾ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಘಟಿಕೋತ್ಸವ ಕಾರ್ಯಕ್ರಮದ ವೇಳೆ ರಾಜ್ಯದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಗರ್ಭ ಸಂಸ್ಕಾರದ ಶಿಕ್ಷಣ ವ್ಯವಸ್ಥೆಯ ಕುರಿತು ಚರ್ಚೆ ನಡೆಸಿದ್ದರು ಎಂದಿದ್ದಾರೆ.

'ಗರ್ಭ ಸಂಸ್ಕಾರ'ದ ಕುರಿತು ತರಬೇತಿ ನೀಡಲು ಮುಂದಾದ ಯುನಿವರ್ಸಿಟಿ

ಅಯೋಧ್ಯ: ಉತ್ತರ ಪ್ರದೇಶದ ಡಾ. ರಾಮ್ ಮನೋಹರ್ ಲೋಹಿಯಾ ಅವಧ ವಿಶ್ವವಿದ್ಯಾನಿಲಯ 'ಗರ್ಭ ಸಂಸ್ಕಾರ' ಶಿಕ್ಷಣ ನೀಡಲು ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ವಿವಿ 3 ತಿಂಗಳ ಕೋರ್ಸ್ ವೊಂದನ್ನು ಪ್ರಸ್ತಾಪಿಸಿದೆ. ಈ ಕೋರ್ಸ್ ಅಡಿ ಪೋಷಕರಿಗೆ 'ಗರ್ಭ ಸಂಸ್ಕಾರ'ದ ತರಬೇತಿ ನೀಡಲಾಗುವುದು ಎಂದು ವಿವಿ ಪ್ರಕಟಿಸಿದೆ. 

ಕೇವಲ ಮೂರು ಪ್ರಶ್ನೆಗಳ ಆಧಾರದ ಮೇಲೆ ಡಾ. ರಾಮ್ ಮನೋಹರ್ ಲೋಹಿಯಾ ವಿವಿ ಪೋಷಕರಿಗೆ ಈ ತರಬೇತಿ ನೀಡಲಿದೆ. ಈ ತರಬೇತಿ ಅಡಿ ನೈತಿಕ ಮೌಲ್ಯಗಳು, ಯೋಗಾ ಹಾಗೂ ಗರ್ಭಾವಸ್ಥೆಯಲ್ಲಿ ಪೋಷಕರು ಯಾವ ರೀತಿ ವ್ಯವಹರಿಸಬೇಕು, ಅವರ ದೈನಂದಿನ ಪ್ರಕ್ರಿಯೆ ಹೇಗಿರಬೇಕು ಈ ವಿಷಯಗಳ ಮೇಲೆ ಹೆಚ್ಚು ಒತ್ತು ನೀಡಲಾಗುವುದು. ಈ ತರಬೇತಿ ವಿಶ್ವವಿದ್ಯಾನಿಲಯದ ಯೋಗಾ ವಿಭಾಗದಲ್ಲಿ ನೀಡಲಾಗುವುದು ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ  ಎಸ್. ಎನ್. ಶುಕ್ಲಾ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಘಟಿಕೋತ್ಸವ ಕಾರ್ಯಕ್ರಮದ ವೇಳೆ ರಾಜ್ಯದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಗರ್ಭ ಸಂಸ್ಕಾರದ ಶಿಕ್ಷಣ ವ್ಯವಸ್ಥೆಯ ಕುರಿತು ಚರ್ಚೆ ನಡೆಸಿದ್ದು, ಇದಕ್ಕಾಗಿ ಒಂದು ಕೋರ್ಸ್ ಪರಿಚಯಿಸಬೇಕು ಎಂದಿದ್ದರು. ಅವರಿಂದ ಪ್ರೇರಿತರಾಗಿ ವಿವಿ ಈ ಹೊಸ ಕೋರ್ಸ್ ಆರಂಭಿಸಲು ಹೆಜ್ಜೆ ಇಟ್ಟಿದೆ ಎಂದು ಅವರು ಹೇಳಿದ್ದಾರೆ.

ತಂದೆ-ತಾಯಿಯರ ದೈನಂದಿನ ಚಟುವಟಿಕೆಗಳು ಗರ್ಭದಲ್ಲಿರುವ ಶಿಶುವಿನ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಇಲ್ಲಿ ಉಲ್ಲೇಖನೀಯ.  ಇಂತಹ ಪರಿಸ್ಥಿತಿಯಲ್ಲಿ ತಂದೆ-ತಾಯಿಯರಿಗೆ ತರಬೇತಿ ನೀಡುವುದು ಅವಶ್ಯಕವಾಗಿರುತ್ತದೆ. ಗುರುಕುಲ ಪದ್ಧತಿಯ ವಿಶ್ವವಿದ್ಯಾನಿಲಯಗಳಲ್ಲಿ ನಿರಂತರವಾಗಿ ಇಂತಹ ವಿಷಯಗಳ ಮೇಲೆ ತರಬೇತಿ ನೀಡಲಾಗುತ್ತದೆ. ವಿದೇಶಗಳಲ್ಲಿಯೂ ಕೂಡ ಈ ಕುರಿತು ಪೋಷಕರಿಗೆ ತರಬೇತಿ ನೀಡಲಾಗುತ್ತದೆ. ಅವುಗಳನ್ನೇ ಗಮನದಲ್ಲಿಟ್ಟುಕೊಂಡು ಅವಧ ವಿಶ್ವವಿದ್ಯಾನಿಲಯ ತನ್ನ ಮೂರು ತಿಂಗಳ ಕೋರ್ಸ್ ಅಡಿಯಲ್ಲಿ ತಂದೆ-ತಾಯಿಯರಿಗೆ 'ಗರ್ಭ ಸಂಸ್ಕಾರ' ಕುರಿತು ತರಬೇತಿ ನೀಡಲಿದೆ. 

Read More