Home> India
Advertisement

ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್‌ಗಳ ಪ್ಯಾಂಟ್ ಒದ್ದೆಯಾಗುತ್ತಿದೆ: ಯೋಗಿ ಆದಿತ್ಯನಾಥ್

Yogi Adityanath On Gangsters: ಉತ್ತರ ಪ್ರದೇಶದಲ್ಲಿ ಮಾಫಿಯಾ ಗ್ಯಾಂಗ್ ಜನರಲ್ಲಿ ಭಯೋತ್ಪಾದನೆ ಉಂಟುಮಾಡುತ್ತಿದ್ದವರ ಪ್ಯಾಂಟ್‍ಗಳು ಇದೀಗ ಒದ್ದೆಯಾಗುತ್ತಿವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್‌ಗಳ ಪ್ಯಾಂಟ್ ಒದ್ದೆಯಾಗುತ್ತಿದೆ: ಯೋಗಿ ಆದಿತ್ಯನಾಥ್

ಗೋರಖ್‌ಪುರ (ಯುಪಿ): ಸುಲಿಗೆ-ಬೆದರಿಕೆಗಳ ಮೂಲಕ ಜನರನ್ನು ಭಯಭೀತಗೊಳಿಸಿ ಕಾನೂನು ಮತ್ತು ಸುವ್ಯವಸ್ಥೆ ಲೆಕ್ಕಿಸದೆ ಕಿಡ್ನಾಪ್ ಮಾಡುತ್ತಿದ್ದ ಗ್ಯಾಂಗ್‍ಸ್ಟರ್‍ಗಳ ಪ್ಯಾಂಟ್ ಇದೀಗ ಒದ್ದೆಯಾಗುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಬಾಟಲ್ ಪ್ಲಾಂಟ್‌ನ ಭೂಮಿ ಪೂಜೆಯ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ‘ಮೊದಲು ಕಾನೂನು ಮತ್ತು ಸುವ್ಯವಸ್ಥೆಗೆ ಸ್ವಲ್ಪವೂ ಗೌರವ ತೋರಿಸದ ರೌಡಿಗಳು ಇದೀಗ ತಮ್ಮ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕ್ರಿಮಿನಲ್‍ಗಳಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದ ಮೇಲೆ ಅವರ ಒದ್ದೆಯಾದ ಪ್ಯಾಂಟ್‌ಗಳು ಗೋಚರಿಸುತ್ತಿವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: "ನಾನು ಇವಿಎಂಗಳನ್ನು ನಂಬುತ್ತೇನೆ" ಎಂದ ಅಜಿತ್ ಪವಾರ್

ಮೊದಲು ಗ್ಯಾಂಗ್‍ಸ್ಟರ್‍ಗಳ ಅಟ್ಟಹಾಸಕ್ಕೆ ಹಲವಾರು ಜನರು ಕಿರಿಕಿರು ಅನುಭವಿಸುತ್ತಿದ್ದರು. ಇದೀಗ ಸರ್ಕಾರದ ಕ್ರಮದಿಂದ ಕ್ರಮಿನಲ್‍ಗಳು ಬಾಲ ಮುದುರಿಕೊಂಡಿದ್ದನ್ನು ಉತ್ತರಪ್ರದೇಶದ ಜನರೇ ನೋಡುತ್ತಿದ್ದಾರೆ. ಈ ಮೊದಲು ಮಾಫಿಯಾ ಗ್ಯಾಂಗ್‍ ಜನರನ್ನು ಭಯಭೀತಗೊಳಿಸುತ್ತಿದ್ದರು, ಕೈಗಾರಿಕೋದ್ಯಮಿಗಳಿಗೆ ಸುಲಿಗೆ ಬೆದರಿಕೆಗಳನ್ನು ಹಾಕುತ್ತಿದ್ದರು. ಉದ್ಯಮಿಗಳನ್ನು ಅಪಹರಿಸುತ್ತಿದ್ದರು. ಆದರೆ ಇಂದು ಅವರು ಭಯದಿಂದ ಜೀವ ಉಳಿಸಿಕೊಳ್ಳಲು ಓಡುತ್ತಿದ್ದಾರೆ’ ಎಂದು ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.

‘2006ರಲ್ಲಿ ಉಮೇಶ್ ಪಾಲ್ ಎಂಬ ವಕೀಲನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಪಿ/ಎಂಎಲ್ಎ ಕೋರ್ಟ್ ಇತ್ತೀಚೆಗೆ ಗ್ಯಾಂಗ್‍ಸ್ಟರ್ ಮತ್ತು ರಾಜಕಾರಣಿ ಅತೀಕ್ ಅಹ್ಮದ್‌ಗೆ ಶಿಕ್ಷೆ ನೀಡಿದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. ಅತೀಕ್ ಅಹ್ಮದ್ ವಿರುದ್ಧ ಬರೋಬ್ಬರಿ 100 ಪ್ರಕರಣಗಳು ದಾಖಲಾಗಿದ್ದು, ಆತನಿಗೆ ಶಿಕ್ಷೆಯಾದ ಮೊದಲ ಪ್ರಕರಣ ಇದಾಗಿದೆ.

ಇದನ್ನೂ ಓದಿ: PM Modi Bandipur Visit: ಇಂದು ಬಂಡೀಪುರದಲ್ಲಿ ಪ್ರಧಾನಿ ಮೋದಿ ಸಫಾರಿ.. ಬೊಮ್ಮ-ಬೆಳ್ಳಿ ದಂಪತಿಗೆ ಸನ್ಮಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More