Home> India
Advertisement

ಕೊರೊನಾದಿಂದ ಚೇತರಿಸಿಕೊಂಡು ತಿಹಾರ್ ಜೈಲಿಗೆ ಮರಳಿದ ಛೋಟಾ ರಾಜನ್

COVID-19 ಧೃಢಪಟ್ಟ ನಂತರ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಭೂಗತ ಪಾತಕಿ ಚೋಟಾ ರಾಜನ್ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಮಂಗಳವಾರ (ಮೇ 11) ಮತ್ತೆ ತಿಹಾರ್ ಜೈಲಿಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾದಿಂದ ಚೇತರಿಸಿಕೊಂಡು ತಿಹಾರ್ ಜೈಲಿಗೆ ಮರಳಿದ ಛೋಟಾ ರಾಜನ್

ನವದೆಹಲಿ: COVID-19 ಧೃಢಪಟ್ಟ ನಂತರ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಭೂಗತ ಪಾತಕಿ ಚೋಟಾ ರಾಜನ್ ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಮಂಗಳವಾರ (ಮೇ 11) ಮತ್ತೆ ತಿಹಾರ್ ಜೈಲಿಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 22 ರಂದು ತಿಹಾರ್ ಜೈಲಿನಲ್ಲಿ ಕೊರೊನಾ (Covid-19) ಪಾಸಿಟಿವ್ ಎಂದು ಕಂಡುಬಂದ ಅವರು ಏಪ್ರಿಲ್ 24 ರಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಏಮ್ಸ್) ದಾಖಲಾಗಿದ್ದರು.

ಇದನ್ನೂ ಓದಿ : Indian Railways : ಕೊರೋನಾಗೆ 1,952 ರೈಲ್ವೆ ಸಿಬ್ಬಂದಿಗಳು ಬಲಿ : ರೈಲ್ವೆ ಇಲಾಖೆ

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಚೇತರಿಸಿಕೊಂಡಿದ್ದರಿಂದ ರಾಜನ್ ಅವರನ್ನು ಮಂಗಳವಾರ ತಿಹಾರ್‌ಗೆ ಕರೆತರಲಾಯಿತು.ರಾಜನ್ ಮೃತಪಟ್ಟಿದ್ದಾರೆ ಎಂಬ ವರದಿಗಳನ್ನು ಜೈಲು ಆಡಳಿತ ಶುಕ್ರವಾರ ತಳ್ಳಿಹಾಕಿತ್ತು.'ತಿಹಾರ್ ಜೈಲಿನ ಕೈದಿ ರಾಜೇಂದ್ರ ಸದಾಶಿವ್ ನಿಕಾಲ್ಜೆ ಸಾವಿನ ಸುದ್ದಿ ಸುಳ್ಳು ಎಂದು ಮಹಾನಿರ್ದೇಶಕ (ಕಾರಾಗೃಹ) ಸಂದೀಪ್ ಗೋಯೆಲ್ ಹೇಳಿದ್ದರು.

ಇದನ್ನೂ ಓದಿ : ಕೇರಳ ಕಮ್ಯುನಿಸ್ಟ್ ಚಳುವಳಿಯ ದಿಟ್ಟ ಮಹಿಳಾ ಧ್ವನಿ ಕೆ.ಆರ್.ಗೌರಿ ಅಮ್ಮಾ 

61 ವರ್ಷದ ರಾಜನ್ ಅವರನ್ನು 2015 ರಲ್ಲಿ ಇಂಡೋನೇಷ್ಯಾದ ಬಾಲಿಯಿಂದ ಗಡೀಪಾರು ಮಾಡಿದ ನಂತರ ಬಂಧನಕ್ಕೊಳಗಾದ ನಂತರ ಹೈ-ಸೆಕ್ಯುರಿಟಿ ಜೈಲಿನಲ್ಲಿ ಇರಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More