Home> India
Advertisement

Funny Video : ಟಗರಿನ ಜೊತೆ ಮೋಜು ಮಸ್ತಿಗಿಳಿದ ವ್ಯಕ್ತಿ, ಇಲ್ಲಿದೆ ನಕ್ಕು ನಗಿಸೋ ವಿಡಿಯೋ


 ಈ ತಮಾಷೆಯ ವಿಡಿಯೋವನ್ನು ಕ್ಷಣಾರ್ಧದಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಐದು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ನೆಟ್ಟಿಗರು ಕೂಡ ವಿಡಿಯೋಗೆ  ಬಹಳಷ್ಟು ಸಂಖ್ಯೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. 

Funny Video : ಟಗರಿನ ಜೊತೆ ಮೋಜು ಮಸ್ತಿಗಿಳಿದ ವ್ಯಕ್ತಿ, ಇಲ್ಲಿದೆ ನಕ್ಕು ನಗಿಸೋ ವಿಡಿಯೋ

ನವದೆಹಲಿ : Funny Video Today : ಸಾಮಾಜಿಕ ಮಾಧ್ಯಮದಲ್ಲಿ (Social Media) ದಿನವೊಂದಕ್ಕೆ ಸಾವಿರಾರು ವಿಡಿಯೋಗಳು ಅಪ್ ಲೋಡ್ ಆಗುತ್ತಿರುತ್ತವೆ. ಇವುಗಳ ಪೈಕಿ ಕೆಲವು ವಿಡಿಯೋಗಳನ್ನು ನೋಡಿ ನಗು ತಡೆಯುವುದಕ್ಕಾಗುವುದಿಲ್ಲ.  ಇದೀಗ ಅಂತಹದ್ದೇ ಒಂದು ವಿಡಿಯೋ ಎಲ್ಲೆಡೆ ವೈರಲ್ (Viral video) ಆಗುತ್ತಿದೆ. ಆವರಿಸಿದೆ. ಇದು ಒಬ್ಬ ವ್ಯಕ್ತಿ, ಟಗರಿಗೆ ಸಂಬಂಧಿಸಿದ್ದು. ಮೊದಲು ಟಗರನ್ನು ಸತಾಯಿಸಲು ಹೋದ ವ್ಯಕ್ತಿ ಕೊನೆಗೆ ಪಡುವ ಪಾಡು ನಗು ತರಿಸದೇ ಇರದು.  ಈ ತಮಾಷೆಯ ವಿಡಿಯೋವನ್ನು (Funny video) ಕ್ಷಣಾರ್ಧದಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಐದು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ನೆಟ್ಟಿಗರು ಕೂಡ ವಿಡಿಯೋಗೆ  ಬಹಳಷ್ಟು ಸಂಖ್ಯೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. 

ಕುರಿಗಳ ಜೊತೆ ಮೋಜು ಮಸ್ತಿ :  

ಇದು ಕೇವಲ ಕೆಲವು ಸೆಕೆಂಡ್ ಗಳ ವಿಡಿಯೋ. ಇದರಲ್ಲಿ ಟಗರು  ಬಯಲಿನಲ್ಲಿ ತನ್ನ ಪಾಡಿಗೇ ಸುತ್ತಾಡುತ್ತಿರುವುದನ್ನು ಕಾಣಬಹುದು (Animal video). ಆಗ ಆ ಪ್ರದೇಶಕ್ಕೆ ವ್ಯಕ್ತಿಯೊಬ್ಬನ ಎಂಟ್ರಿ ಯಾಗುತ್ತದೆ. ಆತನನ್ನು ನೋಡಿದ್ದೇ ತಡ ಕೋಪಗೊಂಡ ಟಗರು ಗುಮ್ಮಲು ಬರುತ್ತದೆ. ಅದನ್ನು ತಪ್ಪಿಸಲು ಹೋದ ವ್ಯಕ್ತಿ ಟಗರಿನ ಮೇಲಿನಿಂದ ಹಾರಿ ತಪ್ಪಿಸಿಕೊಳ್ಳುತ್ತಾನೆ. ಬಹಳಷ್ಟು ಸಲ ಈ ರೀತಿ ಆಟ ಮುಂದುವರಿಯುತ್ತದೆ. ಮೊದ  ಮೊದಲು ಆ ವ್ಯಕ್ತಿಗೂ ಈ ಆಟ ಮೋಜಿನಂತೆ ಅನ್ನಿಸುತ್ತದೆ. ಆದರೆ ಟಗರು ಮತ್ತೆ ಮತ್ತೆ ಗುಮ್ಮಲು ಬಂದಾಗ ವ್ಯಕ್ತಿ ಸುಸ್ತೋ ಸುಸ್ತು. 

ಇದನ್ನೂ ಓದಿ :  WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್

ಕೊನೆಗೆ ತನ್ನನ್ನು ಬಚಾವ್ ಮಾಡಿಕೊಳ್ಳಲು ಆ ವ್ಯಕ್ತಿ ಸ್ವಲ್ಪ ಎತ್ತರ ಪ್ರದೇಶಕ್ಕೆ ಹೋಗಿ ನಿಲ್ಲುತ್ತಾನೆ. ಆದರೆ, ಟಗರು ಮಾತ್ರ ಅಲ್ಲಿಯೂ ಆ ವ್ಯಕ್ತಿಯನ್ನು ಬಿಡುವ ಲಕ್ಷಣ ಕಾಣುತ್ತಿಲ್ಲ. ಒಟ್ಟಾರೆ ಮೂಕ ಪ್ರಾಣಿಗಳ ಸಿಟ್ಟಿಗೆ ಸಿಕ್ಕರೆ ಏನಾಗುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. 

 
 
 
 

 
 
 
 
 
 
 
 
 
 
 

A post shared by hepgul5 😊 (@hepgul5)

 

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ (Social media) ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram) hepgul5 ಹೆಸರಿನ ಪುಟದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದನ್ನು ಸುಮಾರು 10 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. 5.38 ಲಕ್ಷ ಜನರು ಅದನ್ನು ಇಷ್ಟಪಟ್ಟಿದ್ದಾರೆ. 

ಇದನ್ನೂ ಓದಿ : Video : ಮದುವೆಯ ಅಲಂಕಾರ ಮುಗಿಸಿಕೊಂಡು ಬಂದ ವಧುವಿನಿಂದ ವಿವಾಹಕ್ಕೆ ನಿರಾಕರಣೆ ಕಾರಣ ಇಷ್ಟೇ .!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More