Home> India
Advertisement

Viral Video : ಮದುವೆ ಮಂಟಪದಿಂದ ಎದ್ದು 'ಉ ಅಂಟಾವಾ' ಹಾಡಿಗೆ ಸೊಂಟ ಬಳುಕಿಸಿದ ವಧು..! ಡಾನ್ಸ್ ಗೆ ಬ್ರೇಕ್ ಹಾಕಿದ ವರ

ಇದೀಗ ‘ಊ ಅಂಟಾವಾ’ಹಾಡಿಗೆ ವಧು ಹೆಜ್ಜೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಾಡಿನಲ್ಲಿ ನೃತ್ಯ ಮಾಡುವಾಗ ವಧು-ವರರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. 

Viral Video : ಮದುವೆ ಮಂಟಪದಿಂದ ಎದ್ದು 'ಉ ಅಂಟಾವಾ' ಹಾಡಿಗೆ ಸೊಂಟ ಬಳುಕಿಸಿದ ವಧು..!  ಡಾನ್ಸ್ ಗೆ ಬ್ರೇಕ್ ಹಾಕಿದ ವರ

ನವದೆಹಲಿ : ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ: ದಿ ರೈಸ್' ಚಿತ್ರ  (Pushpa film) ಅದ್ಭುತ ಯಶಸ್ಸನ್ನು ಕಂಡಿದೆ. ಚಿತ್ರ ಸಂಭಾಷಣೆಗಳು ಮತ್ತು ಹೃದಯ ಸ್ಪರ್ಶಿಸುವ ಹಾಡುಗಳಿಂದ ಎಲ್ಲರನ್ನೂ ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.  ಈ ಚಿತ್ರದ ಹಾಡುಗಳ  ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.  ಜನ 'ಪುಷ್ಪ' ಚಿತ್ರದ ಹಾಡುಗಳನ್ನು ಬ್ಯಾಕ್ ಟು ಬ್ಯಾಕ್ ರೀಲ್ ಗಳಲ್ಲಿ ಬಳಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social media) ಪುಷ್ಪಾ ಹಾಡುಗಳೇ ಆವರಿಸಿದೆ, ಜನ 'ಶ್ರೀವಳ್ಳಿ , 'ಊ ಅಂಟಾವಾ', 'ಸಾಮಿ' ಅಂತ ಡ್ಯಾನ್ಸ್ ರೀಲ್ ಕ್ರಿಯೇಟ್ ಮಾಡುತ್ತಿದ್ದಾರೆ. 

'ಊ ಅಂಟಾವಾ' ಹಾಡಿಗೆ ಖುಷಿಯಿಂದ ಕುಣಿದು ಕುಪ್ಪಳಿಸಿದ ವಧು : 

ಇದೀಗ ‘ಊ ಅಂಟಾವಾ’ಹಾಡಿಗೆ ವಧು ಹೆಜ್ಜೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗಿದೆ. ಈ ಹಾಡಿನಲ್ಲಿ ನೃತ್ಯ ಮಾಡುವಾಗ ವಧು-ವರರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಮದುವೆಯ ಸಮಯದಲ್ಲಿ, ವಧು ಮಂಟಪದಿಂದ ಎದ್ದು 'ಪುಷ್ಪಾ' ಚಿತ್ರದ 'ಊ ಅಂಟಾವಾ' ಹಾಡಿಗೆ ಸೊಂಟ ಬಳುಕಿಸಲು ಆರಂಭಿಸಿದ್ದಾರೆ. ಈ ಸಮಯದಲ್ಲಿ, ಅಲ್ಲಿಗೆ ಬಂದ ವರ ಕೂಡ ವಧುವಿನ ಜೊತೆ ಹೆಜ್ಜೆ ಹಾಕಿದ್ದಾರೆ (wedding video). ಇವರನ್ನು ನೋಡಿ, ಸುತ್ತಲೂ ನೆರೆದಿದ್ದವರು ಕೂಡಾ  ಡಾನ್ಸ್ ಮಾಡಲು ಶುರು ಮಾಡಿದ್ದಾರೆ.  

ಇದನ್ನೂ ಓದಿ : Video : ಮದುವೆಯ ಅಲಂಕಾರ ಮುಗಿಸಿಕೊಂಡು ಬಂದ ವಧುವಿನಿಂದ ವಿವಾಹಕ್ಕೆ ನಿರಾಕರಣೆ ಕಾರಣ ಇಷ್ಟೇ .! 

ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಿಂದಾಸ್ ಡಾನ್ಸ್ :
ವೀಡಿಯೊದಲ್ಲಿರುವ ವಧು ಮತ್ತು ವರ ಮಹಾರಾಷ್ಟ್ರದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿರುವುದನ್ನು ಕಾಣಬಹುದು. ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಾಡಿನ ಆಕರ್ಷಕ ಬೀಟ್‌ಗಳಿಗೆ ಉತ್ಸಾಹದಿಂದ ನೃತ್ಯ ಮಾಡುತ್ತಿದ್ದಾರೆ. ಎಲ್ಲರೂ ಬಹಳ ಸಂತೋಷದಿಂದ ಡಾನ್ಸ್ (bride dance) ಮಾಡುತ್ತಿರುವುದು ಕಂಡು ಬರುತ್ತದೆ. 

 

ಆದರೆ, ವೀಡಿಯೋದ ಕೊನೆಯಲ್ಲಿ ಖುಷಿಯಿಂದ ಕುಣಿದಾಡುತ್ತಿದ್ದ ವಧುವನ್ನು ಚಲ್ಲಾ ಚಲಾ ಎಂದು ವರ ಒಳಗೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಕೆಮಿಸ್ಟ್ರಿ ಸ್ಟುಡಿಯೋಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. 

 ಇದನ್ನೂ ಓದಿ : ತಪ್ಪಿದ ಭಾರೀ ಅನಾಹುತ, 2 ಸೆಕೆಂಡ್‌ ತಡವಾಗುತ್ತಿದ್ದರೂ ಸುಟ್ಟು ಕರಕಲಾಗುತ್ತಿದ್ದ ವರ, ಬೆಚ್ಚಿ ಬೀಳಿಸುವ ವಿಡಿಯೋ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More