Home> India
Advertisement

ರಾಜಸ್ತಾನದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಇನ್ಮುಂದೆ ಉಚಿತ ಉನ್ನತ ಶಿಕ್ಷಣ

ಬರುವ ಶೈಕ್ಷಣಿಕ ವರ್ಷದಿಂದ ರಾಜಸ್ತಾನ ಸರ್ಕಾರ ಹೆಣ್ಣುಮಕ್ಕಳಿಗೆ ಉಚಿತ ಉನ್ನತ ಶಿಕ್ಷಣವನ್ನು ನೀಡಲಿದೆ ಎನ್ನಲಾಗಿದೆ.ಈ ವಿಚಾರವನ್ನು ಈಗ ಉನ್ನತ ಶಿಕ್ಷಣ ಸಚಿವ ಭಾನ್ವರ್ ಸಿಂಗ್ ಭಾಟಿ ಬುಧವಾರದಂದು ತಿಳಿಸಿದ್ದಾರೆ.

ರಾಜಸ್ತಾನದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಇನ್ಮುಂದೆ ಉಚಿತ ಉನ್ನತ ಶಿಕ್ಷಣ

ನವದೆಹಲಿ: ಬರುವ ಶೈಕ್ಷಣಿಕ ವರ್ಷದಿಂದ ರಾಜಸ್ತಾನ ಸರ್ಕಾರ ಹೆಣ್ಣುಮಕ್ಕಳಿಗೆ ಉಚಿತ ಉನ್ನತ ಶಿಕ್ಷಣವನ್ನು ನೀಡಲಿದೆ ಎನ್ನಲಾಗಿದೆ.ಈ ವಿಚಾರವನ್ನು ಈಗ ಉನ್ನತ ಶಿಕ್ಷಣ ಸಚಿವ ಭಾನ್ವರ್ ಸಿಂಗ್ ಭಾಟಿ ಬುಧವಾರದಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಉಚಿತ ಉನ್ನತ ಶಿಕ್ಷಣವನ್ನು ಒದಗಿಸಲಾಗುವುದು ಎಂದು ತಿಳಿಸಿದರು.ಅಲ್ಲದೆ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಸಹಿತ ಉಚಿತವಾಗಿ ಒದಗಿಸಲಾಗುವುದು ಎಂದು ತಿಳಿಸಿದರು.

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅದ ನೇಮಕಾತಿ ವಿಚಾರವಾಗಿ ತನಿಖೆಯನ್ನು ನಡೆಸಲಾಗುವುದು ಎಂದು ಸಹ ಹೇಳಿದರು.ಬಿಜೆಪಿ ಕಾಲಾವಧಿಯಲ್ಲಿ ಪ್ರಾರಂಭಿಸಿದ ಕಾಲೇಜು ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ ಸೊರಗಿವೆ. ಆದ್ದರಿಂದ ಈ ಎಲ್ಲ ಕಾಲೇಜುಗಳಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.

Read More