Home> India
Advertisement

ಭಾರತದಲ್ಲಿ 4 ಮಂಕಿಪಾಕ್ಸ್ ಪ್ರಕರಣ ಪತ್ತೆ- ಜಾಗರೂಕರಾಗಿರಲು ತಜ್ಞರ ಸಲಹೆ

Monkeypox: ಕರೋನಾವೈರಸ್ ಬಳಿಕ ಇಡೀ ವಿಶ್ವದಲ್ಲಿ ಮತ್ತೊಂದು ವೈರಸ್ ಮಂಕಿಪಾಕ್ಸ್ ತಲ್ಲಣ ಸೃಷ್ಟಿಸಿದೆ. ಇದೀಗ ಭಾರತದಲ್ಲಿ ನಾಲ್ಕು ಜನರಿಗೆ  ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಈ ಸಂದರ್ಭದಲ್ಲಿ ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಕಾಯಿಲೆ ಎಷ್ಟು ಅಪಾಯಕಾರಿ. ಈ ಬಗ್ಗೆ ನಿಗಾವಹಿಸುವುದು ಹೇಗೆ ಎಂದು ತಿಳಿಯೋಣ...

ಭಾರತದಲ್ಲಿ 4 ಮಂಕಿಪಾಕ್ಸ್ ಪ್ರಕರಣ ಪತ್ತೆ- ಜಾಗರೂಕರಾಗಿರಲು ತಜ್ಞರ ಸಲಹೆ

ಭಾರತಕ್ಕೂ ಲಗ್ಗೆ ಇಟ್ಟ ಮಂಕಿಪಾಕ್ಸ್-  ಮಂಗನ ಕಾಯಿಲೆ ಅಂದರೆ ಮಂಕಿಪಾಕ್ಸ್ ಇಡೀ ವಿಶ್ವದಲ್ಲೇ ಆತಂಕ ಹೆಚ್ಚಿಸುತ್ತಿದ್ದು ಇದೀಗ ಭಾರತದಲ್ಲಿಯೂ  ನಾಲ್ಕು ಪ್ರಕರಣಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಅನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಈ ಮಧ್ಯೆ ಮಂಕಿಪಾಕ್ಸ್ ಭಾರತಕ್ಕೂ ಲಗ್ಗೆ ಇಟ್ಟಿರುವುದು ಜನರ ಆತಂಕ ಹೆಚ್ಚಿಸಿದೆ. ಈ ಕುರಿತಂತೆ ಸಲಹೆ ನೀದುರ್ವ ತಜ್ಞರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚಿನ ಕಾಳಜಿ ಅಗತ್ಯ. ಆದಾಗ್ಯೂ, ಈ ವೈರಸ್ ಕಡಿಮೆ ಸಾಂಕ್ರಾಮಿಕ ಮತ್ತು ಅದರಲ್ಲಿ ಸಾವಿನ ಸಾಧ್ಯತೆಗಳು ತುಂಬಾ ಕಡಿಮೆ ಇರುವ ಕಾರಣ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಮಂಕಿಪಾಕ್ಸ್ ಜಾಗತಿಕ ಸಾರ್ವಜನಿಕ ತುರ್ತುಪರಿಸ್ಥಿತಿ ಎಂದ ಡಬ್ಲ್ಯೂಹೆಚ್ಒ:
ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ಅನ್ನು ಆತಂಕಕಾರಿ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.  70 ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಹರಡುವಿಕೆಯು 'ಅಸಾಧಾರಣ' ಪರಿಸ್ಥಿತಿಯಾಗಿದೆ ಎಂದು ಅದು ಹೇಳಿದೆ. 

ಈ ಕುರಿತಂತೆ ಮಾತನಾಡಿರುವ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಸಂಕ್ಷಿಪ್ತವಾಗಿ ಹೇಳುವುದಾದರೆ, ಹೊಸ ವಿಧಾನಗಳ ಮೂಲಕ ಪ್ರಪಂಚದಾದ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವನ್ನು ನಾವು ಎದುರಿಸುತ್ತಿದ್ದೇವೆ ಮತ್ತು ಈ ರೋಗದ ಬಗ್ಗೆ ನಮಗೆ ಬಹಳ ಕಡಿಮೆ ಮಾಹಿತಿ ಇದೆ ಎಂದಿದ್ದಾರೆ.

ಇದನ್ನೂ ಓದಿ- ವೇಗವಾಗಿ ಹರಡುತ್ತಿದೆ ಮಂಕಿಪಾಕ್ಸ್‌: ಭಾರತ ಎಚ್ಚರಿಕೆ ವಹಿಸಲು WHO ಸೂಚನೆ

75 ದೇಶಗಳಲ್ಲಿ 16,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣ:
ಲಭ್ಯವಿರುವ ಮಾಹಿತಿಯ ಪ್ರಕಾರ, ಜಾಗತಿಕವಾಗಿ 75 ದೇಶಗಳಲ್ಲಿ 16,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಮತ್ತು ಈ ಕಾರಣದಿಂದಾಗಿ ಐದು ಜನರು ಸಾವನ್ನಪ್ಪಿದ್ದಾರೆ. 
 
ಮಂಕಿಪಾಕ್ಸ್ ತಡೆಯುವ ಪರಿಣಾಮಕಾರಿ ಮಾರ್ಗ:
ತಜ್ಞರ ಪ್ರಕಾರ, ಕಟ್ಟುನಿಟ್ಟಾದ ಮೇಲ್ವಿಚಾರಣೆ ಮಾಡುವ ಮೂಲಕ ಮಂಕಿಪಾಕ್ಸ್ ಅನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಸೋಂಕಿತರನ್ನು ಪ್ರತ್ಯೇಕಿಸುವ ಮೂಲಕ ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸುವ ಮೂಲಕ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು. ಅದೇ ಸಮಯದಲ್ಲಿ, ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆಯಿದೆ ಎಂದು ವೈದ್ಯರು ಒತ್ತಿ ಹೇಳಿದ್ದಾರೆ.

ಮಂಕಿಪಾಕ್ಸ್ ವೈರಸ್ ಡಬಲ್ ಡಿಎನ್‌ಎ ಹೊಂದಿರುವ ವೈರಸ್:
ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಯ ಹಿರಿಯ ವಿಜ್ಞಾನಿ ಡಾ.ಪ್ರಜ್ಞಾ ಯಾದವ್, ಮಂಕಿಪಾಕ್ಸ್ ವೈರಸ್ ಡಬಲ್ ಡಿಎನ್‌ಎ ಹೊಂದಿರುವ ವೈರಸ್ ಆಗಿದ್ದು, ಇದು ಎರಡು ವಿಭಿನ್ನ ಆನುವಂಶಿಕ ರೂಪಾಂತರಗಳನ್ನು ಹೊಂದಿದೆ. ಈ ರೂಪಗಳಲ್ಲಿ ಒಂದು ಮಧ್ಯ ಆಫ್ರಿಕನ್ (ಕಾಂಗೊ ಬೇಸಿನ್) ಮತ್ತು ಪಾಶ್ಚಿಮಾತ್ಯ ಮಾದರಿ ಎಂದು ಮಾಹಿತಿ ನೀಡಿದ್ದಾರೆ. 

ಕಾಂಗೋ ವೈರಸ್ ಕಡಿಮೆ ಗಂಭೀರ:
ಇತ್ತೀಚಿನ ಏಕಾಏಕಿ, ಪಾಶ್ಚಿಮಾತ್ಯ ಮಾದರಿಯು ಅನೇಕ ದೇಶಗಳ ಮೇಲೆ ಪರಿಣಾಮ ಬೀರಿದೆ ಮತ್ತು ಆತಂಕವನ್ನು ಉಂಟುಮಾಡಿದೆ. ಇದು ಮೊದಲು ಕಾಣಿಸಿಕೊಂಡ ಕಾಂಗೋಲೀಸ್ ರೂಪಕ್ಕಿಂತ ಕಡಿಮೆ ಗಂಭೀರವಾಗಿದೆ ಎಂದು ವಿವರಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಮುಖ ಸಂಸ್ಥೆಗಳಲ್ಲಿ NIV ಒಂದಾಗಿದೆ ಎಂದು ತಿಳಿದುಬಂದಿದೆ.

ಐದು ದಶಕಗಳಿಂದ ಅಸ್ತಿತ್ವದಲ್ಲಿರುವ ವೈರಸ್:
ಸಾಂಕ್ರಾಮಿಕ ರೋಗ ತಜ್ಞ ಹಾಗೂ ಸಾಂಕ್ರಾಮಿಕ ರೋಗ ವೈದ್ಯ ಡಾ.ಚಂದ್ರಕಾಂತ್ ಲಹಾರಿಯಾ ಮಾತನಾಡಿ, ಮಂಗನ ಕಾಯಿಲೆ ಹೊಸ ವೈರಸ್ ಅಲ್ಲ. ಐದು ದಶಕಗಳಿಂದ ಇದು ಜಾಗತಿಕವಾಗಿ ಪ್ರಸ್ತುತವಾಗಿದೆ ಮತ್ತು ಅದರ ವೈರಲ್ ರಚನೆ, ಪ್ರಸರಣ ಮತ್ತು ರೋಗಕಾರಕತೆಯ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ ಎಂದಿದ್ದಾರೆ.

ಇದನ್ನೂ ಓದಿ- Meningococcal: ಕೊರೊನಾ - ಮಂಕಿಪಾಕ್ಸ್ ನಡುವೆ ಮತ್ತೊಂದು ಮಾರಣಾಂತಿಕ ವೈರಸ್ ಪತ್ತೆ

ವೈರಸ್‌ನ ಲಕ್ಷಣಗಳು ಶೀಘ್ರದಲ್ಲೇ ಗೋಚರಿಸುವುದಿಲ್ಲ:
ಹೆಚ್ಚಿನ ಸಂದರ್ಭಗಳಲ್ಲಿ ವೈರಸ್ ಸೌಮ್ಯವಾದ ಅನಾರೋಗ್ಯವನ್ನು ಉಂಟುಮಾಡುತ್ತದೆ. ಇದು ಕಡಿಮೆ ಸಾಂಕ್ರಾಮಿಕವಾಗಿದೆ ಮತ್ತು SARS-CoV-2 (ಕೊರೊನಾವೈರಸ್) ಗಿಂತ ಭಿನ್ನವಾಗಿ ರೋಗಕ್ಕೆ ಒಡ್ಡಿಕೊಂಡ ಜನರಿಗೆ ರವಾನಿಸಬಹುದು. SARS-CoV-2 ನಲ್ಲಿ ಉಸಿರಾಟದ ಸಮಸ್ಯೆ ಇದೆ ಮತ್ತು ರೋಗಲಕ್ಷಣಗಳನ್ನು ತೋರಿಸದ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ. ಆದರೆ,  ಮಂಕಿಪಾಕ್ಸ್ ವೈರಸ್‌ನ ಲಕ್ಷಣಗಳು ಶೀಘ್ರದಲ್ಲೇ ಗೋಚರಿಸುವುದಿಲ್ಲ ಎನ್ನಲಾಗಿದೆ.

ಈಗಿನಂತೆ, ರೋಗಿಗಳು ಮತ್ತು ಅವರ ಸಂಪರ್ಕಗಳನ್ನು ಪ್ರತ್ಯೇಕಿಸುವ ಮೂಲಕ ಮತ್ತು ಅನುಮೋದಿತ ಸಿಡುಬು ಲಸಿಕೆಗಳನ್ನು ಬಳಸುವ ಮೂಲಕ ಮಂಕಿಪಾಕ್ಸ್ ಏಕಾಏಕಿ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಡಾ.ಚಂದ್ರಕಾಂತ್ ಲಹಾರಿಯಾ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More