Home> India
Advertisement

ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ್ ರಾಣೆ ಬಿಜೆಪಿಗೆ ಸೇರುವ ಸಾಧ್ಯತೆ

ನಾರಾಯಣ್ ರಾಣೆ ಅವರು ಶಿವಸೇನೆನಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಬಳಿಕ 5 ವರ್ಷಗಳ ಕಾಲ ರಾಜ್ಯದಲ್ಲಿ ಶಿವಸೇನೆ ಪರವಾಗಿ ಸದನದಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು. ರಾಣೆ ಜುಲೈ 2005 ರಲ್ಲಿ ಶಿವಸೇನೆ ತೊರೆದರು. ಇದರ ನಂತರ ನಾರಾಯಣ್ ರಾಣೆ ಕಾಂಗ್ರೆಸ್ ಸೇರಿದರು. 2017 ರಲ್ಲಿ ರಾಣೆ ಕಾಂಗ್ರೆಸ್ ತೊರೆದು ತಮ್ಮದೇ ಪಕ್ಷವನ್ನು ರಚಿಸಿದರು.

ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ್ ರಾಣೆ ಬಿಜೆಪಿಗೆ ಸೇರುವ ಸಾಧ್ಯತೆ

ಮುಂಬೈ: ಶಿವಸೇನೆ ವಿರೋಧದ ನಂತರ ಸೋಮವಾರ (ಸೆಪ್ಟೆಂಬರ್ 23) ರಾಜ್ಯಸಭಾ ಸಂಸದ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಬಿಜೆಪಿಗೆ ಸೇರ್ಪಡೆಯಾಗುವ ವರದಿಗಳಿವೆ. ನಾರಾಯಣ್ ರಾಣೆ ಅವರು ಶಿವಸೇನೆನಿಂದ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಮತ್ತು ನಂತರ 5 ವರ್ಷಗಳ ಕಾಲ ರಾಜ್ಯದಲ್ಲಿ ಶಿವಸೇನೆ ಪರವಾಗಿ ಸದನದಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು. ರಾಣೆ ಜುಲೈ 2005 ರಲ್ಲಿ ಶಿವಸೇನೆ ತೊರೆದರು. ಆ ಸಮಯದಲ್ಲಿ, ಶಿವಸೇನೆ ತೊರೆಯಲು ಮುಖ್ಯ ಕಾರಣವೆಂದರೆ ಪ್ರಸ್ತುತ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಹಾಗೂ ರಾಣೆ ನಡುವೆ ಮೂಡಿದ್ದ ಭಿನ್ನಾಭಿಪ್ರಾಯ ಎಂದು ಹೇಳಲಾಗಿದೆ.

ಶಿವಸೇನೆ ತೊರೆದ ನಂತರ ನಾರಾಯಣ್ ರಾಣೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಕಾಂಗ್ರೆಸ್-ಎನ್‌ಸಿಪಿ ಸರ್ಕಾರದಲ್ಲಿ ರಾಣೆ ಕಂದಾಯ ಸಚಿವ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಆದರೆ ಅವರು ಯಾವಾಗಲೂ ತಮ್ಮ ಕೆಲಸಕ್ಕಿಂತಲೂ ಹೆಚ್ಚು ಹೇಳಿಕೆಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಒಮ್ಮೆ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅವರು ದೆಹಲಿಗೆ ಹೋಗಿ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕಾಯಿತು.

ಇದಾದ ಬಳಿಕ ಸೆಪ್ಟೆಂಬರ್ 2017 ರಲ್ಲಿ, ರಾಣೆ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ತಮ್ಮದೇ ಪಕ್ಷ(ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷ)ವನ್ನು ರಚಿಸಿದರು. 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ, ನಾರಾಯಣ್ ರಾಣೆ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲಿದ್ದಾರೆ ಎಂದು ಈಗ ಹೇಳಲಾಗುತ್ತಿದೆ. ನಾರಾಯಣ್ ರಾಣೆ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಬಹಳ ಪ್ರಾಬಲ್ಯ ಹೊಂದಿದ್ದಾರೆಂದು ಪರಿಗಣಿಸಲಾಗಿದೆ ಮತ್ತು ಅವರು ವಿಧಾನಸಭೆಯ 4-5 ಸ್ಥಾನಗಳಲ್ಲಿ ಪ್ರಭಾವ ಹೊಂದಿದ್ದಾರೆ.

ರಾಣೆ ಬಿಜೆಪಿಗೆ ಸೇರಿದರೆ ಬಿಜೆಪಿಗೆ ಕೊಂಕಣ ಪ್ರದೇಶದ ಪ್ರಬಲ ನಾಯಕನ ಬೆಂಬಲ ದೊರೆತಂತಾಗುತ್ತದೆ. ಇದರಿಂದ ಅದು ಶಿವಸೇನೆ ಜೊತೆ ಸ್ಪರ್ಧಿಸುತ್ತದೆ. ಏಕೆಂದರೆ ಮುಂಬೈ ನಂತರ ಕೊಂಕಣವನ್ನು ಶಿವಸೇನೆಯ ಭದ್ರಕೋಟೆಯೆಂದು ಪರಿಗಣಿಸಲಾಗಿದೆ.

Read More