Home> India
Advertisement

ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆಯೇ ಕನ್ನಯ್ಯ ಕುಮಾರ್ ?

ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಎಎನ್ ಐಗೆ ತಿಳಿಸಿವೆ.

ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆಯೇ ಕನ್ನಯ್ಯ ಕುಮಾರ್ ?

ನವದೆಹಲಿ: ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಅವರು ಕಾಂಗ್ರೆಸ್ ಪಕ್ಷ ಸೇರಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ಎಎನ್ ಐಗೆ ತಿಳಿಸಿವೆ.

ಇದನ್ನೂ ಓದಿ: ಬಿಹಾರದಲ್ಲಿ ಸಾರ್ವಜನಿಕ ಸಭೆಯ ನಂತರ ಕನ್ನಯ್ಯ ಕುಮಾರ್ ಬೆಂಗಾವಲು ಮೇಲೆ ದಾಳಿ

ಕನ್ನಯ್ಯ ಕುಮಾರ್ (Kanhaiya Kumar) ಕಾಂಗ್ರೆಸ್ ಪಕ್ಷಕ್ಕೆ ಸೇರಿದರೆ,ಮುಂದಿನ ದಿನಗಳಲ್ಲಿ ವಿರೋಧ ಪಕ್ಷದಲ್ಲಿ ನಾಟಕೀಯ ಬದಲಾವಣೆಯಾಗಬಹುದು ಎನ್ನಲಾಗಿದೆ.ಈಗ ಈ ನಿಟ್ಟಿನಲ್ಲಿ ಅವರು ರಾಹುಲ್ ಗಾಂಧೀ ಅವರನ್ನು ಶೀಘ್ರದಲ್ಲೇ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ,ತದನಂತರ ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕನ್ನಯ್ಯ ಕುಮಾರ್ 2019 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು, ಆದರೆ ಆಗ ಬಿಜೆಪಿಯ ಗಿರ್‌ರಾಜ್ ಸಿಂಗ್ ವಿರುದ್ಧ ಸೋತರು.ಅಂದಿನಿಂದ ಅವರು ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿಲ್ಲ.ಈಗ ಅವರು ಕಾಂಗ್ರೆಸ್ ನಲ್ಲಿ ಹೊಸ ರಾಜಕೀಯ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ದೆಹಲಿ ಸರ್ಕಾರಕ್ಕೆ ಥ್ಯಾಂಕ್ಯೂ, ಕೋರ್ಟ್ ನಲ್ಲಿ ವಿಚಾರಣೆ ತ್ವರಿತವಾಗಲಿ, ಟಿವಿಯಲ್ಲಿ ಅಲ್ಲ- ಕನ್ನಯ್ಯ ಕುಮಾರ್

ಕನ್ಹಯ್ಯಾ ಅವರನ್ನು ಕಾಂಗ್ರೆಸ್‌ನಲ್ಲಿ ಸೇರಿಸುವುದು ಪಕ್ಷದ ಉನ್ನತ ಮಟ್ಟದಲ್ಲಿ ಗಂಭೀರ ಪರಿಗಣನೆಯಲ್ಲಿದೆ, ಆದರೆ ಅವರು ಹೇಗೆ ಮತ್ತು ಯಾವಾಗ ಸೇರುತ್ತಾರೆ ಎಂಬುದನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ.ಜನತೆಯನ್ನು ಆಕರ್ಷಿಸಲು ಯಾವುದೇ ದೊಡ್ಡ ಮುಖಗಳಿಲ್ಲದ ಕಾಂಗ್ರೆಸ್ ನಲ್ಲಿ ಈಗ ಕನ್ನಯ್ಯ ಸೇರ್ಪಡೆಗೆ ಮಹತ್ವ ಬಂದಿದೆ.

ಇದನ್ನೂ ಓದಿ: ಕನ್ನಯ್ಯ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೇಜ್ರಿವಾಲ್ ಸರ್ಕಾರ ಅನುಮತಿ

ಕನ್ನಯ್ಯ ಕುಮಾರ್ ಅವರನ್ನು ವಿಶೇಷವಾಗಿ ಯುವಕರಲ್ಲಿ ಜನಸೆಳೆಯುವ ನಾಯಕ ಎಂದು ಪರಿಗಣಿಸಲಾಗುತ್ತದೆ. ಆದರೆ ಇದನ್ನು ಕಾಂಗ್ರೆಸ್ ತನ್ನ ಮಿತ್ರಪಕ್ಷ ರಾಷ್ಟ್ರೀಯ ಜನತಾದಳವು ಹೇಗೆ ನೋಡುತ್ತದೆ ಎಂಬುದನ್ನು ಪರಿಗಣಿಸಬೇಕಾಗಿದೆ.ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಮಾತುಕತೆಗಳನ್ನು ಆರಂಭಿಸಲಾಯಿತು, ಆದರೆ ಕೆಲವು ಕಾರಣಗಳಿಂದ ಯಾವುದೇ ಫಲಪ್ರದ ಫಲಿತಾಂಶಗಳು ಬಂದಿಲ್ಲ ಎಂದು ಹಿರಿಯ ನಾಯಕರೊಬ್ಬರು ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದರು. ಈಗ ಯುವ ನಾಯಕನೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Read More