Home> India
Advertisement

ದೆಹಲಿಯ ಪೀಠೋಪಕರಣ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅನಾಹುತ, ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ

ಸುಮಾರು 17ಕ್ಕೂ ಅಧಿಕ ಅಗ್ನಿ ಶಾಮಕ ವಾಹನಗಳು ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 

ದೆಹಲಿಯ ಪೀಠೋಪಕರಣ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅನಾಹುತ, ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ

ಕಾಳಿಂದಿ ಕುಂಜ್: ಆಗ್ನೇಯ ದೆಹಲಿಯ ಕಾಳಿಂದಿ ಕುಂಜ್ ಮೇತ್ರಿ ನಿಲ್ದಾಣದ ಬಳಿಯಿರುವ  ಪೀಠೋಪಕರಣ ಮಾರುಕಟ್ಟೆಯಲ್ಲಿ ಶುಕ್ರವಾರ ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದೆ.

ಸುಮಾರು 17ಕ್ಕೂ ಅಧಿಕ ಅಗ್ನಿ ಶಾಮಕ ವಾಹನಗಳು ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಘಟನೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ.

"ಶುಕ್ರವಾರ ಮುಂಜಾನೆ 5.55ರ ಸಮಯದಲ್ಲಿ ಅನಾಹುತದ ಬಗ್ಗೆ ವರದಿಯಾಗಿದ್ದು, ವಿಶಿ ತಿಳಿದ ಕೂಡಲೇ ಅಗ್ನಿಶಾಪಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಬೆಂಕಿ ಅನಾಹುತದ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋದ ಮೆಜೆಂತಾ ಲೈನ್ ನಲ್ಲಿರುವ ಜಸೋಲಾ ವಿಹಾರ್, ಶಾಹೀನ್ ಬಾಗ್ ಮತ್ತು ಕಾಳಿಂದಿ ಕುಂಜ್ ನಡುವೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅನಾನುಕುಳತೆಗಾಗಿ ವಿಷಾದಿಸುತ್ತೇವೆ" ಎಂದು ಎಂದು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ಸಿ) ಟ್ವೀಟ್ ಮಾಡಿದೆ.

Read More