Home> India
Advertisement

Viral Video: ತರಕಾರಿ ಮಾರುಕಟ್ಟೆಯಲ್ಲಿ ನಿರ್ಮಲಾ ಸೀತಾರಾಮನ್…! ಕೇಂದ್ರ ಸಚಿವೆ ಮಾಡಿದ್ದೇನು ನೋಡಿ

ವಿಡಿಯೋದಲ್ಲಿ ಅವರು ಕೆಲವು ಸಿಹಿ ಗೆಣಸುಗಳನ್ನು ಆಯ್ದುಕೊಳ್ಳುತ್ತಿರುವುದನ್ನು ಕಾಣಬಹುದು. ಅದರ ಜೊತೆಗೆ ಕೆಲವು ಹಾಗಲಕಾಯಿಯನ್ನೂ ಆಸಕ್ತಿಯಿಂದ ನೋಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಎಲ್ಲಾ ಬೆಳವಣಿಗೆಗೆ ಮುನ್ನ ನಗರದಲ್ಲಿ ವಿಶೇಷಚೇತನ ಮಕ್ಕಳ ಕೇಂದ್ರವನ್ನು ಅವರು ಉದ್ಘಾಟಿಸಿದರು.

Viral Video: ತರಕಾರಿ ಮಾರುಕಟ್ಟೆಯಲ್ಲಿ ನಿರ್ಮಲಾ ಸೀತಾರಾಮನ್…! ಕೇಂದ್ರ ಸಚಿವೆ ಮಾಡಿದ್ದೇನು ನೋಡಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮಿಳುನಾಡಿನ ಚೆನ್ನೈನ ಮೈಲಾಪುರ್ ಪ್ರದೇಶದಲ್ಲಿ ಬೀದಿ ವ್ಯಾಪಾರಿಗಳಿಂದ ತರಕಾರಿ ಖರೀದಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ಕೆಲವು ಮಾರಾಟಗಾರರೊಂದಿಗೆ ಸಂವಾದ ನಡೆಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.  

ಇದನ್ನೂ ಓದಿ: ಮುಂಬೈ ಬಂದರಿನಲ್ಲಿ ಹಣ್ಣಿನ ಕಂಟೈನರ್ ನಿಂದ ₹ 502 ಕೋಟಿ ಮೌಲ್ಯದ ಕೊಕೇನ್ ವಶ

ವಿಡಿಯೋದಲ್ಲಿ ಅವರು ಕೆಲವು ಸಿಹಿ ಗೆಣಸುಗಳನ್ನು ಆಯ್ದುಕೊಳ್ಳುತ್ತಿರುವುದನ್ನು ಕಾಣಬಹುದು. ಅದರ ಜೊತೆಗೆ ಕೆಲವು ಹಾಗಲಕಾಯಿಯನ್ನೂ ಆಸಕ್ತಿಯಿಂದ ನೋಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ಎಲ್ಲಾ ಬೆಳವಣಿಗೆಗೆ ಮುನ್ನ ನಗರದಲ್ಲಿ ವಿಶೇಷಚೇತನ ಮಕ್ಕಳ ಕೇಂದ್ರವನ್ನು ಅವರು ಉದ್ಘಾಟಿಸಿದರು.

ಟ್ವಿಟರ್ ಬಳಕೆದಾರರೊಬ್ಬರು ವೀಡಿಯೊಗೆ ಕಮೆಂಟ್ ಮಾಡಿದ್ದು, "ಮಾರಾಟಗಾರರು ಮತ್ತು ಗ್ರಾಹಕರು ಇಬ್ಬರೂ ಸಹ ಹಣದುಬ್ಬರದಿಂದ ತಮ್ಮ ಉಳಿತಾಯ ಹೇಗೆ ಸವೆತಗೊಳಿಸಬಹುದು. ಅದನ್ನು ನಿಯಂತ್ರಣಕ್ಕೆ ತರಲು ಸರ್ಕಾರವು ಹೇಗೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಲಿತರು" ಎಂದು ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 20 ರಂದು ಭಾರತದ ಮುಖ್ಯ ಅರ್ಥಶಾಸ್ತ್ರಜ್ಞ ಕೌಶಿಕ್ ದಾಸ್ ಅವರು “ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಗ್ರಾಹಕರ ಬೆಲೆ ಹಣದುಬ್ಬರವು ಸುಮಾರು 7.4 ಶೇಕಡಾದಲ್ಲಿ ಸುತ್ತುತ್ತಿದೆ" ಎಂದು ಹೇಳಿದರು.

ಇದನ್ನೂ ಓದಿ:ಈ ಮೂವರು ಜಗತ್ತಿನ ಯಾವ ಮೂಲೆಗೆ ಬೇಕಾದರೂ Passport ಇಲ್ಲದೆ ಹೋಗಬಹುದು! ಯಾರವರು?

ಆಹಾರ ಮತ್ತು ತರಕಾರಿ ಬೆಲೆಗಳ ಆವೇಗವು ಮತ್ತಷ್ಟು ಏರಿದರೆ ಅದು ಹೆಚ್ಚಾಗುವ ಅಪಾಯವಿದೆ ಎಂದು ಬಹುರಾಷ್ಟ್ರೀಯ ಹಣಕಾಸು ಸಂಸ್ಥೆ ಡಾಯ್ಚ ಬ್ಯಾಂಕ್‌ನ ವರದಿ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More