Home> India
Advertisement

Farmers Protest: ಭದ್ರತಾ ಪಡೆಗಳ ಹಠಾತ್ ನಿಯೋಜನೆ, Singhu Border ಪ್ರಸ್ತುತ ಪರಿಸ್ಥಿತಿ ಹೇಗಿದೆ?

ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಸುತ್ತಿರುವ ರೈತರ ಪ್ರತಿಭಟನೆ 69 ನೇ ದಿನಕ್ಕೆ ಕಾಲಿಟ್ಟಿದೆ.

Farmers Protest: ಭದ್ರತಾ ಪಡೆಗಳ ಹಠಾತ್ ನಿಯೋಜನೆ, Singhu Border ಪ್ರಸ್ತುತ ಪರಿಸ್ಥಿತಿ ಹೇಗಿದೆ?

ನವದೆಹಲಿ : ಹೊಸ ಕೃಷಿ ಕಾನೂನುಗಳನ್ನು (New Farm laws) ವಿರೋಧಿಸಿ ನಡೆಸುತ್ತಿರುವ ರೈತರ ಪ್ರತಿಭಟನೆ (Farmers Protest) 69 ನೇ ದಿನವೂ ಮುಂದುವರೆದಿದೆ.  ಗಣರಾಜ್ಯೋತ್ಸವದಂದು ಟ್ರಾಕ್ಟರ್ ಪೆರೇಡ್ (Tractor Parade) ಹಿಂಸಾಚಾರದ ನಂತರ ರೈತ ಚಳುವಳಿಯನ್ನು ತೀವ್ರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಗಡಿಯಲ್ಲಿ ಪೊಲೀಸರ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ಈ ಮಧ್ಯೆ ಭದ್ರತಾ ಪಡೆಗಳ ಹಠಾತ್ ನಿಯೋಜನೆ ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿ ಹೇಳುತ್ತಿದೆ.  

fallbacks

ಭಾರತ್ ಬಂದ್ ಘೋಷಣೆಯ ನಂತರ ಭದ್ರತಾ ಪಡೆಗಳ ನಿಯೋಜನೆ :
ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು (Agriculture Laws) ವಿರೋಧಿಸಿ ರೈತರ ಪ್ರತಿಭಟನೆ ನಡೆಯುತ್ತಿದೆ. ಏತನ್ಮಧ್ಯೆ ರೈತರು ಒಂದು ಕಡೆ ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳುತ್ತಿದ್ದಾರೆ. ಮತ್ತೊಂದೆಡೆ ಅವರು ಭಾರತ್ ಬಂದ್ಗೆ ಕರೆ ನೀಡಿ ಚಳುವಳಿಯನ್ನು ತೀವ್ರಗೊಳಿಸುವುದಾಗಿ ಸೂಚಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಭದ್ರತೆಯ ದೃಷ್ಟಿಯಿಂದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

fallbacks

ಸಿಂಘು ಗಡಿಯಲ್ಲಿ ಭದ್ರತಾ ಪಡೆಗಳ ನಿಯೋಜನೆ (Security forces deployed at Singhu border) :
ರೈತರ ಪ್ರತಿಭಟನೆಯ 69 ನೇ ದಿನದಂದು ಸಹ ರೈತರು ಕೃಷಿ ಕಾನೂನುಗಳ ವಿರುದ್ಧ ಸಿಂಘು ಗಡಿಯಲ್ಲಿ (Security forces) ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕೈಟ್ ನೇತೃತ್ವದಲ್ಲಿ ಇಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ರೈತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಗಡಿಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

fallbacks

ಇದನ್ನೂ ಓದಿ - ದೆಹಲಿ-ಯುಪಿ ಗಡಿ ಪ್ರದೇಶದಲ್ಲಿ ಮತ್ತಷ್ಟು ತೀವ್ರಗೊಂಡ ರೈತರ ಪ್ರತಿಭಟನೆ

ಪೊಲೀಸ್  ಭದ್ರತೆ (Police fortification) :
ಜನವರಿ 26 ರ ನಂತರ ಪ್ರತಿಭಟನಾಕಾರರ ಸಂಖ್ಯೆ ಕಡಿಮೆಯಾಯಿತು. ಆದರೆ ಮತ್ತೊಮ್ಮೆ ರೈತರ (Farmers) ಸಂಖ್ಯೆಯಲ್ಲಿ ಹೆಚ್ಚಳವನ್ನು ಕಂಡ ಪೊಲೀಸರು ದೆಹಲಿ ಗಡಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಿದ್ದಾರೆ. ಟಿಕ್ರಿ ಮತ್ತು ಗಾಜಿಪುರ ಗಡಿಯಲ್ಲಿ ಪೊಲೀಸರು ರಸ್ತೆಗೆ ಸ್ಪೈಕ್ ಹಾಕಿದ್ದಾರೆ.

ಗಾಜಿಪುರ ಗಡಿ ಮುಚ್ಚಲಾಗಿದೆ (Ghazipur border closed) :
ಮತ್ತೊಂದೆಡೆ ರೈತರ ಪ್ರತಿಭಟನೆ (Farmers Protest)ಯಿಂದಾಗಿ ಸಂಚಾರಕ್ಕಾಗಿ ಗಾಜಿಪುರ  (Ghazipur) ಗಡಿಯನ್ನು ಮುಚ್ಚಲಾಗಿದೆ. ದೆಹಲಿ ಔಟರ್ ರೇಂಜ್ ಜೊತೆಗೆ, ಸಿಪಿ ಟ್ರಾಫಿಕ್ ಒಂದು ಸಲಹೆಯನ್ನು ನೀಡಿತು, ಆನಂದ್ ವಿಹಾರ್, ಚಿಲ್ಲಾ, ಡಿಎನ್ಡಿ, ಅಪ್ಸರಾ, ಭೋಪ್ರಾ ಮತ್ತು ಲೋನಿ ಗಡಿಯ ಬದಲು ಇತರ ಮಾರ್ಗಗಳ ಮೂಲಕ ಚಲಿಸುವಂತೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ - 'ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳಿಂದ ದೇಶದ ಭವಿಷ್ಯ ಕರಾಳ'

ರಾಜ್ಯಸಭೆಯಲ್ಲಿ ಕೋಲಾಹಲ (Uproar in Rajya Sabha) :
ಕೃಷಿ ಕಾನೂನುಗಳ ವಿರುದ್ಧ ರಾಜ್ಯಸಭೆಯಲ್ಲಿ (Rajya Sabha) ಕೂಡ ಕೋಲಾಹಲ ಉಂಟಾಗಿತ್ತು. ಮೂರೂ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿದಾಗ, ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ರೈತರ ಪ್ರತಿಭಟನೆ ಕುರಿತು ಇಂದಲ್ಲ, ನಾಳೆ ಚರ್ಚೆ ನಡೆಯಲಿದೆ ಎಂದು ಹೇಳಿದರು. ಇದರ ನಂತರ ಉಂಟಾದ ಕೋಲಾಹಲದಿಂದಾಗಿ ರಾಜ್ಯಸಭೆಯ ಕಾರ್ಯಕಲಾಪವನ್ನು ನಾಳೆ ಮಧ್ಯಾಹ್ನ 12: 30 ಕ್ಕೆ ಮುಂದೂಡಲಾಗಿದೆ.

fallbacks

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More