Home> India
Advertisement

Fake Remdesivir ಪಡೆದು ಗುಣಮುಖರಾದ ಶೇ.90ರಷ್ಟು ಕೊರೊನಾ ರೋಗಿಗಳು, ಕನ್ಫ್ಯೂಸ್ ಆದ ಪೊಲೀಸರು

Fake Remdesivir - ಕರೋನಾದ (Coronavirus Second Wave) ಎರಡನೇ ಅಲೆಯಲ್ಲಿ ರೆಮ್ದೆಸಿವಿರ್ ಇಂಜೆಕ್ಷನ್‌ಗೆ ಬೇಡಿಕೆ ಏಕಾಏಕಿ  ಹೆಚ್ಚಾಗಿದೆ. ಆದರೆ, ಈ ಮಧ್ಯೆ, ಅನೇಕ ರಾಜ್ಯಗಳಲ್ಲಿ ನಕಲಿ ರೆಮ್ದೆಸಿವಿರ್ ಮಾರಾಟ ಮಾಡುವ ಜನರನ್ನು ಸಹ ಬಂಧಿಸಲಾಗಿದ್ದು, ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. 

Fake Remdesivir ಪಡೆದು ಗುಣಮುಖರಾದ ಶೇ.90ರಷ್ಟು ಕೊರೊನಾ ರೋಗಿಗಳು, ಕನ್ಫ್ಯೂಸ್ ಆದ ಪೊಲೀಸರು

ನವದೆಹಲಿ: Fake Remdesivir - ಕರೋನಾದ (Coronavirus Second Wave) ಎರಡನೇ ಅಲೆಯಲ್ಲಿ ರೆಮ್ದೆಸಿವಿರ್ ಇಂಜೆಕ್ಷನ್‌ಗೆ ಬೇಡಿಕೆ ಏಕಾಏಕಿ  ಹೆಚ್ಚಾಗಿದೆ. ಆದರೆ, ಈ ಮಧ್ಯೆ, ಅನೇಕ ರಾಜ್ಯಗಳಲ್ಲಿ ನಕಲಿ ರೆಮ್ದೆಸಿವಿರ್ ಮಾರಾಟ ಮಾಡುವ ಜನರನ್ನು ಸಹ ಬಂಧಿಸಲಾಗಿದ್ದು, ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ ಮಧ್ಯಪ್ರದೇಶದಲ್ಲೂ ಗುಜರಾತ್‌ನ ಗ್ಯಾಂಗ್‌ವೊಂದು ನಕಲಿ ರೆಮೆಡೆಸಿವಿರ್ (Fake Remdesivir) ಚುಚ್ಚುಮದ್ದನ್ನು ಅನೇಕ ಜನರಿಗೆ ಮಾರಾಟ ಮಾಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಆದೇಶದ ಮೇರೆಗೆ ಪೊಲೀಸರು ಈ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ, ಆದರೆ ಪೊಲೀಸರಿಗೆ ಕ್ರಮ ಜರುಗಿಸುವ ದಾರಿಯಲ್ಲಿ ಒಂದು ಸವಾಲು ಎದುರಾಗಿದೆ. ಏಕೆಂದರೆ ಈ ಗ್ಯಾಂಗ್ ನಕಲಿ ರೆಮೆಡೆಸಿವಿರ್ ಚುಚ್ಚುಮದ್ದನ್ನು ಮಾರಾಟ ಮಾಡಿದ ರೋಗಿಗಳಲ್ಲಿ, ಶೇಕಡಾ 90 ರಷ್ಟು ರೋಗಿಗಳನ್ನು ಉಳಿಸಲಾಗಿದೆ. ಮಧ್ಯಪ್ರದೇಶ ಪೊಲೀಸರ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಇಂದೋರ್ ಮತ್ತು ಜಬಲ್ಪುರದಿಂದ ಬಂಧಿಸಲ್ಪಟ್ಟವರ ವಿರುದ್ಧ ಒಂದೆಡೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೊಲೆ ಪ್ರಕರಣವನ್ನು ದಾಖಲಿಸಲು ಸೂಚಿಸಿದ್ದರೆ, ಇನ್ನೊಂದೆಡೆ ಹಿರಿಯ ಪೊಲೀಸ್ ಅಧಿಕಾರಿಗಳು ಎಲ್ಲರ ಮೇಲೆ ಹೇಗೆ ಕೊಲೆ ಪ್ರಕರಣ ದಾಖಲಿಸಬೇಕು ಎಂಬುದಕ್ಕೆ  ದಾರಿ ಹುಡುಕುತ್ತಿದ್ದಾರೆ.  ಏಕೆಂದರೆ, ಪೊಲೀಸ್ ಅಧಿಕಾರಿಗಳ ಪ್ರಕಾರ, ಯಾರಿಗೆ ಈ ಇಂಜೆಕ್ಷನ್ ಅನ್ನು ಮಾರಾಟ ಮಾಡಲಾಗಿದೆಯೋ ಅವರಲ್ಲಿ ಯಾರೂ ಕೂಡ ಪ್ರಾಣ ಕಳೆದುಕೊಂಡಿಲ್ಲ ಮತ್ತು ಇದೆ ಕಾರಣದಿಂದ ತಾಂತ್ರಿಕ ಅಡಚಣೆ ಎದುರಾಗಿದೆ. ಆಂಗ್ಲ ಮಾಧ್ಯಮದ ವೃತ್ತ ಪತ್ರಿಕೆಯಲ್ಲಿ ಪ್ರಕಟಗೊಂಡ  ವರದಿಯ ಪ್ರಕಾರ, ತನಿಖೆಯಲ್ಲಿ ತೊಡಗಿರುವ ಅಧಿಕಾರಿಗಳು ನಕಲಿ ಇಂಜೆಕ್ಷನ್ ಪಡೆದ ಹಾಗೂ ಅಸಲಿ ಇಂಜೆಕ್ಷನ್ (Remdesivir) ಪಡೆದ ಜನರಲ್ಲಿ ಬದುಕುಳಿದವರ ದರ ನೋಡಿ ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಗಳು "ನಾವು ಔಷಧಿ ತಜ್ಞರಲ್ಲ, ಆದರೆ, ಔಷಧಿ ತಜ್ಞರು ಇದನ್ನು ಗಮನಿಸಬೇಕು. ಏಕೆಂದರೆ ನಕಲಿ ಇಂಜೆಕ್ಷನ್ ನಲ್ಲಿ ಕೇವಲ ಗ್ಲುಕೋಸ್ ಹಾಗೂ ಉಪ್ಪಿನಾಂಶವಿದೆ" ಎಂದಿದ್ದಾರೆ.

ಇದನ್ನೂ ಓದಿ- 'ತೌಕ್ತೆ' ಎಂದರೆ 'ಗದ್ದಲ ಸೃಷ್ಟಿಸುವ ಹಲ್ಲಿ' ಎಂದರ್ಥ, ಇಲ್ಲಿದೆ ಚಂಡಮಾರುತಗಳಿಗೆ ಹೆಸರಿಡುವ ಪದ್ಧತಿ

ಹೆಸರನ್ನು ಪ್ರಕಟಿಸದೆ ಇರುವ ಷರತ್ತಿನ ಮೇಲೆ ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, "ಗುಜರಾತ್ (Gujarat) ಗ್ಯಾಂಗ್ ನಿಂದ ಇಂಜೆಕ್ಷನ್ ಖರೀದಿಸಿದ ಇಂದೋರ್ ನ 10 ಜನರು ಸಾವನ್ನಪ್ಪಿದ್ದಾರೆ. ಆದರೆ, 100 ಕ್ಕೂ ಅಧಿಕ ಜನರು ಚೇತರಿಸಿಕೊಂಡಿದ್ದಾರೆ. ಸಾವನ್ನಪ್ಪಿದ 10 ಜನರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಹೀಗಾಗಿ ಅವರ ನಮೂನೆಗಳನ್ನು ಸಂಗ್ರಹಿಸುವುದು ಸಾಧ್ಯವಿಲ್ಲ" ಎಂದಿದ್ದಾರೆ. ಆದರೆ, ರೆಮೆಡೆಸಿವಿರ್ ಇಂಜೆಕ್ಷನ್ ನೀಡುವ ಬಗ್ಗೆ ಕೇಂದ್ರ ಸರ್ಕಾರ ಹಾಗೂ ತಜ್ಞರು ಹಲವು ಸಲಹೆಗಳನ್ನು ನೀಡಿದ್ದಾರೆ. ತಜ್ಞರು ಇದನ್ನು ಮ್ಯಾಜಿಕ್ ಬುಲೆಟ್ ಎಂದು ಭಾವಿಸುವುದಿಲ್ಲ.

ಇದನ್ನೂ ಓದಿ- Palmistry: ನಿಮ್ಮ ಕೈಯಲ್ಲಿಯೂ ಕೂಡ ಈ ರೇಖೆ ಇದೆಯಾ? ಹಾಗಾದರೆ ನಿಮಗಿದೆ ಸರ್ಕಾರಿ ನೌಕರಿಯ ಯೋಗ

ಮಧ್ಯಪ್ರದೇಶದ (Madhya Pradesh) ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಗುಜರಾತ್ ಮೂಲದ ಈ ರಾಕೆಟ್ ಅನ್ನು ಮೇ 1 ರಂದು ಬಯಲಿಗೆಳೆಯಲಾಗಿದೆ. ಗುಜರಾತ್ ಪೊಲೀಸರು ನಡೆಸಿರುವ ತನಿಖೆಯ ವೇಳೆ ಆರೋಪಿಗಳು 1200 ನಕಲಿ ಇಂಜೆಕ್ಷನ್ ಮಾರಾಟಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇಂದೋರ್ ಹಾಗೂ ಜಬಲ್ ಪುರ ನಲ್ಲಿ 500 ನಕಲಿ ಇಂಜೆಕ್ಷನ್ ಅನ್ನು ಮಾರಾಟಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಆರೋಪಿಗಳು ಮೊದಲು ಮುಂಬೈನಿಂದ ಖಾಲಿ ಬಾಟಲಿಗಳನ್ನು ಖರೀದಿಸಿ ಬಳಿಕ ಅವುಗಳನ್ನು ಗ್ಲುಕೋಸ್ ಹಾಗೂ ನೀರಿನ ಮಿಶ್ರಣದಿಂದ ತುಂಬಿ ಮಾರಾಟ ಮಾಡಿದ್ದಾರೆ. ಆದರೆ, ಈ ಎಲ್ಲ ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ-ಕೇವಲ 330 ರೂ. ಪ್ರೀಮಿಯಂಗೆ ಸಿಗುತ್ತಿದೆ ಈ ವಿಮಾ ಪಾಲಸಿ, ನೀವೂ ಲಾಭ ಪಡೆದುಕೊಳ್ಳಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More