Home> India
Advertisement

WATCH: ಉತ್ತರ ಪ್ರದೇಶದಲ್ಲಿ ತಪಾಸಣೆ ವೇಳೆ ಇಂಗ್ಲಿಷ್‌ ಓದುವಲ್ಲಿ ಶಿಕ್ಷಕರು ವಿಫಲ

ತಪಾಸಣೆಯ ಸಮಯದಲ್ಲಿ ಇಂಗ್ಲಿಷ್‌ ಪುಸ್ತಕದಲ್ಲಿನ ಕೆಲವು ಸಾಲುಗಳನ್ನು ಓದಲು ಸಾಧ್ಯವಾಗದ ಕಾರಣ ಉತ್ತರ ಪ್ರದೇಶದ ಉನ್ನಾವೊದಲ್ಲಿನ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

 WATCH: ಉತ್ತರ ಪ್ರದೇಶದಲ್ಲಿ ತಪಾಸಣೆ ವೇಳೆ ಇಂಗ್ಲಿಷ್‌ ಓದುವಲ್ಲಿ ಶಿಕ್ಷಕರು ವಿಫಲ

ನವದೆಹಲಿ: ತಪಾಸಣೆಯ ಸಮಯದಲ್ಲಿ ಇಂಗ್ಲಿಷ್‌ ಪುಸ್ತಕದಲ್ಲಿನ ಕೆಲವು ಸಾಲುಗಳನ್ನು ಓದಲು ಸಾಧ್ಯವಾಗದ ಕಾರಣ ಉತ್ತರ ಪ್ರದೇಶದ ಉನ್ನಾವೊದಲ್ಲಿನ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.

ಸಿಕಂದರ್‌ಪುರ ಸರೌಸಿಯ ಶಾಲೆಯಲ್ಲಿ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ದೇವೇಂದ್ರ ಕುಮಾರ್ ಪಾಂಡೆ ಶನಿವಾರ ಸೂಚನೆ ನೀಡಿದ್ದಾರೆ. ಈ ತಪಾಸಣೆ ನವೆಂಬರ್ 28 ರಂದು ನಡೆಯಿತು.

ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೇಸಿಕ್ ಅಧಿಕಾರಿ (ಬಿಎಸ್‌ಎ) ಪ್ರದೀಪ್ ಕುಮಾರ್ ಪಾಂಡೆ 'ಜಿಲ್ಲಾ ಮ್ಯಾಜಿಸ್ಟ್ರೇಟ್ ದೇವೇಂದ್ರ ಕುಮಾರ್ ಪಾಂಡೆ ಅವರು ತಪಾಸಣೆ ನಡೆಸಿದರು, ಮತ್ತು ನಾನು ಸಹ ತಪಾಸಣೆಯ ಭಾಗವಾಗಿದ್ದೆ. 6 ಮತ್ತು 8 ನೇ ತರಗತಿಗಳಲ್ಲಿ, ಪಾಠಗಳನ್ನು ಹಿಂದಿಯಲ್ಲಿ ಓದಲು ಹೇಳಿದಾಗ, ಹೆಚ್ಚಿನ ವಿದ್ಯಾರ್ಥಿಗಳು ಅದನ್ನು ಮಾಡಿದರು. ಆದರೆ ವಿದ್ಯಾರ್ಥಿಗಳನ್ನು ಇಂಗ್ಲಿಷ್‌ನಲ್ಲಿ ಓದಲು ಮಾಡಿದಾಗ, ಅವರಲ್ಲಿ ಹೆಚ್ಚಿನವರು ವಿಫಲರಾದರು. ಜೊತೆಗೆ ಕೆಲವು ಶಿಕ್ಷಕರು ಸಹ ಓದಲು ವಿಫಲರಾಗಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ  'ಅವರು ಸ್ವತಃ ಇಂಗ್ಲಿಷ್ನಲ್ಲಿ ಓದಲು ಸಾಧ್ಯವಾಗದಿದ್ದರೆ ಅವರು ವಿದ್ಯಾರ್ಥಿಗಳಿಗೆ ಹೇಗೆ ಕಲಿಸುತ್ತಾರೆ' ಎಂದು ಪ್ರಶ್ನಿಸಿದರು.  

Read More