Home> India
Advertisement

ಮೇ 21ಕ್ಕೆ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ!

ಚುನಾವಣಾ ಆಯೋಗವು ಮೇ 21 ರಂದು ಒಂಬತ್ತು ಮಹಾರಾಷ್ಟ್ರ ವಿಧಾನ ಪರಿಷತ್ತು ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲಿದೆ.
 

ಮೇ 21ಕ್ಕೆ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ!

ನವದೆಹಲಿ: ಒಂಬತ್ತು ಮಹಾರಾಷ್ಟ್ರ (Maharashtra) ವಿಧಾನ ಪರಿಷತ್ತು ಸ್ಥಾನಗಳಿಗೆ ಚುನಾವಣಾ ಆಯೋಗ ಮೇ 21 ರಂದು ಚುನಾವಣೆ ನಡೆಸಲಿದೆ ಎಂದು ತಿಳಿದುಬಂದಿದೆ. ಈ ಮೊದಲು ನಿಗದಿಯಾಗಿದ್ದ ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯನ್ನು ಕರೋನಾವೈರಸ್ (Coronavirus) ಹರಡುವಿಕೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಕಳೆದ ವರ್ಷ ನವೆಂಬರ್ 28ರಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶಿವಸೇನೆ (Shivsena) ನಾಯಕ ಉದ್ಧವ್ ಠಾಕ್ರೆ (Uddhav Thackeray) ಅವರು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲು ಮೇ 27ರವರೆಗೆ ಸಮಯವಿದ್ದು ಒಂದೊಮ್ಮೆ ವಿಫಲವಾದರೆ ಅವರು ಆ ಸ್ಥಾನದಿಂದ ಕೆಳಗಿಳಿಯಬೇಕಾಗುತ್ತದೆ.

fallbacks

ಠಾಕ್ರೆ ಈ ಹಿಂದೆ ರಾಜ್ಯಪಾಲ ಬಿ.ಎಸ್. ಕೊಶ್ಯರಿ ಅವರನ್ನು ಮಂತ್ರಾಲಯದಲ್ಲಿ ಭೇಟಿಯಾಗಿ ಆಮೆನ್ ಬಗ್ಗೆ ಚರ್ಚಿಸಿದ್ದರು. ಖಾಲಿ ಇರುವ ಒಂಬತ್ತು ಸ್ಥಾನಗಳಿಗೆ ರಾಜ್ಯ ವಿಧಾನ ಪರಿಷತ್ತಿಗೆ ಚುನಾವಣೆ ಘೋಷಿಸುವಂತೆ ಮಹಾರಾಷ್ಟ್ರ ರಾಜ್ಯಪಾಲರು ಗುರುವಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಈ ಕುರಿತು ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ ಪೋಲ್ ಪ್ಯಾನಲ್ ಮೇ 21ರಂದು ಮತದಾನ ನಡೆಸಲು ನಿರ್ಧರಿಸಿದೆ.

ಕರೋನವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಚುನಾವಣೆಯ ಸಮಯದಲ್ಲಿ ಅನುಸರಿಸಲಾಗುವುದು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಆಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

Read More