Home> India
Advertisement

ಕಮಲ್ ಹಾಸನ್ ಪಕ್ಷಕ್ಕೆ 'ಬ್ಯಾಟರಿ ಟಾರ್ಚ್' ಚಿಹ್ನೆ ನೀಡಿದ ಚುನಾವಣಾ ಆಯೋಗ

ಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯಂ(ಎಂಎನ್ಎಮ್) ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗವು 'ಬ್ಯಾಟರಿ ಟಾರ್ಚ್' ಚಿಹ್ನೆಯನ್ನು ನೀಡಿದೆ. 

ಕಮಲ್ ಹಾಸನ್ ಪಕ್ಷಕ್ಕೆ 'ಬ್ಯಾಟರಿ ಟಾರ್ಚ್' ಚಿಹ್ನೆ ನೀಡಿದ ಚುನಾವಣಾ ಆಯೋಗ

ನವದೆಹಲಿ: ನಟ, ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯಂ(ಎಂಎನ್ಎಮ್) ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗವು 'ಬ್ಯಾಟರಿ ಟಾರ್ಚ್' ಚಿಹ್ನೆಯನ್ನು ನೀಡಿದೆ. 

ಚುನಾವಣಾ ಆಯೋಗ ನಿಗದಿಪಡಿಸಿರುವ ಚಿಹ್ನೆಯನ್ನು ಸ್ವಾಗತಿಸಿರುವ ಕಮಲ್ ಹಾಸನ್, "ಮಕ್ಕಳ್ ನೀದಿ ಮೈಯಂ ಪಕ್ಷಕ್ಕೆ ನೀಡಿರುವ ಈ ಚಿಹ್ನೆಯ ಮೂಲಕ ತಮಿಳುನಾಡು ಮತ್ತು ಭಾರತೀಯ ರಾಜಕೀಯದಲ್ಲಿ ಟಾರ್ಚ್ ಲೈಟ್ ನಂತೆ ಹೊಸ ಬೆಳಕನ್ನು ಹುಟ್ಟುಹಾಕಲು ಪ್ರಯತ್ನಿಸಲಿದೆ" ಎಂದಿದ್ದಾರೆ. 

ಈಗಾಗಲೇ ಲೋಕಸಭೆ ಚುನಾವಣೆಗೆ ತಮಿಳುನಾಡಿನಲ್ಲಿ ಎರಡು ಪ್ರಬಲ ಪಕ್ಷಗಳಾದ ಎಐಎಡಿಎಂಕೆ ಬಿಜೆಪಿಯೊಂದಿಗೆ, ಡಿಎಂಕೆ ಕಾಂಗ್ರೆಸ್ ನೊಂದಿಗೆ ತಮ್ಮ ಮೈತ್ರಿಗಳನ್ನು ಘೋಷಿಸಿವೆ. ಆದಾಗ್ಯೂ ಕಮಲ್ ಹಾಸನ್ ಅವರ ಪಕ್ಷ ತಮಿಳುನಾಡಿನ 39 ಕ್ಷೇತ್ರಗಳಲ್ಲಿ ಮತ್ತು ಪುದುಚೆರಿಯಲ್ಲಿ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲು ನಿರ್ಧರಿಸಿದೆ.

ಕಳೆದ ವರ್ಷ ಫೆಬ್ರವರಿ 21ರಂದು ಕಮಲ್ ಹಾಸನ್​ ಅವರು ಮಕ್ಕಳ್​ ನಿಧಿ ಮೈಮ್ (ಎಂಎನ್​ಎಂ) ಪಕ್ಷವನ್ನು ಆರಂಭಿಸಿದ್ದರು. ತಮಿಳುನಾಡಿನ ಮಧುರೈನಲ್ಲಿ ಅಧಿಕೃತವಾಗಿ ಸಾರ್ವಜನಿಕವಾಗಿ ಪಕ್ಷ ಘೋಷಣೆ ಮಾಡಿದ್ದರು. ಆರು ಕೈಗಳು ಒಂದಕ್ಕೊಂದು ಬೆಸೆದುಕೊಂಡಿರುವ ಚಿತ್ರವುಳ್ಳ ಧ್ವಜವನ್ನು ಅನಾವರಣ ಮಾಡಿದ್ದರು. ಅಲ್ಲದೆ, ಇತ್ತೀಚೆಗಷ್ಟೇ ಕಮಲ್ ಹಾಸನ್ ಅವರು, ತಮಿಳುನಾಡಿನ ಪ್ರತಿಯೊಂದು ಚುನಾವಣೆಯಲ್ಲೂ ತಮ್ಮ ಪಕ್ಷ ವಿಜಯಶಾಲಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

Read More