Home> India
Advertisement

ಒಡಿಶಾದಲ್ಲಿ ಹಳಿ ತಪ್ಪಿದ ಮುಂಬೈ-ಭುವನೇಶ್ವರ ರೈಲಿನ ಎಂಟು ಬೋಗಿಗಳು

ಆರಂಭಿಕ ವರದಿಯ ಪ್ರಕಾರ, ಸೂಪರ್-ಫಾಸ್ಟ್ ಎಕ್ಸ್‌ಪ್ರೆಸ್‌ನ ಸುಮಾರು ಎಂಟು ಬೋಗಿಗಳು ಸಲಗಾಂವ್ ಮತ್ತು ನೆರ್ಗುಂಡಿ ನಡುವಿನ ಸರಕು ರೈಲಿನ ಗಾರ್ಡ್ ವ್ಯಾನ್‌ಗೆ ಡಿಕ್ಕಿ ಹೊಡೆದ ನಂತರ ಹಳಿ ತಪ್ಪಿದೆ.
 

ಒಡಿಶಾದಲ್ಲಿ ಹಳಿ ತಪ್ಪಿದ ಮುಂಬೈ-ಭುವನೇಶ್ವರ ರೈಲಿನ ಎಂಟು ಬೋಗಿಗಳು

ಭುವನೇಶ್ವರ: ಮುಂಬೈ-ಭುವನೇಶ್ವರ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ) ಎಕ್ಸ್‌ಪ್ರೆಸ್ ಒಡಿಶಾದ ಕಟಕ್‌ನ ನೆರ್ಗುಂಡಿ ರೈಲು ನಿಲ್ದಾಣದ ಬಳಿ ಹಳಿ ತಪ್ಪಿ ಕನಿಷ್ಠ 40 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಆರಂಭಿಕ ವರದಿಯ ಪ್ರಕಾರ, ಸೂಪರ್-ಫಾಸ್ಟ್ ಎಕ್ಸ್‌ಪ್ರೆಸ್‌ನ (12879) ಸುಮಾರು ಎಂಟು ಬೋಗಿಗಳು ಸಲಗಾಂವ್ ಮತ್ತು ನೆರ್ಗುಂಡಿ ನಡುವಿನ ಸರಕು ರೈಲಿನ ಗಾರ್ಡ್ ವ್ಯಾನ್‌ಗೆ ಡಿಕ್ಕಿ ಹೊಡೆದ ನಂತರ ಹಳಿ ತಪ್ಪಿದವು. ಐದು ಬೋಗಿಗಳು ಹಳಿ ತಪ್ಪಿದ್ದರೆ, ಇತರ ಮೂರು ಬೋಗಿಗಳು ಹಳಿಗಳಿಂದ ಭಾಗಶಃ ಹೊರಬಿದ್ದಿವೆ. ಅಪಘಾತದ ಬಳಿಕ ರೈಲ್ವೆ ಇಲಾಖೆಯಿಂದ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಸಹಾಯವಾಣಿ ಸಂಖ್ಯೆಗಳು - 0671 1072 ಮತ್ತು 0674 1072. ಬಿಬಿಎಸ್ / ಪ್ರಧಾನ ಕಚೇರಿಯ ಸಹಾಯವಾಣಿ ಸಂಖ್ಯೆಗಳು 18003457401/402 ಮತ್ತು ಬಿಬಿಎಸ್ ನಿಲ್ದಾಣದ ಸಂಖ್ಯೆ 0674-1072 ಮತ್ತು ಪುರಿ 06752-1072.

ಪೂರ್ವ ಕರಾವಳಿ ರೈಲ್ವೆ ವಲಯ (ಇಸಿಒಆರ್) ಮೂಲಗಳು 40 ಪ್ರಯಾಣಿಕರು ಗಾಯಗೊಂಡಿದ್ದು, ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿಯಾಗಿದೆ. ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಮತ್ತು ಆಂಬುಲೆನ್ಸ್‌ಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸ್ಥಳ ತಲುಪಿದ ಅಧಿಕಾರಿಗಳು ನಾಲ್ಕು  ಜನರಿಗೆ ಗಂಭೀರ ಗಾಯಗಳಾಗಿದ್ದು, 11 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿ ಮಾಡಿದ್ದಾರೆ. ಎಲ್ಲಾ ಪ್ರಯಾಣಿಕರನ್ನು ಅಪಘಾತದ ಸ್ಥಳದಿಂದ ಸ್ಥಳಾಂತರಿಸಲಾಗಿದೆ. ದೊಡ್ಡ ಗಾಯಗಳಿಂದ ಬಳಲುತ್ತಿರುವವರನ್ನು ಕಟಕ್ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.

ಉಳಿದ ಎಲ್ಲ ಪ್ರಯಾಣಿಕರಿಗೆ ತಮ್ಮ ಗಮ್ಯಸ್ಥಾನಕ್ಕೆ ತೆರಳಲು ಅಧಿಕಾರಿಗಳು ಬಸ್ಸುಗಳನ್ನು ವ್ಯವಸ್ಥೆ ಮಾಡಿದ್ದಾರೆ. ಅಪಘಾತದ ಸ್ಥಳದಿಂದ ಕಟಕ್ ಸುಮಾರು ಹತ್ತು ಹನ್ನೆರಡು ಕಿ.ಮೀ ಮತ್ತು ಭುವನೇಶ್ವರ (ಟರ್ಮಿನೇಟಿಂಗ್ ಸ್ಟೇಷನ್) ಸುಮಾರು 35 ಕಿ.ಮೀ. ಇದೆ. 

ಈ ರೈಲು ಅಪಘಾತದ ಬಳಿಕ ಆ ಮಾರ್ಗವಾಗಿ ಸಂಚರಿಸುವ ಹಲವಾರು ರೈಲುಗಳ ಮಾರ್ಗ ಬದಲಿಸಲಾಗಿದೆ - 12880 ಎಕ್ಸ್‌ಪ್ರೆಸ್ (ಭುವನೇಶ್ವರ– ಎಲ್‌ಟಿಟಿ) ನಾರಾಜ್ ಮೂಲಕ ಚಲಿಸಲಿದ್ದರೆ, 58132 (ಪುರಿ - ರೂರ್ಕೆಲಾ) ಪ್ಯಾಸೆಂಜರ್ ಡೈವರ್ಟೆಡ್ VIA ನಾರಾಜ್, 18426 ಎಕ್ಸ್‌ಪಿ (ದುರ್ಗ್ - ಪುರಿ) ಎಕ್ಸ್‌ಪಿ ಡೈವರ್ಟೆಡ್ VIA ನಾರಾಜ್, ರಾಜಾಭರಾ ರಾಜರಾಜ್ ಮತ್ತು 68413 (ಟಾಲ್ಚರ್ - ಪುರಿ) ಮೆಮು ನರಜ್ ಮಾರ್ಗವಾಗಿ ಡೈವರ್ಟ್ ಮಾಡಲಾಗಿದೆ. ರೈಲು ಸಂಚಾರವನ್ನು ಮರುಸ್ಥಾಪಿಸುವ ಕೆಲಸ ಪ್ರಗತಿಯಲ್ಲಿದೆ.

ಬಿ 1 ಕೋಚ್‌ನ 26 ನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದ ಪ್ರಭು ತ್ರಿಪಾಠಿ ಎಂಬ ಪ್ರಯಾಣಿಕ ಅಪಘಾತದ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿ ಪ್ರಯಾಣಿಕರಿಗೆ ಸಹಾಯ ಕೋರಿದ್ದಾರೆ. ಟ್ವೀಟ್‌ಗೆ ಪ್ರತಿಕ್ರಿಯಿಸಿದ ಭಾರತೀಯ ರೈಲ್ವೆ ಸೇವಾ, ಪ್ರಯಾಣಿಕರನ್ನು ರಕ್ಷಿಸಲು ಅಗತ್ಯ ನೆರವು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, "ಕಟಕ್‌ನಲ್ಲಿ ಮುಂಬೈ-ಭುವನೇಶ್ವರ ಎಲ್‌ಟಿಟಿ ಎಕ್ಸ್‌ಪ್ರೆಸ್ ಅಪಘಾತದ ಬಗ್ಗೆ ತಿಳಿದುಕೊಳ್ಳಲು ನೋವುಂಟಾಗಿದೆ. ಅಪಘಾತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂಬುದು ಸಮಾಧಾನ ತಂದಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ" ಟ್ವೀಟ್ ಮಾಡಿದ್ದಾರೆ.

Read More