Home> India
Advertisement

ಗುಜರಾತ್‌ನ ಕಚ್‌ನಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲು

ಮಧ್ಯಾಹ್ನ ಸುಮಾರು 2.43 ಗಂಟೆಯಲ್ಲಿ ಕಚ್ ಜಿಲ್ಲೆಯ ಭಚೌ ನಗರದಲ್ಲಿ ಭೂಮಿ ಕಂಪಿಸಿದೆ. 

ಗುಜರಾತ್‌ನ ಕಚ್‌ನಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲು

ಕಚ್: ಗುಜರಾತಿನ ಕಚ್ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ. 

ಮಧ್ಯಾಹ್ನ ಸುಮಾರು 2.43 ಗಂಟೆಯಲ್ಲಿ ಜಿಲ್ಲೆಯ ಭಚೌ ನಗರದಲ್ಲಿ ಭೂಮಿ ಕಂಪಿಸಿದೆ. ಗಾಂಧಿನಗರದ ಭೂಕಂಪನ ಸಂಶೋಧನಾ ಸಂಸ್ಥೆಯ ಪ್ರಕಾರ,  ಭಚೌ ಬಳಿ ವಾಯುವ್ಯಕ್ಕೆ ಆರು ಕಿ.ಮೀ.ಗೆ ಭೂಕಂಪದ ಕೇಂದ್ರ ಬಿಂದು ಇತ್ತು ಎನ್ನಲಾಗಿದೆ.

ಭಚೌ ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಆತಂಕಗೊಂಡ ಜನತೆ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಆದರೆ ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. 

Read More