Home> India
Advertisement

ಮಹಾರಾಷ್ಟ್ರ: ಪಾಲ್ಘರ್ ನಲ್ಲಿ ಭೂಕಂಪ, ಎರಡು ವರ್ಷದ ಮಗು ಸಾವು

ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ಮೂರು ರಿಂದ 4.1 ರವರೆಗೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಮಹಾರಾಷ್ಟ್ರ: ಪಾಲ್ಘರ್ ನಲ್ಲಿ ಭೂಕಂಪ, ಎರಡು ವರ್ಷದ ಮಗು ಸಾವು

ಪಾಲ್ಘರ್: ಶುಕ್ರವಾರ (ಫೆಬ್ರವರಿ 01) ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮೂರು ಬಾರಿ ಭೂಕಂಪಗಳ ಬಗ್ಗೆ ವರದಿಯಾಗಿದೆ. ಈ ವೇಳೆ ಗೋಡೆ ಕುಸಿತದಿಂದ ಎರಡು ವರ್ಷದ ಹೆಣ್ಣು ಮಗು ಸಾವನ್ನಪ್ಪಿದೆ ಎನ್ನಲಾಗಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ಮೂರು ರಿಂದ 4.1 ರವರೆಗೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾಹಿತಿಯ ಪ್ರಕಾರ, ಫೆಬ್ರವರಿ 1 ರಂದು ಪಾಲ್ಘರ್ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಭೂಕಂಪನ ಭೂಕಂಪಗಳು ಕಂಡುಬಂದವು. ಮಧ್ಯಾಹ್ನ 2.06ರ ವೇಳೆಗೆ ಮೊದಲ ಬಾರಿಗೆ ಭೂಕಂಪ ಸಂಭವಿಸಿದ್ದು ರಿಯಾಕ್ಟರ್ ಮಾಪಕದಲ್ಲಿ 4.1 ರ ತೀವ್ರತೆ ದಾಖಲಾಗಿದೆ. ಮಧ್ಯಾಹ್ನ 3.53 ಕ್ಕೆ ಎರಡನೇ ಬಾರಿಗೆ ಭೂಕಂಪದ ಅನುಭವವಾಗಿದ್ದು 3.6ತೀವ್ರತೆ ದಾಖಲಾಗಿದೆ. ಮಧ್ಯಾಹ್ನ 3.57 ಕ್ಕೆ ಮೂರನೇ ಬಾರಿಗೆ ಭೂಕಂಪ ಸಂಭವಿಸಿದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರ ತೀಕ್ಷ್ಣತೆಯನ್ನು ದಾಖಲಾಗಿದೆ. ಭೂಕಂಪದ ಆಘಾತದಿಂದಾಗಿ, ಆಡಳಿತವನ್ನು ಎಚ್ಚರಗೊಳಿಸಲಾಗಿದೆ. ಎನ್ಡಿಆರ್ಎಫ್ ತಂಡವನ್ನು ಸಹ ನಿಯೋಜಿಸಲಾಗಿದೆ. ಮಾಹಿತಿ ಪ್ರಕಾರ, ಜನರು ತಮ್ಮ ಸ್ವಂತ ಮನೆ ಖಾಲಿ ಮಾಡಲು ಪ್ರಾರಂಭಿಸಿದ್ದಾರೆ. 

ಈ ಪ್ರದೇಶದಲ್ಲಿ ಮೂರು ತಿಂಗಳಲ್ಲಿ ಸುಮಾರು 15 ಭೂಕಂಪದ ಆಘಾತಗಳು ಸಂಭವಿಸಿವೆ. ಈ ಬಗ್ಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ಕಳೆದ ಮೂರು ತಿಂಗಳಲ್ಲಿ 50 ಕ್ಕೂ ಅಧಿಕ ಭೂಕಂಪದ ಆಘಾತಗಳನ್ನು ನಾವು ನೋಡಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ ಆದರೆ ರಿಕ್ಟರ್ ಮಾಪಕದಲ್ಲಿ ಅಷ್ಟು ಭೂಕಂಪವಾದ ಬಗ್ಗೆ ದಾಖಲಾಗಿಲ್ಲ. 

Read More