Home> India
Advertisement

ಕೈಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ

ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದ 7 ವರ್ಷದ ಬಾಲಕಿಯು, ಭಾನುವಾರ ಬೆಳಿಗ್ಗೆ ಸಮೀಪದ ಡಿಡಿಎ ಉದ್ಯಾನವನದ ಬಳಿ ಶವವಾಗಿ ಪತ್ತೆಯಾಗಿದ್ದಾಳೆ.

ಕೈಕಾಲು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಬಾಲಕಿ ಶವ ಪತ್ತೆ

ನವದೆಹಲಿ: ಕೈ ಕಟ್ಟಿಹಾಕಿದ ಸ್ಥಿತಿಯಲ್ಲಿ ಬಾಲಕಿಯ ಶವವೊಂದು ಪತ್ತೆಯಾಗಿರುವ ಘಟನೆ ದೆಹಲಿಯ ಹೊರವಲಯದಲ್ಲಿರುವ ನಿಹಾಲ್ ವಿಹಾರ್ ಪ್ರದೇಶದಲ್ಲಿ ನಡೆದಿದೆ. 

ಶನಿವಾರ ರಾತ್ರಿಯಿಂದ ನಾಪತ್ತೆಯಾಗಿದ್ದ 7 ವರ್ಷದ ಬಾಲಕಿಯು, ಭಾನುವಾರ ಬೆಳಿಗ್ಗೆ ಸಮೀಪದ ಡಿಡಿಎ ಉದ್ಯಾನವನದ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಕೈ ಕಾಲುಗಳನ್ನು ಗಳನ್ನು ಕಟ್ಟಿ ಹಾಕಿದ್ದು, ತಲೆಗೆ ಬಲವಾದ ಪೆಟ್ಟುಬಿದ್ದಿದೆ. ಬಹುಶಃ ದುಷ್ಕರ್ಮಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಅಮಾನುಷವಾಗಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ದೆಹಲಿಯ ನಿಹಾಲ್ ವಿಹಾರದಲ್ಲಿ ತನ್ನ ಪೋಷಕರೊಂದಿಗೆ ವಾಸವಿದ್ದ 7 ವರ್ಷದ ಬಾಲಕಿ, ಹತ್ತಿರದ ಶಾಲೆಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶನಿವಾರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ತನ್ನ ಸಹೋದರಿಯೊಂದಿಗೆ ನೂಡಲ್ಸ್ ತರಲೆಂದು ಹೋದ ಬಾಲಕಿ ಮನೆಗೆ ಹಿಂದಿರುಗಲೇ ಇಲ್ಲ. ಕೇವಲ ಸಹೋದರಿ ಮಾತ್ರ ಮನೆಗೆ ಬಂದದ್ದು ಕಂಡ ಪೋಷಕರು ಗಾಬರಿಗೊಂದು ಎಲ್ಲೆಡೆ ಹುಡುಕಾಡಿದ್ದಾರೆ. ಆದರೂ ಬಾಲಕಿ ಕಾಣದ ಹಿನ್ನೆಲೆಯಲ್ಲಿ ನಿಹಾಲ್ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಬಾಲಕಿಯ ಶವ ಪತ್ತೆಹಚ್ಚಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

Read More