Home> India
Advertisement

ಪಥ ಬದಲಿಸಿದ ವಾಯು ಚಂಡಮಾರುತ: ಗುಜರಾತ್​ಗಿಲ್ಲ ಭೀತಿ, ಕರ್ನಾಟದ ಸೇರಿದಂತೆ ಹಲವೆಡೆ ಹೈ ಅಲರ್ಟ್ ಘೋಷಣೆ

ವಾಯು ಚಂಡಮಾರುತ ತನ್ನ ಪಥ ಬದಲಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಕರ್ನಾಟಕದ ಸಮುದ್ರ ತೀರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಪಥ ಬದಲಿಸಿದ ವಾಯು ಚಂಡಮಾರುತ: ಗುಜರಾತ್​ಗಿಲ್ಲ ಭೀತಿ, ಕರ್ನಾಟದ ಸೇರಿದಂತೆ ಹಲವೆಡೆ ಹೈ ಅಲರ್ಟ್ ಘೋಷಣೆ

ಅಹ್ಮದಾಬಾದ್: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಹುಟ್ಟಿಕೊಂಡಿದ್ದ 'ವಾಯು' ಚಂಡಮಾರುತ ಇಂದು ಮಧ್ಯಾಹ್ನ ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ವಾಯು ಚಂಡಮಾರುತ ತನ್ನ ಪಥ ಬದಲಿಸಿರುವ ಹಿನ್ನೆಲೆಯಲ್ಲಿ  ಗುಜರಾತ್​ಗೆ ಅಪ್ಪಳಿಸುವುದಿಲ್ಲ. ಆದರೆ, ವೆರಾವಲ್, ಪೋರಬಂದರ್ ಹಾಗೂ ದ್ವಾರಕಾ ಕರಾವಳಿ ತೀರದಲ್ಲಿ ಹಾದುಹೋಗಲಿದೆ. ಇದರಿಂದಾಗಿ ಈ ಭಾಗಗಳಲ್ಲಿ ಭಾರೀ ಗಾಳಿ-ಮಳೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಾಯು ಚಂಡಮಾರುತ ತನ್ನ ಪಥ ಬದಲಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಕರ್ನಾಟಕದ ಸಮುದ್ರ ತೀರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಭಾಗಗಳಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಇನ್ನು ಸೌರಾಷ್ಟ್ರ, ಅಮ್ರೇಲಿ, ಗಿರ್ ಸೋಮನಾಥ್, ದಿಯು, ಜುನಾಘಡ್, ಪೋರಬಂದರ್, ರಾಜ್ ಕೋಟ್, ದ್ವಾರಕಾ, ದೇವ್ ಭೂಮಿ, ಕಚ್ ಮತ್ತು ಮಹುವಾದಲ್ಲಿ ಭಾರೀ ಬಿರುಗಾಳಿ ಸಹಿತ ಮಲೆಯಾಗುತಿದೆ. ಇಲ್ಲಿ ಚಂಡಮಾರುತದ ವೇಗ 135-160 ಕಿ.ಮೀ ಇರಲಿದೆ. ಅಲ್ಲದೆ ಈ ಮಾರುತ 180 ಕಿ.ಮೀ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಅಧಿಕ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಈ ಭಾಗದಲ್ಲಿ ನಿಯೋಜನೆ ಮಾಡಲಾಗಿದೆ.
 

Read More