Home> India
Advertisement

ಅಪಾಯಕಾರಿ ರೂಪ ಪಡೆಯುವತ್ತ ಸಾಗುತ್ತಿದೆ 'ಅಮ್ಫನ್' ಚಂಡಮಾರುತ

'ಅಮ್ಫನ್' ಚಂಡಮಾರುತದ ಹಿನ್ನೆಲೆ ಬಂಗಾಳದಲ್ಲಿ ತೀವ್ರ ಬಿರುಗಾಳಿಯೊಂದಿಗೆ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ವರದಿ ನೀಡಿದೆ.

ಅಪಾಯಕಾರಿ ರೂಪ ಪಡೆಯುವತ್ತ ಸಾಗುತ್ತಿದೆ 'ಅಮ್ಫನ್' ಚಂಡಮಾರುತ

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿರುವ ಚಂಡಮಾರುತ ಇದೀಗ ಭಯಂಕರ ರೂಪ ಪಡೆದುಕೊಳ್ಳುವತ್ತ ತಿರುಗಿದೆ. ಹೌದು, ಕಳೆದ ಆರು ಗಂಟೆಗಳಲ್ಲಿ ಈ ಚಂಡಮಾರುತ ಈಶಾನ್ಯ ದಿಕ್ಕಿನಲ್ಲಿ ಪ್ರತಿ ಗಂಟೆಗೆ 3 ಕೀ.ಮೀ ವೇಗದಲ್ಲಿ ಸಂಚರಿಸಲು ಆರಂಭಿಸಿದ್ದು, ಭೀಕರ ಚಂಡಮಾರುತವಾಗಿ ಮಾರ್ಪಟ್ಟಿದೆ. ಮುಂದಿನ 12 ಗಂಟೆಗಳಲ್ಲಿ ಇದು ಅಪಾಯಕಾರಿ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಈ ಚಂಡಮಾರುತ ಮೇ 20ರ ಮಧ್ಯಾಹ್ನ ಅಥವಾ ಸಂಜೆಯ ವೇಳೆಯ ಹೊತ್ತಿಗೆ ಸಾಗರ ದ್ವೀಪ(ಪಶ್ಚಿಮ ಬಂಗಾಳ) ಹಾಗೂ ಹತಿಯಾ ದ್ವೀಪ (ಬಾಂಗ್ಲಾದೇಶ) ನಡುವೆ ಅಂಫೋನ್ ಚಂದ ಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು IMD ನಿರ್ದೇಶಕ ಎಚ್.ಆರ್. ವಿಶ್ವಾಸ್ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲ ಮೇ 10ರವರೆಗೆ ಈ ಚಂಡಮಾರುತ ಗಂಟೆಗೆ 200 ಕಿ.ಮೀ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದೂ ಕೂಡ ಹೇಳಲಾಗುತ್ತಿದೆ. ಈ ಚಂಡಮಾರುತದ ಹಿನ್ನೆಲೆ ಓಡಿಷಾ ಹಾಗೂ ಪಶ್ಚಿಮ ಬಂಗಾಳದ ಕಡಲು ತೀರಗಳಲ್ಲಿ ಎರಡು ದಿನಗಳವರೆಗೆ ಭಾರಿ ಬಿರುಗಾಳಿಯ ಜೊತೆಗೆ ಮಳೆ ಬೀಳುವ ಸಾಧ್ಯತೆ ಇದೆ ಎಂದು ವರ್ತಿಸಲಾಗುತ್ತಿದೆ. ಮೇ 20 ವೇಳೆಗೆ ಈ ಚಂಡಮಾರುತ ಎರಡೂ ರಾಜ್ಯಗಳಿಂದ ಹಾದುಹೋಗಲಿದೆ. ಈ ಚಂಡಮಾರುತದ ಗತಿ ಹಾಗೂ ಸಾಮರ್ಥ್ಯವನ್ನು ಪರಿಗಣಿಸಿ, ಅಂಫೋನ್ ಚಂಡಮಾರುತ ಹಾಯ್ದುಹೋಗುವ ಮಾರ್ಗಗಳಲ್ಲಿ ಸಂಚರಿಸಲಿರುವ ಎಲ್ಲಾ ಶ್ರಮಿಕ್ ವಿಶೇಷ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಚಂಡಮಾರುತದ ಹಿನ್ನೆಲೆ ಮೇ 17-ಮೇ 18 ರ ನಡುವೆ ಮಧ್ಯ ಬಂಗಾಳಕೊಲ್ಲಿ, ದಕ್ಷಿಣ ಬಂಗಾಳ ಕೊಲ್ಲಿಯಲ್ಲಿ ಮುಂದಿನ 24 ಗಂಟೆಗಳವರೆಗೆ ಹಾಗೂ ಉತ್ತರ ಬಂಗಾಳಕೊಲ್ಲಿಯಲ್ಲಿ ಮೇ 18-20ವರೆಗೆ ಮೀನುಗಾರಿಕೆಗೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಓಡಿಷಾಗಳಲ್ಲಿಯೂ ಕೂಡ ಮೇ 20ರವರೆಗೆ ಮೀನುಗಾರರಿಗೆ ಕಡಲಿನಿಂದ ದೂರ ಇರುವಂತೆ ಮೀನುಗಾರರಿಗೆ ಅಲರ್ಟ್ ಜಾರಿಗೊಳಿಸಲಾಗಿದೆ.

Read More