Home> India
Advertisement

Corona Vaccine ತಯಾರಿಸುವ ಕಂಪನಿ Modi ಸರ್ಕಾರವನ್ನು ಕೇಳಿದ್ದೇನು ಗೊತ್ತಾ?

ಕಳೆದ 9 ತಿಂಗಳಿನಿಂದ ಮುಂದುವರೆದಿರುವ ಕೊರೊನಾವೈರಸ್ ಮಹಾಮಾರಿಯ ನಡುವೆಯೇ  ಈ ಸಾಂಕ್ರಾಮಿಕಕ್ಕೆ ಲಸಿಕೆ ಅಭಿವೃದ್ಧಿಗೊಳಿಸುವ ಕೆಲಸ ಕೂಡ ಮುಂದುವರೆದಿದೆ.  ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಲಸಿಕೆ ತಯಾರಿಕೆಯ ಸನೀಹಕ್ಕೆ ತಲುಪಿದೆ. ಆದರೆ ಏತನ್ಮಧ್ಯೆ, ಈ ಔಷಧಿ ತಯಾರಿಕ ಕಂಪನಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಪ್ರಶ್ನೆಯೊಂದನ್ನು ಕೇಳಿದೆ.

Corona Vaccine ತಯಾರಿಸುವ ಕಂಪನಿ Modi ಸರ್ಕಾರವನ್ನು ಕೇಳಿದ್ದೇನು ಗೊತ್ತಾ?

ನವದೆಹಲಿ: ಕಳೆದ 9 ತಿಂಗಳಿನಿಂದ ಮುಂದುವರೆದಿರುವ ಕೊರೊನಾವೈರಸ್ (Coronavirus) ಮಹಾಮಾರಿಯ ನಡುವೆಯೇ  ಈ ಸಾಂಕ್ರಾಮಿಕಕ್ಕೆ ಲಸಿಕೆ ಅಭಿವೃದ್ಧಿಗೊಳಿಸುವ ಕೆಲಸ ಕೂಡ ಮುಂದುವರೆದಿದೆ.  ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಲಸಿಕೆ ತಯಾರಿಕೆಯ ಸನೀಹಕ್ಕೆ ತಲುಪಿದೆ. ಆದರೆ ಏತನ್ಮಧ್ಯೆ, ಈ ಔಷಧಿ ತಯಾರಿಕ ಕಂಪನಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಪ್ರಶ್ನೆಯೊಂದನ್ನು ಕೇಳಿದೆ.

ಇದನ್ನು ಓದಿ- Good News: ನವೆಂಬರ್ ನಲ್ಲಿ ಭಾರತಕ್ಕೆ ಬರಲಿದೆ Corona Vaccine! ರಷ್ಯಾ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ Dr.Reddy's Lab

ಕೇಂದ್ರ ಸರ್ಕಾರ 80 ಸಾವಿರ ಕೋಟಿ ರೂ. ವ್ಯವಸ್ಥೆ ಮಾಡಲಿದೆಯೇ?
ಈ ಕುರಿತು ಸರ್ಕಾರಕ್ಕೆ ಪ್ರಶ್ನೆ ಕೆಲಿರುಅ ಸಿರಾಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಓ ಆದರ್ ಪೂನಾವಾಲಾ, ಕೊರೊನಾ ವೈರಸ್ ವ್ಯಾಕ್ಸಿನ್ ಖರೀದಿ ಹಾಗೂ ಅದರ ವಿತರಣೆಗೆ ಸರ್ಕಾರದ ಬಳಿ 80,000 ಕೋಟಿ ರೂ ವ್ಯವಸ್ಥೆ ಆಗಲಿದೆಯೇ? ಎಂದಿದ್ದಾರೆ.  SII, ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಜೊತೆ ಸೇರಿ ಕೊರೊನಾ ವ್ಯಾಕ್ಸಿನ್ ನ ಸಂಭವನೀಯ ಲಸಿಕೆ ಅಭಿವೃದ್ಧಿಗೊಳಿಸುತ್ತಿದೆ.

ಇದನ್ನು ಓದಿ- ಕೊರೊನಾದಿಂದ ಶ್ವಾಸಕೋಶ-ಹೃದಯಕ್ಕೆ ದೀರ್ಘಕಾಲದ ಹಾನಿ

ಈ ಕುರಿತು ಟ್ವೀಟ್ ಮಾಡಿರುವ ಪೂನಾವಾಲಾ, " ಭಾರತ ಸರ್ಕಾರದ ಬಳಿ ಮುಂದಿನ ವರ್ಷದ ವೇಳೆಗೆ 80 ಸಾವಿರ ಕೋಟಿ ರೂ. ಗಳು ಇರಲಿವೆಯೇ. ಭಾರತಲ್ಲಿ ಎಲ್ಲರಿಗಾಗಿ ಲಸಿಕೆ ಖರೀದಿಸಲು ಹಾಗೂ ವಿತರಿಸಲು ಈ ಹಣ ಅವಶ್ಯಕತೆ ಇದೆ" ಎಂದಿದ್ದಾರೆ.

ತಮ್ಮ ಈ ಟ್ವೀಟ್ ಅನ್ನು ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಲಯವನ್ನು ಕೂಡ ಟ್ಯಾಗ್ ಮಾಡಿದ್ದಾರೆ. ಮುಂದೆ ಈ ಸಮಸ್ಯೆ ಎದುರಾಗಲಿದ್ದು, ಇದನ್ನು ನಾವು ಸಮರ್ಥವಾಗಿ ಎದುರಿಸಬೇಕಾಗಲಿದೆ.

ಇದನ್ನು ಓದಿ- ಮೂಲವ್ಯಾಧಿ ನಿವಾರಣೆಗೆ ಬೆಲ್ಲ ಉತ್ತಮ ಮನೆಮದ್ದು, ಇತರೆ ರೋಗಗಳಿಗೂ ಇದು ರಾಮಬಾಣ

" ಭಾರತದ ಹಾಗೂ ವಿದೇಶಗಳಲ್ಲಿನ ವ್ಯಾಕ್ಸಿನ್ ನಿರ್ಮಾಪಕರು ಖರೀದಿ ಹಾಗೂ ವಿತರಣೆಯ ವಿಷಯದಲ್ಲಿ ದೇಶದ ಅವಶ್ಯಕತೆಗಳನ್ನೂ ಪೂರೈಸುವ ನಿಟ್ಟಿನಲ್ಲಿ ಯೋಜನೆ ಹಾಗೂ ದಿಕ್ಕುಹೊಂದಿರುವುದು ಅವಶ್ಯಕವಿದೆ" ಎಂದು ಅವರು ಹೇಳಿದ್ದಾರೆ.

Read More