Home> India
Advertisement

ನೂತನ ಸಂಸತ್ ಕಟ್ಟಡ ನಿರ್ಮಾಣ ಪ್ರಸ್ತಾವ ಪರಿಗಣಿಸಲಾಗುವುದು- ಸ್ಪೀಕರ್ ಓಂ ಬಿರ್ಲಾ

 ನೂತನ ಸಂಸತ್ತಿನ ಕಟ್ಟಡದ ನಿರ್ಮಾಣವನ್ನು ಪರಿಗಣಿಸಲಾಗುತ್ತಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಶನಿವಾರ ಹೇಳಿದರು, ಆದರೆ ಈ ವಿಚಾರವಾಗಿ ಇನ್ನೂ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

ನೂತನ ಸಂಸತ್ ಕಟ್ಟಡ ನಿರ್ಮಾಣ ಪ್ರಸ್ತಾವ ಪರಿಗಣಿಸಲಾಗುವುದು- ಸ್ಪೀಕರ್ ಓಂ ಬಿರ್ಲಾ

ನವದೆಹಲಿ:  ನೂತನ ಸಂಸತ್ತಿನ ಕಟ್ಟಡದ ನಿರ್ಮಾಣವನ್ನು ಪರಿಗಣಿಸಲಾಗುತ್ತಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಶನಿವಾರ ಹೇಳಿದರು, ಆದರೆ ಈ ವಿಚಾರವಾಗಿ ಇನ್ನೂ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ ಎಂದು ತಿಳಿಸಿದರು.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿರ್ಲಾ, ನೂತನ ಸಂಸತ್ತಿನ ಕಟ್ಟಡದ ಅವಶ್ಯಕತೆಯಿದೆ ಎನ್ನುವುದು ತಿಳಿದಿದೆ. ಈ ವಿಷಯದ ಬಗ್ಗೆ ಸಂಸದರು ಸೇರಿದಂತೆ ವಿವಿಧ ಜನರ ಸಲಹೆಗಳನ್ನು ತೆಗೆದುಕೊಳ್ಳಲು ಹಲವಾರು ಗುಂಪುಗಳನ್ನು ರಚಿಸಲಾಗಿದೆ ಎಂದರು. ಸದ್ಯ ಇರುವ ಸಂಸತ್ತಿನ ಕಟ್ಟಡವನ್ನೂ ಆಧುನೀಕರಿಸಬಹುದು ಎಂದು ತಿಳಿಸಿದರು.

ಭಾರತದ ಸ್ವಾತಂತ್ರ್ಯದ 75 ನೇ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸರ್ಕಾರ 'ನವ ಭಾರತ'ದ ತನ್ನ ನಿರ್ಣಯದಲ್ಲಿ ಸಂಸತ್ತಿನ ಕಟ್ಟಡ ವಿಸ್ತರಣೆ ಮತ್ತು ಆಧುನೀಕರಣವನ್ನು ಸೇರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸಂಸತ್ತಿನ ಕಟ್ಟಡವು ಅತ್ಯಂತ ಭವ್ಯವಾದ ಮತ್ತು ಆಕರ್ಷಕವಾಗಿರಬೇಕು ಎಂಬುದು ನಮ್ಮೆಲ್ಲರ ಆಸೆ ಎಂದರು.

ಸದ್ಯ ಮುಕ್ತಾಯಗೊಂಡ ಅಧಿವೇಶನದ ಕುರಿತು ಮಾತನಾಡಿದ ಬಿರ್ಲಾ, ಲೋಕಸಭೆಯ ಮುಂದೂಡಿಕೆಯನ್ನು ಅಧಿವೇಶನದಲ್ಲಿ ಒಂದು ಬಾರಿ ಸಹ ಮಾಡಿಲ್ಲ ಮತ್ತು ಇದರ ಪರಿಣಾಮವಾಗಿ, ಅದು ನಿಗದಿಪಡಿಸಿದ ಸಮಯಕ್ಕಿಂತ 72 ಗಂಟೆಗಳ ಕಾಲ ಹೆಚ್ಚು ವ್ಯಯ ಮಾಡಿತು, ಇದು 12 ಸಭೆಗಳ ಕೆಲಸಕ್ಕೆ ಸಮನಾಗಿರುತ್ತದೆ ಎಂದು ತಿಳಿಸಿದರು. ಲೋಕಸಭೆ ಸರಿಯಾಗಿ ಕಾರ್ಯನಿರ್ವಹಿಸಿದರೆ ಮತ್ತು ಹೆಚ್ಚು ಗಂಟೆಗಳ ಕಾಲ ಕುಳಿತುಕೊಂಡರೆ, ಅದು ದೇಶದಲ್ಲಿ ಸಕಾರಾತ್ಮಕ ಸಂದೇಶವನ್ನು ರವಾನಿಸುತ್ತದೆ' ಎಂದು ತಿಳಿಸಿದರು.

Read More