Home> India
Advertisement

Video: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೋಲಿಸ್ ಲಾಠಿಚಾರ್ಜ್ ನಿಂದ ರಕ್ಷಿಸಿದ ಪ್ರಿಯಾಂಕಾ ಗಾಂಧಿ

ದೆಹಲಿ-ನೋಯ್ಡಾ ಡಿಎನ್‌ಡಿ ಫ್ಲೈಓವರ್‌ನ ಟೋಲ್ ಪ್ಲಾಜಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಉತ್ತರ ಪ್ರದೇಶದ ಪೊಲೀಸರು ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಮಧ್ಯಾಹ್ನ ರಕ್ಷಕಿ ಪಾತ್ರವನ್ನು ನಿರ್ವಹಿಸಿದ್ದಾರೆ.

Video: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಪೋಲಿಸ್ ಲಾಠಿಚಾರ್ಜ್ ನಿಂದ ರಕ್ಷಿಸಿದ ಪ್ರಿಯಾಂಕಾ ಗಾಂಧಿ

ನವದೆಹಲಿ: ದೆಹಲಿ-ನೋಯ್ಡಾ ಡಿಎನ್‌ಡಿ ಫ್ಲೈಓವರ್‌ನ ಟೋಲ್ ಪ್ಲಾಜಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಉತ್ತರ ಪ್ರದೇಶದ ಪೊಲೀಸರು ನಡುವೆ ನಡೆದ ಘರ್ಷಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಮಧ್ಯಾಹ್ನ ರಕ್ಷಕಿ ಪಾತ್ರವನ್ನು ನಿರ್ವಹಿಸಿದ್ದಾರೆ.

ಕಳೆದ ತಿಂಗಳು ಸಾಮೂಹಿಕ ಅತ್ಯಾಚಾರ ಮತ್ತು ಕೊಲ್ಲಲ್ಪಟ್ಟ ದಲಿತ ಮಹಿಳೆಯ ಕುಟುಂಬವನ್ನು ಭೇಟಿ ಮಾಡಲು ಹತ್ರಾಸ್ ಗೆ ತೆರಳುತ್ತಿದ್ದಾಗ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಅವರನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು.

ಹಥ್ರಾಸ್ ಪ್ರತಿಭಟನೆ ವಿಚಾರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲು

ದೆಹಲಿ-ಯುಪಿ ಗಡಿಯಲ್ಲಿ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಅವ್ಯವಸ್ಥೆಯ ದೃಶ್ಯಗಳಲ್ಲಿ, ಶ್ರೀಮತಿ ಪ್ರಿಯಾಂಕಾ ಗಾಂಧಿ ವಾದ್ರಾ - ಗಾಢ ನೀಲಿ ಬಣ್ಣದ ಕುರ್ತಾ ಮತ್ತು ಮುಖವಾಡವನ್ನು ಧರಿಸಿ ಬ್ಯಾರಿಕೇಡ್  ಹಾರಿ ಬಿಳಿ ಕುರ್ತಾದಲ್ಲಿದ್ದ ಕಾರ್ಯಕರ್ತನನ್ನು ರಕ್ಷಿಸಲು ಧಾವಿಸಿ ಮುಂದಾಗಿರುವ ದೃಶ್ಯ ಸೆರೆಯಾಗಿದೆ.ವೀಡಿಯೊದಲ್ಲಿ ಶ್ರೀಮತಿ ಗಾಂಧಿ ವಾದ್ರಾ ಗಾಯಗೊಂಡಂತೆ ಕಾಣಿಸಿಕೊಂಡ ವ್ಯಕ್ತಿಯನ್ನು ಪೋಲಿಸರ  ಲಾಠಿಚಾರ್ಜ್ ನಿಂದ ರಕ್ಷಿಸುತ್ತಾರೆ.

ಶ್ರೀಮತಿ ಗಾಂಧಿ ವಾದ್ರಾ ಮತ್ತು ಅವರ ಸಹೋದರ ರಾಹುಲ್ ಗಾಂಧಿ ಅವರು ಇಂದು ಡಿಎನ್‌ಡಿಯ ಟೋಲ್ ಪ್ಲಾಜಾದಲ್ಲಿದ್ದರು, ಹತ್ರಾಸ್‌ಗೆ ಪ್ರಯಾಣಿಸಲು ಎರಡನೇ ಪ್ರಯತ್ನ ಮಾಡಲು ಮತ್ತು ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮತ್ತು 20 ವರ್ಷದ ಯುವತಿಯ ಕುಟುಂಬವನ್ನು ಭೇಟಿಯಾಗಲು ಮುಂದಾದರು.

Read More