Home> India
Advertisement

'ಮಾಧ್ಯಮದ ಧ್ವನಿ ಅಡುಗಿಸಲು ಕಾಂಗ್ರೆಸ್ ಯತ್ನ': ಸುಧೀರ್ ಚೌಧರಿ

ಝೀ ನ್ಯೂಸ್ ಮುಖ್ಯ ಸಂಪಾದಕ ಸುಧೀರ್ ಚೌಧರಿ ಜೊತೆ ಡಿಎನ್ಎ ಸಂದರ್ಶನ.

'ಮಾಧ್ಯಮದ ಧ್ವನಿ ಅಡುಗಿಸಲು ಕಾಂಗ್ರೆಸ್ ಯತ್ನ': ಸುಧೀರ್ ಚೌಧರಿ

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ವೇಳೆ ಕೆಲವರು ಪಾಕ್ ಪರವಾದ ಘೋಷಣೆಗಳನ್ನು ಕೂಗಿರುವ ವಿಚಾರವಾಗಿ ಝೀ ನ್ಯೂಸ್ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಅಲ್ಲದೆ 'ಪಾಕಿಸ್ತಾನ ಜಿಂದಾಬಾದ್' ಎನ್ನುವ ಘೋಷಣೆ ವಿಚಾರವಾಗಿ ಝೀ ನ್ಯೂಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಆದಾಗ್ಯೂ, ಆ ಬಗ್ಗೆ ಕ್ರಮ ಕೈಗೊಳ್ಳದ ಪಕ್ಷದ ಮುಖಂಡರು ಝೀ ನ್ಯೂಸ್ ನಕಲಿ ವೀಡಿಯೊವನ್ನು ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಡಿಎನ್ಎ, ಝೀ ನ್ಯೂಸ್ ಮುಖ್ಯ ಸಂಪಾದಕ ಸುಧೀರ್ ಚೌಧರಿ ಜೊತೆ ಸಂದರ್ಶನ ನಡೆಸಿದೆ.

ಸಂದರ್ಶನದಲ್ಲಿ ಸುಧೀರ್ ಚೌಧರಿ ಅವರಿಗೆ DNA ಕೇಳಿದ ಪ್ರಶ್ನೆ ಹಾಗೂ ಅದಕ್ಕೆ ಸುಧೀರ್ ಚೌಧರಿ ಅವರ ಪ್ರತಿಕ್ರಿಯೆ ಹೀಗಿದೆ:

ಝೀ ನ್ಯೂಸ್ ನಕಲಿ ವೀಡಿಯೊವನ್ನು ಪ್ರಸಾರ ಮಾಡಿದೆ ಮತ್ತು 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಈ ಆರೋಪ ಸತ್ಯವೇ?
ವಿಡಿಯೋ ನಕಲಿ ಎಂಬ ಆರೋಪವನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಇದು 100% ಅಧಿಕೃತವಾಗಿದೆ. ಇದನ್ನು ಖಾತರಿ ಪಡಿಸಿಕೊಳ್ಳಲು ಲೈವ್ ರೆಕಾರ್ಡ್ ಮಾಡಲಾದ ಕನಿಷ್ಠ ಏಳು ವಿಡಿಯೋಗಳನ್ನು ನಾವು ಪರಿಶೀಲಿಸಿದ್ದೇವೆ. ಪ್ರತಿ ವಿಡಿಯೋದಲ್ಲೂ ಒಂದೇ ಸಮಯದಲ್ಲಿ ಅದೇ ಘೋಷಣೆ ಇರುವುದನ್ನು ನಾವು ಪರಿಶೀಲಿಸಿದ್ದೇವೆ. ಕಾಂಗ್ರೆಸ್ ಮುಖಂಡನನ್ನು ಸಾಕ್ಷಿ ಸಮೇತ ಹಿಡಿದರೂ ಅದನ್ನು ನಕಲಿ ಎಂದು ಹೇಳುವ ಮೂಲಕ ಪಕ್ಷವು ನಾಯಕನ ರಕ್ಷಣೆಗೆ ಮುಂದಾಗಿರುವುದು ಹಾಸ್ಯಾಸ್ಪದ ಎನಿಸುತ್ತಿದೆ. ಇದು ಮಾತ್ರವಲ್ಲ ಈ ಸನ್ನಿವೇಶದಿಂದ ಹೊರಬರಲು ಕಾಂಗ್ರೆಸ್ ಮತ್ತೊಂದು ತಂತ್ರವನ್ನು ಬಳಸಿದೆ. ಝೀ ನ್ಯೂಸ್ ಸಂಪೂರ್ಣವಾಗಿ ತನ್ನ ವೀಡಿಯೋ ಪರವಾಗಿ ನಿಂತಿದೆ.

ಸಿಧು ಕೂಡ "ನಾನಿ ಯಾದ್ ದಿಲಾ ದೆಂಗೆ" ಎಂದು ಬೆದರಿಕೆ ಹಾಕಿದ್ದಾರೆ. ಇದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?
ನವಜೋತ್ ಸಿಂಗ್ ಸಿಧು ಬಳಸಿದ ಭಾಷೆಯನ್ನು ನಾನು ಬಲವಾಗಿ ಆಕ್ಷೇಪಿಸುತ್ತೇನೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇದೆ ಎಂದು ಕಾಂಗ್ರೆಸ್ ಯಾವಾಗಲೂ ಹೇಳಿಕೊಳ್ಳುತ್ತದೆ. ಕಾಂಗ್ರೆಸ್ ದೇಶದ ಅತ್ಯಂತ ಹಳೆಯ ಪಕ್ಷವಾಗಿದೆ. ಆದರೆ ಅದರ ಪ್ರಮುಖ ಮುಖಂಡರೊಬ್ಬರು ಇಂತಹ ಭಾಷೆ ಬಳಸಿರುವುದು, ಮಾಧ್ಯಮದ ಧ್ವನಿಯನ್ನು ಅಡುಗಿಸುವ ಪ್ರಯತ್ನ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಕಾಂಗ್ರೆಸ್ ಮತ್ತು ಅದರ ನಾಯಕರ ಅಹಂಕಾರವು ಉತ್ತುಂಗದಲ್ಲಿದೆ ಎಂದು ತೋರಿಸುತ್ತದೆ.

ಈ ವಿಷಯದ ಬಗ್ಗೆ ಗಿಲ್ಡ್ ಆಫ್ ಇಂಡಿಯಾ ಸಂಪಾದಕರೂ ಮಾತನಾಡಿಲ್ಲ. ಮುಂದಿನ ಕ್ರಮ ಏನು?
ಝೀ ನ್ಯೂಸ್ ಯಾವಾಗಲೂ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿದೆ. ಕಾನೂನಿನ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇದೇ. ಕಾನೂನಿನ ಚೌಕಟ್ಟಿನಲ್ಲಿ ನಾವು ಹೆಜ್ಜೆ ಇಡುತ್ತೇವೆ. ನಾವು ನಮ್ಮ ಲಿಖಿತ ದೂರನ್ನು ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್ಸ್ಗೆ ಕಳುಹಿಸಿದ್ದೇವೆ ಮತ್ತು ಇನ್ನೊಂದನ್ನು ಗಿಲ್ಡ್ ಆಫ್ ಇಂಡಿಯಾ ಸಂಪಾದಕರಿಗೆ ಕಳುಹಿಸಿದ್ದೇವೆ. ನಾವು ಭಾರತದ ಚುನಾವಣಾ ಆಯೋಗಕ್ಕೆ ದೂರು ಕಳುಹಿಸಿದ್ದೇವೆ. ಅಗತ್ಯವಿದ್ದರೆ, ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ಹಾಗಾಗಿ, ನಾವು ಕಾಂಗ್ರೆಸ್ ತೆಗೆದುಕೊಂಡ ನಿಲುವಿನ ವಿರುದ್ಧ  ಪ್ರಜಾಪ್ರಭುತ್ವದಲ್ಲಿ ಅವಕಾಶವಿರುವ ರೀತಿಯಲ್ಲಿ ನಾವು ಪ್ರತಿಭಟಿಸಿದ್ದೇವೆ. ಗಿಲ್ಡ್ ಆಫ್ ಇಂಡಿಯಾ ಸಂಪಾದಕರು ಈ ಬಗ್ಗೆ ಗಮನ ಹರಿಸದಿರುವುದಕ್ಕೆ ನಮಗೆ ಅಸಮಾಧಾನವಿದೆ. ಆದರೆ ಮಾಧ್ಯಮದ ಹೆಚ್ಚಿನ ಭಾಗವು ನಮ್ಮ ಕಾರ್ಯಾಚರಣೆಯನ್ನು ಬೆಂಬಲಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ಸಿಧು ಸ್ವತಃ ಈ ರೀತಿ ಮಾಡುತ್ತಿದ್ದಾರೋ ಅಥವಾ ಅವರ ಪಕ್ಷದ ಬೆಂಬಲವಿದೆಯೇ?
ಕಾಂಗ್ರೆಸ್ ನಂತಹ ದೊಡ್ಡ ಪಕ್ಷದಲ್ಲಿ ಸಿಧುನಂತಹ ನಾಯಕ ಏಕಾಂಗಿಯಾಗಿ ಹಾಗೆ ಮಾಡಲು ಸಾಧ್ಯವಿಲ್ಲ. ಅವರು ಪಾಕಿಸ್ತಾನಕ್ಕೆ ಹೋದಾಗ, ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಹೋಗುವುದನ್ನು ಇಷ್ಟಪಟ್ಟಿರಲಿಲ್ಲ ಎಂದು ನೀವು ನೋಡಿದ್ದೀರಿ. ಆದರೆ ಪಾಕಿಸ್ತಾನದಿಂದ ಹಿಂದಿರುಗಿದ ನಂತರ ಸಿಧು ತನ್ನ ನಾಯಕ ಅಮರೀಂದರ್ ಅಲ್ಲ, ರಾಹುಲ್ ಗಾಂಧಿ ಎಂದು ಹೇಳಿದ್ದರು. ಆದರೆ ರಾಹುಲ್ ಒಪ್ಪಲಿಲ್ಲ. ಆದರೂ ಪಕ್ಷದ ಬೆಂಬಲವಿಲ್ಲದೆ ಈ ರೀತಿ ಮಾಡಲು ಸಾಧ್ಯವಿಲ್ಲ.

Read More