Home> India
Advertisement

ನಾಳೆಯಿಂದ ಮನೆ ಬಾಗಿಲಿಗೆ ವಿತರಣೆಯಾಗಲಿದೆ ಮದ್ಯ ; 'ಎಣ್ಣೆ' Home deliveryಗೂ ಇದೆ App

ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸುವ ಬಗ್ಗೆ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶದ ಅನ್ವಯ,  ಮೇ 10 ರಿಂದ ಮದ್ಯವನ್ನು  ಮನೆ ಬಾಗಿಲಿಗೆ  ತಲುಪಿಸಲಾಗುವುದು. ಬೆಳಿಗ್ಗೆ 9:00 ರಿಂದ ರಾತ್ರಿ 8:00 ರವರೆಗೆ ಮದ್ಯ ಹೋಂ ಡೆಲಿವೆರಿ ಆಗಲಿದೆ .  

 ನಾಳೆಯಿಂದ ಮನೆ ಬಾಗಿಲಿಗೆ ವಿತರಣೆಯಾಗಲಿದೆ ಮದ್ಯ ; 'ಎಣ್ಣೆ' Home deliveryಗೂ ಇದೆ App

ರಾಯ್‌ಪುರ : ಕೊರೊನಾವೈರಸ್‌ (Coronavirus) ರುದ್ರನರ್ತನಕ್ಕೆ ತತ್ತರಿಸಿರುವ  ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಹೇರಲಾಗಿದೆ. ಈ ಕಾರಣದಿಂದಾಗಿ ಅಗತ್ಯ ಸೇವೆಗಳ ಹೊರತಾಗಿ ಇತರ ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.  ಛತ್ತೀಸ್ ಘಡದ (Chhattisgarh) ಅನೇಕ ಜಿಲ್ಲೆಗಳಲ್ಲಿ ಮೇ 17 ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಮದ್ಯಪ್ರಿಯರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಹೌದು, ಇಲ್ಲಿ ಮದ್ಯವನ್ನು ಹೋಂ ಡೆಲಿವೆರಿ (Home delivery) ಮಾಡಲಾಗುವುದು. 

ಆದೇಶ ಹೊರಡಿಸಿರುವ ಅಬಕಾರಿ ಇಲಾಖೆ : 

ಮದ್ಯವನ್ನು (Liquor) ಮನೆ ಬಾಗಿಲಿಗೆ ತಲುಪಿಸುವ ಬಗ್ಗೆ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶದ ಅನ್ವಯ,  ಮೇ 10 ರಿಂದ ಮದ್ಯವನ್ನು  ಮನೆ ಬಾಗಿಲಿಗೆ  ತಲುಪಿಸಲಾಗುವುದು. ಬೆಳಿಗ್ಗೆ 9:00 ರಿಂದ ರಾತ್ರಿ 8:00 ರವರೆಗೆ ಮದ್ಯ ಹೋಂ ಡೆಲಿವೆರಿ ಆಗಲಿದೆ (Home delivery) .  ಹೋಂ ಡೆಲಿವೆರಿ ಮಾಡಲು ಮದ್ಯದಂಗಡಿಗಳನ್ನು ಕೂಡಾ ಛತ್ತೀಸ್ ಘಡ ಸ್ಟೇಟ್ ಮಾರ್ಕೆಟಿಂಗ್ ಕಾರ್ಪೊರೇಶನ್ ಲಿಮಿಟೆಡ್ ನಿರ್ಧಾರ ಮಾಡಲಿದೆ. 

ಇದನ್ನೂ ಓದಿ : Amazon Prime ಸದಸ್ಯರಿಗೊಂದು ಆಘಾತ ; ಕರೋನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಕಂಪನಿ ತೆಗೆದುಕೊಂಡ ನಿರ್ಧಾರ ಇದು

ಆ್ಯಪ್ ಮೂಲಕ ಮದ್ಯ ಬುಕಿಂಗ್ : 
ಹೊಂ ಡೆಲಿವೆರಿಗಾಗಿ  ಮದ್ಯವನ್ನು ಕಾಯ್ದಿರಿಸಲು ಒಂದು  ಅಪ್ಲಿಕೇಶನ್ (App) ಅನ್ನು ಕೂಡಾ ರಚಿಸಲಾಗಿದೆ.  Csmcl ಹೆಸರಿನ ಈ ಅಪ್ಲಿಕೇಶನ್‌ ಮೂಲಕ ಮದ್ಯವನ್ನು ಬುಕ್ ಮಾಡಬಹುದಾಗಿದೆ.  ಇದಕ್ಕಾಗಿ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ (Aadhaar) , ಪೂರ್ಣ ವಿಳಾಸವನ್ನು ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ಶರಾಬನ್ನು order ಮಾಡುವ ವೇಳೆ, ಮದ್ಯದ ಹೆಸರು, ಮತ್ತು ದರ ಅಪ್ಲಿಕೇಶನ್‌ನಲ್ಲಿ ಕಾಣಿಸಲಿದೆ. 15 ಕಿ.ಮೀ ವ್ಯಾಪ್ತಿವರೆಗೆ ಹೋಂ ಡೆಲಿವೆರಿ ನೀಡಲಾಗುತ್ತದೆ. ಬುಕ್ಕಿಂಗ್ ವೇಳೆಯೇ ಬೆಲೆಯನ್ನು ಪಾವತಿಸಬೇಕು. ಇದರ ಜೊತೆ 100 ರೂಪಾಯಿ ಡೆಲಿವೆರಿ ಚಾರ್ಜ್ ಕೂಡಾ ಪಾವತಿಸಬೇಕು.

'ಔಷಧಿ ಸಿಗದಿದ್ದರೂ ಮದ್ಯ ಮನೆ ಬಾಗಿಲಿಗೇ ಬರಲಿದೆ'
ಈ ನಡುವೆ ಸರ್ಕಾರದ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮನೆ ಬಾಗಿಲಿಗೆ ಮದ್ಯ ವಿತರಿಸುವ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ (Raman singh) , ಖಂಡಿಸಿದ್ದಾರೆ. ಕರೋನಾ (Coronavirus) ಬಿಕ್ಕಟ್ಟಿನ ಮಧ್ಯೆ, ಮನೆ ಬಾಗಿಲಿಗೆ ಮದ್ಯ ತಲುಪಿಸುವ ದೇಶದ ಮೊದಲ ಸರ್ಕಾರ ಇದಾಗಿದೆ ಎಂದು ಅವರು ಕಿಡಿಕಾರಿದ್ದಾರೆ..

 

ಇದನ್ನೂ ಓದಿ : ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಅಪ್ಪಳಿಸಲಿದೆ ಕೊರೊನಾ ಮೂರನೇ ಅಲೆ

ಪಡಿತರ, ಔಷಧಿ, ಲಸಿಕೆ (Vaccine) ಮನೆ ಬಾಗಿಲಿಗೆ ತಲುಪುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಮದ್ಯ ಮಾತ್ರ ಖಂಡಿತವಾಗಿಯೂ ತಲುಪಿಸಲಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ. ಆಸ್ಪತ್ರೆಗಳಲ್ಲಿ ರೋಗಿಗಳು ಸಾಯುತ್ತಿದ್ದಾರೆ. ಸರ್ಕಾರ ಮದ್ಯವ್ಯಸನಿಗಳ ಬಗ್ಗೆ ಚಿಂತಿಸುತ್ತಿದೆ ಎಂದು ರಮಣ್ ಸಿಂಗ್ ಟೀಕಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More