Home> India
Advertisement

ಇಂದು ಭಾಗಶಃ ಚಂದ್ರ ಗ್ರಹಣ

ದೇಶದಲ್ಲಿ ಮಂಗಳವಾರ ಮೂರು ಗಂಟೆಗಳ ಕಾಲ ಭಾಗಶಃ ಚಂದ್ರ ಗ್ರಹಣ ಸಂಭವಿಸಲಿದೆ. 
 

ಇಂದು ಭಾಗಶಃ ಚಂದ್ರ ಗ್ರಹಣ

ನವದೆಹಲಿ: ದೇಶದಲ್ಲಿ ಮಂಗಳವಾರ ಮೂರು ಗಂಟೆಗಳ ಕಾಲ ಭಾಗಶಃ ಚಂದ್ರ ಗ್ರಹಣ ಸಂಭವಿಸಲಿದೆ. ಜುಲೈ ತಿಂಗಳಲ್ಲೇ ಸಂಭವಿಸುತ್ತಿರುವ ಎರಡನೇ ಗ್ರಹಣ ಇದಾಗಿದೆ. ಮಂಗಳವಾರ ರಾತ್ರಿ 12:13ಕ್ಕೆ ಆರಂಭವಾಗುವ ಚಂದ್ರಗ್ರಹಣ ಬುಧವಾರ ನಸುಕಿನ ಜಾವ 04:29 ರ ವೇಳೆಗೆ ವಿಮೋಚನೆಯಾಗಲಿದೆ.  

ಇಂದು ರಾತ್ರಿ 12:13ಕ್ಕೆ ಸರಿಯಾಗಿ ಚಂದ್ರ ಗ್ರಹಣ ಆರಂಭವಾಗಲಿದ್ದು, 5 ಗಂಟೆ 34 ನಿಮಿಷಗಳ ಕಾಲ ಸಕ್ರಿಯ ವಾಗಿರಲಿದೆ. ಬುಧವಾರ ನಸುಕಿನಲ್ಲಿ ಅಂದರೆ ಸುಮಾರು 3 ಗಂಟೆಯ ವೇಳೆಗೆ ಗ್ರಹಣವು ಗರಿಷ್ಠ ಮಟ್ಟಕ್ಕೆ ತಲುಪಲಿದೆ. 1.31ರ ವೇಳೆಗೆ ಭಾಗಶಃ ಚಂದ್ರಗ್ರಹಣ ಸ್ಪಷ್ಟವಾಗಿ ಗೋಚರಿಸಲಿದ್ದು, 4.29ಕ್ಕೆ ಅಂತ್ಯವಾಗಲಿದೆ ಎಂದು ನಾಸಾ ತಿಳಿಸಿದೆ.

ಭಾಗಶಃ ಚಂದ್ರಗ್ರಹಣವು ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶ ಹೊರತುಪಡಿಸಿ ಭಾರತದಾದ್ಯಂತ ಎಲ್ಲೆಡೆಯೂ ಗೋಚರವಾಗಲಿದೆ. ಏಷ್ಯಾ ಮತ್ತು ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಮೆರಿಕದ ಹೆಚ್ಚಿನ ಪ್ರದೇಶಗಳಲ್ಲಿಯೂ ಚಂದ್ರ ಗ್ರಹಣವನ್ನು ವೀಕ್ಷಿಸಬಹುದಾಗಿದೆ.

ಈ ಬಾರಿಯ ಚಂದ್ರಗ್ರಹಣ ಅಂಶಿಕವಾಗಿರುವುದರಿಂದ ವಿಜ್ಞಾನಿಗಳು ಇದನ್ನು ಹಾಫ್ ಬ್ಲಡ್ ಥಂಡರ್ ಮೂನ್ ಎಂದು ಬಣ್ಣಿಸಿದ್ದಾರೆ.

ಈ ಚಂದ್ರಗ್ರಹಣವು 2019 ರ ಕೊನೆಯ ಚಂದ್ರಗ್ರಹಣವಾಗಿದ್ದು, 2020 ರ ಜನವರಿ 10 ರಂದು ಮುಂದಿನ ಚಂದ್ರಗ್ರಹಣ ಸಂಭವಿಸಲಿದೆ. 

Read More