Home> India
Advertisement

ಶೀಘ್ರವೇ ಆರಂಭಗೊಳ್ಳಲಿದೆ ದಿನಸಿ ಅಂಗಡಿಗಳ ರಾಷ್ಟ್ರೀಯ ಇ-ಕಾಮರ್ಸ್ ಪೋರ್ಟಲ್, ಆನ್ಲೈನ್ ಆರ್ಡರ್ ಪಡೆದು ಹೋಮ್ ಡಿಲೆವರಿ

ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆ DPIIT, CAIT ಜೊತೆಗೆ ಸೇರಿ ಒಂದು ರಾಷ್ಟ್ರೀಯ ಇ-ಕಾಮರ್ಸ್ ಪೋರ್ಟಲ್ ಆರಂಭಿಸುವ ನಿರ್ಣಯ ಕೈಗೊಂಡಿದೆ.

ಶೀಘ್ರವೇ ಆರಂಭಗೊಳ್ಳಲಿದೆ ದಿನಸಿ ಅಂಗಡಿಗಳ ರಾಷ್ಟ್ರೀಯ ಇ-ಕಾಮರ್ಸ್ ಪೋರ್ಟಲ್, ಆನ್ಲೈನ್ ಆರ್ಡರ್ ಪಡೆದು ಹೋಮ್ ಡಿಲೆವರಿ

ನವದೆಹಲಿ: ಕೊರೊನಾ ವೈರಸ್ ಮಹಾಮಾರಿಯ ಸದ್ಯದ ಪರಿಸ್ಥಿತಿಯಲ್ಲಿ ಜನರಿಗೆ ಅತ್ಯಾವಶ್ಯಕ ವಸ್ತುಗಳ ಪೂರೈಕೆಯನ್ನು ಸುನಿಶ್ಚಿತಗೊಳಿಸಲು ವ್ಯಾಪಾರಿಗಳು ಶೀಘ್ರವೇ ಇ-ಕಾಮರ್ಸ್ ಪೋರ್ಟಲ್ ವೊಂದನ್ನು ಲಾಂಚ್ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯದ DPIIT, ಕಾನ್ಫೆಡ್ರೆಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್(CAIT) ಜೊತೆಗೆ ಸೇರಿ ಒಂದು ರಾಷ್ಟ್ರೀಯ ಇ-ಕಾಮರ್ಸ್ ಪೋರ್ಟಲ್ ಆರಂಭಿಸಲು ನಿರ್ಣಯ ಕೈಗೊಂಡಿದೆ. ಇದರ ಅಡಿ ಸ್ಥಳೀಯ ದಿನಸಿ ಅಂಗಡಿಗಳು ಆನ್ಲೈನ್ ಮೂಲಕ ಆರ್ಡರ್ ಪಡೆದು, ಗ್ರಾಹಕರಿಗೆ ಅತ್ಯಾವಶ್ಯಕ ವಸ್ತುಗಳ ಹೋಮ್ ಡಿಲೆವರಿ ಮಾಡಲಿವೆ. ಈ ಅಭಿಯಾನಕ್ಕೆ ಸ್ಟಾರ್ಟ್ ಅಪ್ ಇಂಡಿಯಾ, ಇನ್ವೆಸ್ಟ್ ಇಂಡಿಯಾ, ಆಳ ಇಂಡಿಯಾ ಕನ್ಸ್ಯೂಮರ್ ಪ್ರಾಡಕ್ಟ್ ಡಿಸ್ಟ್ರಿಬ್ಯೂಟರ್ಸ್ ಫೆಡರೇಶನ್ ಹಾಗೂ ಅವಾನಾ ಕ್ಯಾಪಿಟಲ್ ಪ್ರಮೋಟರ್ಸ್ ಗಳು ಸಾಥ್ ನೀಡಲಿದ್ದಾರೆ.  ಈ ಇ-ಕಾಮರ್ಸ್ ಪೋರ್ಟಲ್ ಮಾಧ್ಯಮದ ಮೂಲಕ ದೇಶದ ಒಟ್ಟು 7 ಕೋಟಿ ವ್ಯಾಪಾರಿಗಳನ್ನು ಜೋಡಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಉತ್ಪಾದಕರು, ಡಿಸ್ಟ್ರಿಬ್ಯೂಟರ್, ಸಗಟು ಮಾರಾಟಗಾರರು, ಚಿಲ್ಲರೆ ಮಾರಾಟಗಾರರು ಹಾಗೂ ಗ್ರಾಹಕರ ಚೈನ್ ಶಾಮೀಲಾಗಿರಲಿದೆ.

ದೇಶಾದ್ಯಂತ ಸಪ್ಲೈ ಸುನಿಶ್ಚಿತಗೊಳಿಸಲಾಗುವುದು

ಇದಕ್ಕೆ ಸಂಬಂಧಿಸದಂತೆ ಹೇಳಿಕೆ ನೀಡಿರುವ CAIT ಅಧಿಕಾರಿ ಪ್ರವೀಣ್ ಖಂಡೆಲ್ವಾಲ್, ಇ-ಕಾಮರ್ಸ್ ರಾಷ್ಟ್ರೀಯ ಮಾರುಕಟ್ಟೆಯ ನೀಲನಕ್ಷೆಯನ್ನು ಮೊದಲೇ ಸಿದ್ಧಪಡಿಸಲಾಗಿದೆ ಎಂದಿದ್ದಾರೆ. ಕೊವಿಡ್ 19 ಸಂಕಷ್ಟದ ಅಡಿ ಈ ರಾಷ್ಟ್ರೀಯ ಮಾರುಕಟ್ಟೆ ದೇಶದ ವಿಭಿನ್ನ ನಗರಗಳಿಗೆ ಅತ್ಯಾವಶ್ಯಕ ವಸ್ತುಗಳ ಪೂರೈಕೆ ಸುನಿಶ್ಚಿತಗೊಳಿಸುವಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದೆ. ಈ ಇ-ಕಾಮರ್ಸ್ ಮಾರುಕಟ್ಟೆ ವ್ಯಾಪಾರಿಗಳಿಂದ, ವ್ಯಾಪಾರಿಗಳಿಗಾಗಿ ಮತ್ತು ದೇಶದ ಗ್ರಾಹಕರಿಗಾಗಿ ಇರಲಿದ್ದು, ಇದರಲ್ಲಿ ಸರ್ಕಾರದ ಎಲ್ಲ ಕಾನೂನುಗಳು ಹಾಗೂ ನಿಯಮಗಳನ್ನು ಪಾಲಿಸಲಾಗುವುದು ಎಂದಿದ್ದಾರೆ.

ಇಡೀ ದೇಶಾದ್ಯಂತ ಈ ಪ್ಲಾಟ್ಫಾರ್ಮ್ ಮೂಲಕ ಪೂರೈಕೆಯನ್ನು ಸುನಿಶ್ಚಿತಗೊಳಿಸಲು ಆಧುನಿಕ ತಂತ್ರಜಾನದ ಮೇಲೆ ಈ ಇ-ಕಾಮರ್ಸ್ ಪೋರ್ಟಲ್ ಅಭಿವೃದ್ಧಿಗೊಳಿಸಲಾಗಿದ್ದು, ಡಿಜಿಟಲ್ ಇಂಡಿಯಾ, ಡಿಜಿಟಲ್ ಪೇಮೆಂಟ್ ನಿಟ್ಟಿನಲ್ಲಿ ಇಟ್ಟ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಖಂಡೆಲ್ವಾಲ್ ಹೇಳಿದ್ದಾರೆ. ಅಷ್ಟೇ ಅಲ್ಲ ಈ ಮೂಲಕ ಇದುವರೆಗೆ ಸಾಂಪ್ರದಾಯಿಕವಾಗಿ ವ್ಯಾಪಾರ ನಡೆಸುವ ವ್ಯಾಪಾರಿಗಳನ್ನು ಇ-ಕಾಮರ್ಸ್ ಹಾಗೂ ಡಿಜಿಟಲ್ ಪೇಮೆಂಟ್ ಗೆ ಜೋಡಿಸಲಾಗುವುದು ಎಂದಿದ್ದಾರೆ.

Read More