Home> India
Advertisement

Central Government Jobs: 2022ರಿಂದ ಸರ್ಕಾರಿ ನೌಕರಿ ಪಡೆಯಲು CET Exam, ಕೇಂದ್ರ ಸರ್ಕಾರದ ಮಹತ್ವದ ಘೋಷಣೆ

Common Eligibility Test For Jobs: ಸರ್ಕಾರ ಈಗಾಗಲೇ ಈ ರೀತಿಯ ಪರೀಕ್ಷೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಿತ್ತು. ಆದರೆ ಕರೋನಾದಿಂದಾಗಿ  ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ.

Central Government Jobs: 2022ರಿಂದ ಸರ್ಕಾರಿ ನೌಕರಿ ಪಡೆಯಲು CET Exam, ಕೇಂದ್ರ ಸರ್ಕಾರದ ಮಹತ್ವದ ಘೋಷಣೆ

Common Eligibility Test For Jobs - ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ (Union Minister Dr. Jitendra Singh)ಮಂಗಳವಾರ ಕೇಂದ್ರ ಸರ್ಕಾರಿ ನೌಕರಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (CET) ನಡೆಸುವ ಕುರಿತು ಮಾತನಾಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಸರ್ಕಾರಿ ಉದ್ಯೋಗವನ್ನು ಬಯಸುವ ಆಕಾಂಕ್ಷಿಗಳು ಇದೀಗ ಸಾಮಾನ್ಯ ಅರ್ಹತಾ ಪರೀಕ್ಷೆಗೆ (CET For Government Jobs) ಹಾಜರಾಗಬೇಕು ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ಮುಂದಿನ ವರ್ಷದಿಂದ ಈ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ಇದನ್ನು 2022 ರ ಆರಂಭದಲ್ಲಿ ಜಾರಿಗೆ ತರಲಾಗುವುದು. ಸರ್ಕಾರ ಈಗಾಗಲೇ ಈ ರೀತಿಯ ಪರೀಕ್ಷೆಯ ಕುರಿತು ಯೋಜನೆ ರೂಪಿಸಿದೆ. ಆದರೆ ಕರೋನಾ ವೈರಸ್‌ನಿಂದಾಗಿ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. 

"ನೇಮಕಾತಿಗೆ ಅನುಕೂಲವಾಗುವಂತೆ ತರಬೇತಿ ಇಲಾಖೆ (DoPT) ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲಿದೆ. ಇದು ಯುವಕರಿಗೆ ದೊಡ್ಡ ವರದಾನ ಎಂದು ಸಾಬೀತಾಗಲಿದೆ. ದೇಶಾದ್ಯಂತದ ಯುವಕರಿಗೆ ಸಮಾನ ಅವಕಾಶಗಳನ್ನು ಪಡೆಯಲು ಇಂತಹ ಸಾಮಾನ್ಯ ಅರ್ಹತಾ ಪರೀಕ್ಷೆ (CET) ಮಾಡುವ ಅವಶ್ಯಕತೆಯಿದೆ" ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ಈ ಮೊದಲು, ಅನೇಕ ನೇಮಕಾತಿ ಏಜೆನ್ಸಿಗಳು ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದವು ಎಂಬುದು ಇಲ್ಲಿ ಗಮನಾರ್ಹ.  ಆದರೆ ಕೇಂದ್ರ ಸಚಿವ ಡಾ.ಜಿತೇಂದ್ರ ಅವರ ಈ ಹೇಳಿಕೆಯ ನಂತರ, ಕೆಲವು ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ-JEE Main Exam 2021 Dates: ಕೇಂದ್ರ ಶಿಕ್ಷಣ ಸಚಿವರಿಂದ JEE Main Exam 3ನೇ ಮತ್ತು 4ನೇ ಹಂತಗಳ ದಿನಾಂಕ ಘೋಷಣೆ

"ಇದಕ್ಕಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆ (National Recruitment Agency) ರಚಿಸಲಾಗಿದೆ. ಕೇಂದ್ರ ಸಚಿವ ಸಂಪುಟದ (Union Cabinet) ಅನುಮೋದನೆಯೊಂದಿಗೆ, ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆ (NRA) ರಚಿಸಲಾಗಿದೆ. ಸರ್ಕಾರಿ ವಲಯದ ಉದ್ಯೋಗಗಳಿಗಾಗಿ ಅಭ್ಯರ್ಥಿಗಳನ್ನು ಸ್ಕ್ರೀನ್ / ಶಾರ್ಟ್‌ಲಿಸ್ಟ್ ಮಾಡಲು ಎನ್‌ಆರ್‌ಎ ಗೆ ಸೂಚಿಸಲಾಗುವುದು. ಇದಕ್ಕಾಗಿ ಪ್ರಸ್ತುತ ಸಿಬ್ಬಂದಿ ಆಯ್ಕೆ ಆಯೋಗ (SSC), ರೈಲ್ವೆ ನೇಮಕಾತಿ ಮಂಡಳಿಗಳು (RRB) ಮತ್ತು ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ (IBPS) ಮೂಲಕ ನೇಮಕಾತಿ ನಡೆಸಲಾಗುತ್ತಿದೆ" ಎಂದು ಡಾ. ಸಿಂಗ್ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ-Coronavirus Update: ಕೊರೊನಾ ಪ್ರೋಟೋಕಾಲ್ ಮರೆತರೆ ಮತ್ತೆ ನಿರ್ಬಂಧಗಳು ಜಾರಿ: ಕೇಂದ್ರ

CET ಯಿಂದ ಈ ಲಾಭಗಳಿವೆ
ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ), ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಮತ್ತು ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ (ಐಬಿಪಿಎಸ್) ಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲಾಗುವುದು. ಇದನ್ನು ವರ್ಷಕ್ಕೆ ಎರಡು ಬಾರಿ ನಡೆಸಲು ಯೋಜನೆ ರೂಪಿಸಲಾಗಿದೆ. ಸಿಇಟಿ ಮೂಲಕ ಸರ್ಕಾರಿ ಉದ್ಯೋಗ ಪಡೆಯಲು, ಪ್ರತ್ಯೇಕ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಇದರಲ್ಲಿ, ಎಲ್ಲಾ ವಿವಿಧ ಪ್ರದೇಶಗಳ ಜನರು ಒಟ್ಟಾಗಿ ಪ್ರಿಲಿಮ್ಸ್ ಪರೀಕ್ಷೆಯನ್ನುಬರೆಯಲಿದ್ದಾರೆ.

ಇದನ್ನೂ ಓದಿ-GPF Interest Rate: ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, GPF ಹೊಸ ಬಡ್ಡಿದರಗಳು ಪ್ರಕಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More