Home> India
Advertisement

Hathras gang rape: ಹತ್ರಾಸ್ ಹತ್ಯಾಚಾರ ಪ್ರಕರಣ ಸಿಬಿಐ ತೆಕ್ಕೆಗೆ

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 20 ವರ್ಷದ ದಲಿತ ಮಹಿಳೆಯ ಮೇಲೆ ನಡೆದ ಮೇಲ್ಜಾತಿ ವ್ಯಕ್ತಿಗಳಿಂದ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಿದೆ.

 Hathras gang rape: ಹತ್ರಾಸ್ ಹತ್ಯಾಚಾರ ಪ್ರಕರಣ ಸಿಬಿಐ ತೆಕ್ಕೆಗೆ

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 20 ವರ್ಷದ ದಲಿತ ಮಹಿಳೆಯ ಮೇಲೆ ನಡೆದ ಮೇಲ್ಜಾತಿ ವ್ಯಕ್ತಿಗಳಿಂದ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಿದೆ.

ಹತ್ರಾಸ್ ಗೆ ರಾಹುಲ್-ಪ್ರಿಯಾಂಕಾ ಗಾಂಧಿ ಭೇಟಿ ಬೆನ್ನಲ್ಲೇ ಸಿಬಿಐಗೆ ಪ್ರಕರಣ ಶಿಫಾರಸ್ಸು

ಈ ಘಟನೆಯ ವಿಚಾರವಾಗಿ ದೇಶದಲ್ಲೆಡೆ ಪ್ರತಿಭಟನೆಗಳು ನಡೆದಿದ್ದರಿಂದಾಗಿ ಕೊನೆಗೆ ಯೋಗಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ.ಈ ಪ್ರಕರಣದಲ್ಲಿ ಯುವತಿಯ ಕುಟುಂಬವನ್ನು ನಡೆಸಿಕೊಂಡಿರುವುದು ವಿಚಾರವಾಗಿ ಯೋಗಿ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ.ರಾತ್ರಿಯಲ್ಲಿ ತಮ್ಮ ಮಗಳನ್ನು ಆತುರದಿಂದ ಅಂತ್ಯಸಂಸ್ಕಾರ ಮಾಡಲು ಅವರು ತಮ್ಮ ಮನೆಯಲ್ಲಿ ಬೀಗ ಹಾಕಿದ್ದರು ಎಂದು ಕುಟುಂಬ ಆರೋಪಿಸಿದೆ.

ಸೆಪ್ಟೆಂಬರ್ 14 ರಂದು 20 ವರ್ಷದ ಯುವತಿಯನ್ನು ಗ್ರಾಮದ ನಾಲ್ವರು ಮೇಲ್ಜಾತಿಯ ಯುವಕರು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದ್ದರು ಇದಾದ ನಂತರ ಆ ಯುವತಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.ಕ್ರೂರ ಲೈಂಗಿಕ ದೌರ್ಜನ್ಯದ ಪರಿಣಾಮವಾಗಿ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬ ಹೇಳಿದರೆ, ರಾಜ್ಯ ಪೊಲೀಸರು ಕುತ್ತಿಗೆಗೆ ಗಾಯದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವಾದಿಸಿದ್ದಾರೆ, ಅವರ ವಿಧಿವಿಜ್ಞಾನದ ಮಾದರಿಗಳಲ್ಲಿ ಯಾವುದೇ ವೀರ್ಯ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.

Read More