Home> India
Advertisement

ಲೋಕಸಭಾ ಚುನಾವಣೆ: ಎಸ್ಪಿ-ಬಿಎಸ್ಪಿ ಮೈತ್ರಿ ಸೀಟು ಹಂಚಿಕೆ ಫೈನಲ್! ಯಾರಿಗೆ ಎಷ್ಟು ಸೀಟು?

ಉತ್ತರಪ್ರದೇಶದಲ್ಲಿರುವ 80 ಲೋಕಸಭಾ ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ 37 ಮತ್ತು ಬಹುಜನ ಸಮಾಜ ಪಕ್ಷ 38 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಎರಡೂ ಪಕ್ಷಗಳು ಒಮ್ಮತದ ನಿರ್ಧಾರ ಪ್ರಕಟಿಸಿವೆ. 

ಲೋಕಸಭಾ ಚುನಾವಣೆ: ಎಸ್ಪಿ-ಬಿಎಸ್ಪಿ ಮೈತ್ರಿ ಸೀಟು ಹಂಚಿಕೆ ಫೈನಲ್! ಯಾರಿಗೆ ಎಷ್ಟು ಸೀಟು?

ಲಕ್ನೋ: ಲೋಕಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಘೋಷಣೆ ಮಾಡಿದ್ದಾರೆ. 

ಉತ್ತರಪ್ರದೇಶದಲ್ಲಿರುವ 80 ಲೋಕಸಭಾ ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ 37 ಮತ್ತು ಬಹುಜನ ಸಮಾಜ ಪಕ್ಷ 38 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಎರಡೂ ಪಕ್ಷಗಳು ಒಮ್ಮತದ ನಿರ್ಧಾರ ಪ್ರಕಟಿಸಿವೆ. ಇದಕ್ಕೂ ಮುನ್ನ ಎರಡೂ ಪಕ್ಷಗಳು ತಲಾ 38 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದವು.

ಈಗಾಗಲೇ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಗಾಂಧೀ ಕುಟುಂಬದ ಭದ್ರಕೋಟೆಯಾದ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ್ದು, ಉಳಿದ ಮೂರು ಸ್ಥಾನಗಳು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕ ದಳಕ್ಕೆ  ಸಲ್ಲಲಿದೆ. 

ಇಂದಿನ ಅಧಿಕೃತ ಸೀಟು ಹಂಚಿಕೆ ಘೋಷಣೆಯೊಂದಿಗೆ ಉತ್ತರಪ್ರದೇಶದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಕೈರಾನಾ, ಮೊರಾದಾಬಾದ್, ಸಂಭಲ್, ರಾಮ್ಪುರ್, ಮೇನ್ಪುರಿ, ಫಿರೋಜಾಬಾದ್, ಬಡಾನ್, ಬರೇಲಿ, ಲಖನೌ ಇತವಾಹ್, ಕಾನ್ಪುರ್, ಕನೋಜ್ಝಾನ್ಸಿ, ಬಂದಾ, ಅಲಹಾಬಾದ್, ಕೌಶಾಂಬಿ, ಫುಲ್ಪುರ್, ಫೈಜಾಬಾದ್, ಗೊಂಡಾ, ಗೋರಾಕ್ಪುರ್, ವಾರಣಾಸಿ ಮತ್ತು ಮಿರ್ಜಾಪುರ ಸೇರಿದಂತೆ ಒಟ್ಟು 37 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಸ್ಪರ್ಧೆ ನಡೆಸಲಿದೆ.

ಸಹರಾನ್ಪುರ್, ಬಿಜ್ನೋರ್, ನಗೀನಾ, ಅಲಿಗಢ್, ಆಗ್ರಾ, ಫತೇಪುರ್ ಸಿಕ್ರಿ, ಧೌರಾಹಾರ, ಸಿಟಾಪುರ್, ಸುಲ್ತಾನ್ಪುರ್, ಪ್ರತಾಪ್ಗಡ್, ಕೈಸರ್ಗಂಜ್, ಬಸ್ತಿ, ಸೇಲಂಪುರ್, ಜೌನ್ಪುರ್, ಭೋಧೋಯಿ ಮತ್ತು ಡಿಯೋರಿಯಾ ಸೇರಿ ಒಟ್ಟು 38 ಕ್ಷೇತ್ರಗಳಲ್ಲಿ ಬಿಎಸ್ಪಿ ಕಣಕ್ಕಿಳಿಯಲಿದೆ.

Read More