Home> India
Advertisement

ಕರ್ನಾಟಕ, ಗೋವಾ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಈಗಾಗಲೇ ಲೋಕಸಭಾ ಚುನಾವಣೆಯ ಅರ್ಧ ಹಂತಗಳು ಇನ್ನೇನು ಮುಗಿಯುತ್ತಾ ಬಂದಿವೆ. ನಾಲ್ಕನೆ ಹಂತದ ಚುನಾವಣೆ ಸೋಮವಾರದಂದು ನಡೆಯಲಿದೆ.ಈ ಸಂದರ್ಭದಲ್ಲಿ ಬಿಜೆಪಿಕರ್ನಾಟಕ ಮತ್ತು ಗೋವಾದಲ್ಲಿನ ಕ್ಷೇತ್ರಗಳ ಉಪಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಕರ್ನಾಟಕ, ಗೋವಾ ವಿಧಾನಸಭೆ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ನವದೆಹಲಿ: ಈಗಾಗಲೇ ಲೋಕಸಭಾ ಚುನಾವಣೆಯ ಅರ್ಧ ಹಂತಗಳು ಇನ್ನೇನು ಮುಗಿಯುತ್ತಾ ಬಂದಿವೆ. ನಾಲ್ಕನೆ ಹಂತದ ಚುನಾವಣೆ ಸೋಮವಾರದಂದು ನಡೆಯಲಿದೆ.ಈ ಸಂದರ್ಭದಲ್ಲಿ ಬಿಜೆಪಿಕರ್ನಾಟಕ ಮತ್ತು ಗೋವಾದಲ್ಲಿನ ಕ್ಷೇತ್ರಗಳ ಉಪಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಈಗ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ  ಕರ್ನಾಟಕದ ಎರಡು ಕ್ಷೇತ್ರಗಳು ಹಾಗೂ ಗೋವಾದ ಒಂದು ಕ್ಷೇತ್ರಕ್ಕಾಗಿ ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಘೋಷಿಸಿದೆ. ಕರ್ನಾಟಕದಲ್ಲಿ ಈಗ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟದ ಸರ್ಕಾರವಿರುವುದರಿಂದ ಇದನ್ನು ಅತಂತ್ರಗೋಳಿಸಲು ಬಿಜೆಪಿ ಮೊದಲಿನಿಂದಲೂ ಪ್ರಯತ್ನಿಸುತ್ತಿದೆ. ಈ ಹಿನ್ನಲೇಯಲ್ಲಿ ಈಗ ಮೈತ್ರಿ ಸರ್ಕಾರಕ್ಕೆ ಪ್ರತಿಯೊಂದು ಸ್ಥಾನವು ಕೂಡ ಮಹತ್ವದ್ದಾಗಿದೆ.ಆದ್ದರಿಂದ ಈ ಎರಡು ಕ್ಷೇತ್ರಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಮೈತ್ರಿ ಸರ್ಕಾರವಿದೆ

ಈಗ ರಾಜ್ಯದಲ್ಲಿ ಚಿಂಚೋಳಿ ಮೀಸಲು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಅವಿನಾಶ್ ಅವರನ್ನು ಹೆಸರಿಸಲಾಗಿದೆ. ಕುಂದಗೋಳ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಎಎಸ್. ಐ ಚಿಕ್ಕನಗೌಡರ ಅವರನ್ನು ಘೋಷಿಸಲಾಗಿದೆ.ಇನ್ನು ಗೋವಾದ ಪಣಜಿ ಕ್ಷೇತ್ರಕ್ಕಾಗಿ ಸಿದ್ದಾರ್ಥ ಕುಂಕಾಲಿಂಕರ್ ಅವರನ್ನು ಹೆಸರಿಸಲಾಗಿದೆ.

Read More