Home> India
Advertisement

BJP: 2024ರ ಲೋಕ ಚುನಾವಣೆ: ಬಿಜೆಪಿ ವಿಭಾಗಗಳು 18 -28 ಕ್ಕೆ ಏರಿಕೆ! ಇಲ್ಲಿದೆ ಡಿಟೇಲ್ಸ್

2024 ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ತನ್ನ ಆಂತರಿಕ ವಿಭಾಗಗಳನ್ನು 18 ರಿಂದ 28 ಕ್ಕೆ ಏರಿಕೆ

BJP: 2024ರ ಲೋಕ ಚುನಾವಣೆ: ಬಿಜೆಪಿ ವಿಭಾಗಗಳು 18 -28 ಕ್ಕೆ ಏರಿಕೆ! ಇಲ್ಲಿದೆ ಡಿಟೇಲ್ಸ್

ನವದೆಹಲಿ: 2024 ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ತನ್ನ ಆಂತರಿಕ ವಿಭಾಗಗಳನ್ನು 18 ರಿಂದ 28 ಕ್ಕೆ ಏರಿಕೆ ಮಾಡಲು ನಿರ್ಧರಿಸಿದ್ದು, ಹೆಚ್ಚುವರಿ ಕಾರ್ಯಕರ್ತರನ್ನು ಒಳಗೊಳ್ಳಲಿದೆ.

ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಿಸುವುದಕ್ಕಾಗಿಯೇ ಪ್ರತ್ಯೇಕ ವಿಭಾಗಗಳನ್ನು ಬಿಜೆಪಿ(BJP) ಒಳಗೊಳ್ಳಲಿದ್ದು, ಸಾಮಾಜಿಕ ಜಾಲತಾಣ ವಿಭಾಗವನ್ನು ಐಟಿ ವಿಭಾಗದಿದ ಬೇರ್ಪಡಿಸಿ ಪ್ರತ್ಯೇಕಗೊಳಿಸಲು ಯೋಜನೆ ರೂಪಿಸಲಾಗಿದ್ದು, ಈ ವಿಭಾಗ ತಂತ್ರಜ್ಞಾನ ಅಳವಡಿಕೆಯ ಬಗ್ಗೆಯೂ ಗಮನ ಹರಿಸಲಿದೆ.

Samsung ನೀಡಲಿದೆ New Year ಗಿಫ್ಟ್!

ಸ್ವಚ್ಛ ಭಾರತ ಅಭಿಯಾನ, ಭೇಟಿ ಬಚಾವೋ-ಭೇಟಿ ಪಡಾವೋ ಹಾಗೂ ನಮಾಮಿ ಗಂಗೆ ವಿಭಾಗಗಳೂ ಅಸ್ತಿತ್ವಕ್ಕೆ ಬರಲಿದ್ದು, ಅದರದ್ದೇ ಆದ ಜವಾಬ್ದಾರಿಯನ್ನು ನಿರ್ವಹಿಸಲಿವೆ. ಹಿಂದೆಂದೂ ಈ ರೀತಿಯ ವಿಭಾಗಗಳು ಬಿಜೆಪಿಯಲ್ಲಿರಲಿಲ್ಲ ಎಂಬುದು ಗಮನಾರ್ಹ.

Narco Terrorism ಆರೋಪದ ಮೇಲೆ ಐವರು ಉಗ್ರರ ಬಂಧನ, ಶಸ್ತ್ರಾಸ್ತ್ರ - ದಾಖಲೆ ವಶಕ್ಕೆ

ಪ್ರತಿಯೊಂದು ಶಕ್ತಿ ಕೇಂದ್ರಗಳಲ್ಲಿಯೂ ಸ್ವಯಂ ಸೇವಕರ ತಂಡವನ್ನು ರಚಿಸಿ ಪ್ರಮುಖ ಸಂದರ್ಭಗಳಲ್ಲಿ ಹಾಗೂ ವಾರಕ್ಕೆ ಒಮ್ಮೆ ಸ್ವಚ್ಛ ಭಾರತ ಅಭಿಯಾನ ಕೈಗೊಳ್ಳುವಂತೆ ಮಾಡಬೇಕು, ಏಕ ಬಳಕೆ ಪ್ಲಾಸ್ಟಿಕ್ ನ್ನು ಬಳಕೆ ಮಾಡದಂತೆ ಸಮಾಜಿಕ ಅರಿವು ಮೂಡಿಸಬೇಕು, ಸಮಾನ ಮನಸ್ಕ ಸಂಘಟನೆಗಳನ್ನು ಒಗ್ಗೂಡಿಸುವ ವೇದಿಕೆಯನ್ನು ಸೃಷ್ಟಿಸಬೇಕು ಎಂದು ಬಿಜೆಪಿಯ ಕೈಪಿಡಿಯಲ್ಲಿ ತಿಳಿಸಲಾಗಿದೆ.

WhatsAppನಲ್ಲಿ ಡಿಲೀಟ್ ಮಾಡಲಾದ ಸಂದೇಶಗಳನ್ನೂ ಓದಬಹುದು, ಇಲ್ಲಿದೆ ಟ್ರಿಕ್

 

Read More