Home> India
Advertisement

ಗೋಡ್ಸೆ ದೇಶಭಕ್ತ ಎಂದಿದ್ದ ಪ್ರಜ್ಞಾ ಠಾಕೂರ್ ನ್ನು ಕೈಬಿಟ್ಟ ಸಂಸತ್ ರಕ್ಷಣಾ ಸ್ಥಾಯಿ ಸಮಿತಿ

ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಅವರನ್ನು ಸಂಸತ್ತಿನಲ್ಲಿ ದೇಶಭಕ್ತ ಎಂದು ಬಣ್ಣಿಸಿದ ಒಂದು ದಿನದ ನಂತರ ಬಿಜೆಪಿ ಸಂಸದ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಚಿವಾಲಯದ ಸಮಾಲೋಚನಾ ಸಮಿತಿಯಿಂದ ಗುರುವಾರ ಕೈಬಿಡಲಾಗಿದೆ.

ಗೋಡ್ಸೆ ದೇಶಭಕ್ತ ಎಂದಿದ್ದ ಪ್ರಜ್ಞಾ ಠಾಕೂರ್ ನ್ನು ಕೈಬಿಟ್ಟ ಸಂಸತ್ ರಕ್ಷಣಾ ಸ್ಥಾಯಿ ಸಮಿತಿ

ನವದೆಹಲಿ: ಮಹಾತ್ಮ ಗಾಂಧಿಯವರ ಹಂತಕ ನಾಥುರಾಮ್ ಗೋಡ್ಸೆ ಅವರನ್ನು ಸಂಸತ್ತಿನಲ್ಲಿ ದೇಶಭಕ್ತ ಎಂದು ಬಣ್ಣಿಸಿದ ಒಂದು ದಿನದ ನಂತರ ಬಿಜೆಪಿ ಸಂಸದ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಚಿವಾಲಯದ ಸಮಾಲೋಚನಾ ಸಮಿತಿಯಿಂದ ಗುರುವಾರ ಕೈಬಿಡಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ 'ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುವುದಲ್ಲ, ಆದರೆ ಅಂತಹ ಆಲೋಚನೆಯನ್ನು ಸಹ ನಾವು ಖಂಡಿಸುತ್ತೇವೆ. ಮಹಾತ್ಮ ಗಾಂಧಿಯವರ ಸಿದ್ಧಾಂತವು ಮೊದಲಿನಂತೆಯೇ ಪ್ರಸ್ತುತವಾಗಿದೆ 'ಎಂದು ಹೇಳಿದ್ದಲ್ಲದೆ ಪ್ರಜ್ಞಾ ಠಾಕೂರ್ ಹೇಳಿಕೆಯನ್ನು ಖಂಡಿಸಿದರು.

ಬಿಜೆಪಿ ಈ ಹೇಳಿಕೆಗಳನ್ನು ಖಂಡಿಸಿ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಕುರಿತು ಸಂಸದೀಯ ಸಮಿತಿಯಿಂದ ಪ್ರಜ್ಞಾ ಠಾಕೂರ್ ಅವರನ್ನು ಕೈಬಿಡುವುದಾಗುವುದು ಎಂದು ಘೋಷಿಸಿತ್ತು. "ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಲಹಾ ಸಮಿತಿಯಿಂದ ತೆಗೆದುಹಾಕಲಾಗುವುದು ಎಂದು ನಾವು ನಿರ್ಧರಿಸಿದ್ದೇವೆ, ಮತ್ತು ಈ ಅಧಿವೇಶನದಲ್ಲಿ ಅವರನ್ನು ಬಿಜೆಪಿ ಸಂಸದೀಯ ಪಕ್ಷದ ಸಭೆಗಳಲ್ಲಿ ಭಾಗವಹಿಸಲು ಅನುಮತಿಸುವುದಿಲ್ಲ" ಎಂದು ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಭೋಪಾಲ್‌ನ ಮೊದಲ ಬಾರಿಗೆ ಸಂಸದ ಪ್ರಜ್ಞಾ ಠಾಕೂರ್ ಅವರು ವಿಶೇಷ ಸಂರಕ್ಷಣಾ ಗುಂಪು (ತಿದ್ದುಪಡಿ) ಮಸೂದೆಯಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಗೋಡ್ಸೆಯನ್ನು ದೇಶದ ಭಕ್ತ ಎಂದು ಉಲ್ಲೇಖಿಸಿದ್ದಾರೆ. ಇದಾದ ನಂತರ ಸದನದಲ್ಲಿ ಪ್ರತಿಭಟನೆ ತೀವ್ರಗೊಂಡಿತು ಆಗ ಬಿಜೆಪಿ ಸದಸ್ಯರು ಪ್ರಜ್ಞಾ ಠಾಕೂರ್ ಅವರನ್ನು ಕುಳಿತುಕೊಳ್ಳಲು ಹೇಳಿದರು.

ಇದಾದ ನಂತರ, ಅವರ ಹೇಳಿಕೆಗಳನ್ನು ಸ್ಪಷ್ಟಪಡಿಸಲು ವರದಿಗಾರರು ಒತ್ತಡ ಹಾಕಿದಾಗ ಪ್ರಜ್ಞಾ ಠಾಕೂರ್ 'ನಾನು ಮೊದಲು ಹೇಳಿದ್ದನ್ನು ಆಲಿಸಿ, ನಾಳೆ ಉತ್ತರಿಸುತ್ತೇನೆ' ಎಂದು ಹೇಳಿದರು. ಇನ್ನೊಂದೆಡೆಗೆ ಸ್ಪೀಕರ್ ಓಂ ಬಿರ್ಲಾ ಅವರು ಈ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. 'ಭಯೋತ್ಪಾದಕಿ ಪ್ರಜ್ಞಾ ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಾರೆ. ಭಾರತದ ಸಂಸತ್ತಿನ ಇತಿಹಾಸದಲ್ಲಿ ಒಂದು ದುಃಖದ ದಿನ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.   

2008 ರ ಮಾಲೆಗಾಂವ್ ಸ್ಫೋಟದ ಆರೋಪಿ ಪ್ರಜ್ಞಾ ಠಾಕೂರ್ ಜಾಮೀನಿನ ಮೇಲೆ ಹೊರಗಿದ್ದು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಆರೋಪದ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 

Read More