Home> India
Advertisement

ಬಿಜೆಪಿ ತಾನು ಮಾಡಿದ್ದೆಲ್ಲವೂ ಸರಿ ಎಂಬ ಭ್ರಮೆಯಲ್ಲಿದೆ: ಮಾಯಾವತಿ

ಬಿಜೆಪಿ ಜೊತೆ ಮೈತ್ರಿ ಹೊಂದಿರುವ ಹಲವು ಪಕ್ಷಗಳು ಬಿಜೆಪಿಯ ಸಂಕುಚಿತ ಮನೋಭಾವನೆಯಿಂದಾಗಿ ಸಂತೋಷವಾಗಿಲ್ಲ ಎಂದು ಮಾಯಾವತಿ ಹೇಳಿದ್ದಾರೆ.

ಬಿಜೆಪಿ ತಾನು ಮಾಡಿದ್ದೆಲ್ಲವೂ ಸರಿ ಎಂಬ ಭ್ರಮೆಯಲ್ಲಿದೆ: ಮಾಯಾವತಿ

ಲಕ್ನೌ: ಕೇಂದ್ರ ಸರ್ಕಾರದ ನೀತಿಗಳನ್ನು ಕಟುವಾಗಿ ತಿಕಿಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು, ಬಿಜೆಪಿಯ ಅಹಂ ವರ್ತನೆಯಿಂದಾಗಿ ತಪ್ಪು ನೀತಿಗಳು ಜಾರಿಯಾಯಿಯೇ ಹೊರತು ದೇಶ ಅಭಿವೃದ್ಧಿಯಾಗಲಿಲ್ಲ ಎಂದಿದ್ದಾರೆ.

ಹೊಸವರ್ಷದ ಮೊದಲ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಯಾವತಿ, ತಮಗೆ ಬಹುಮತ ಇದೆ ಎಂಬ ಅಹಂಕಾರದಲ್ಲೇ ಬಿಜೆಪಿ ತಾನು ತೆಗೆದುಕೊಂಡ ಎಲ್ಲಾ ನಿರ್ಧಾರಗಳೂ ಸರಿ ಮತ್ತು ದೇಶದ ಪ್ರತಿಯೊಬ್ಬ ನಾಗರಿಕನೂ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ಮೆಚ್ಚಿ ಚಪ್ಪಾಳೆ ತಟ್ಟುತ್ತಿದ್ದಾನೆ ಎಂದು ತಿಳಿದಿದೆ. ಹೀಗಾಗಿಯೇ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು ಎಂದು ಹೇಳಿದ್ದಾರೆ.

ಬಿಜೆಪಿಯೊಂದಿಗೆ ಮೈತ್ರಿ ಹೊಂದಿರುವ ರಾಷ್ಟ್ರೀಯ ಡೆಮಾಕ್ರಟಿಕ್ ಒಕ್ಕೂಟ ಪಕ್ಷಗಳ ಬಗ್ಗೆ ಉಲ್ಲೇಖಿಸುತ್ತಾ, ಬಿಜೆಪಿ ಜೊತೆ ಮೈತ್ರಿ ಹೊಂದಿರುವ ಹಲವು ಪಕ್ಷಗಳು ಬಿಜೆಪಿಯ ಸಂಕುಚಿತ ಮನೋಭಾವನೆಯಿಂದಾಗಿ ಸಂತೋಷವಾಗಿಲ್ಲ. ಬಿಜೆಪಿಯಲ್ಲಿ 'ಜನತಾ' ತೆಗೆದರೆ ಅದು ಕೇವಲ ಭಾರತೀಯ ಪಕ್ಷವಾಗುತ್ತದೆ. ಹಾಗಾಗಿ ಬಿಜೆಪಿ ಭಾರತೀಯ ಜನತಾ ಪಕ್ಷವೋ ಅಥವಾ ಭಾರತೀಯ ಪಕ್ಷವೋ ಎಂಬುದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಾಬಿತಾಗಲಿದೆ ಎಂದು ಮಾಯಾವತಿ ಹೇಳಿದ್ದಾರೆ.

Read More