Home> India
Advertisement

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ಪ್ರೀಮಿಯಂ ರೈಲುಗಳ ಶುಲ್ಕ 25% ಕಡಿತ!

ನೀವು ಆಗಾಗ್ಗೆ ಶತಾಬ್ದಿ, ತೇಜಸ್ ಮತ್ತು ಗತಿಮಾನ್ ಎಕ್ಸ್‌ಪ್ರೆಸ್‌ನಂತಹ ರೈಲುಗಳ ಚೇರ್‌ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗೆ ಸಂತೋಷವನ್ನು ನೀಡುತ್ತದೆ. ಎಸಿ ಚೇರ್ ಕಾರ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಲ್ಕವನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಈ ಪ್ರೀಮಿಯಂ ರೈಲುಗಳ ಶುಲ್ಕ 25% ಕಡಿತ!

ನವದೆಹಲಿ: ನೀವು ಆಗಾಗ್ಗೆ ಶತಾಬ್ದಿ, ತೇಜಸ್ ಮತ್ತು ಗತಿಮಾನ್ ಎಕ್ಸ್‌ಪ್ರೆಸ್‌ನಂತಹ ರೈಲುಗಳ ಚೇರ್‌ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸುದ್ದಿ ನಿಮಗೆ ಸಂತೋಷವನ್ನು ನೀಡುತ್ತದೆ. ಎಸಿ ಚೇರ್ ಕಾರ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಲ್ಕವನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಈ ನಿರ್ಧಾರದಡಿಯಲ್ಲಿ ಶತಾಬ್ದಿ, ತೇಜಸ್ ಮತ್ತು ಗತಿಮಾನ್ ಎಕ್ಸ್‌ಪ್ರೆಸ್‌ನಂತಹ ರೈಲುಗಳಲ್ಲಿ ದರವನ್ನು ಶೇಕಡಾ 25 ರಷ್ಟು ಕಡಿಮೆಗೊಳಿಸಲಾಗುತ್ತದೆ. ಈ ನಿರ್ಧಾರದ ನಂತರ ಎಸಿ ಚೇರ್ ಕಾರ್ ರೈಲುಗಳ ಟಿಕೆಟ್ ಮಾರಾಟ ಹೆಚ್ಚಾಗುತ್ತದೆ ಎಂದು ರೈಲ್ವೆ ಆಶಿಸಿದೆ. ಕಡಿಮೆ ಶುಲ್ಕದ ವಿಮಾನಯಾನ ಸಂಸ್ಥೆಗಳ ಹೊರತಾಗಿ, ದರಗಳು ಮತ್ತು ಸೌಲಭ್ಯಗಳಲ್ಲಿ ರಸ್ತೆಮಾರ್ಗಗಳಾದ ಬಸ್‌ ಹಾಗೂ ರೈಲ್ವೆಗೆ ಸವಾಲು ಎದುರಾಗಿದೆ.

ಈ ರೈಲುಗಳಲ್ಲಿ ರಿಯಾಯಿತಿ ಅನ್ವಯಿಸುವುದಿಲ್ಲ:

ರೈಲ್ವೆ ತೆಗೆದುಕೊಂಡ ನಿರ್ಧಾರದ ಪ್ರಕಾರ, ಪ್ರತಿ ತಿಂಗಳು 50 ಪ್ರತಿಶತಕ್ಕಿಂತ ಕಡಿಮೆ ಬುಕಿಂಗ್ ಹೊಂದಿರುವ ರೈಲುಗಳ ಚೇರ್‌ಕಾರ್ ವರ್ಗದ ಮೂಲ ಶುಲ್ಕದಲ್ಲಿ 25 ಪ್ರತಿಶತದವರೆಗೆ ರಿಯಾಯಿತಿ ನೀಡಲಾಗುವುದು. ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್ ಹೊಂದಿರುವ ಎಲ್ಲಾ ರೈಲುಗಳಲ್ಲಿ ಈ ವಿನಾಯಿತಿ ಅನ್ವಯವಾಗುತ್ತದೆ. ಆದಾಗ್ಯೂ, ಚೆನ್ನೈ ಸೆಂಟ್ರಲ್-ಮೈಸೂರು ಶತಾಬ್ಡಿ ಎಕ್ಸ್‌ಪ್ರೆಸ್, ಅಹಮದಾಬಾದ್-ಮುಂಬೈ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ನ್ಯೂ ಜಲ್ಪೈಗುರಿ-ಹೌರಾ ಶತಾಬ್ಡಿ ಎಕ್ಸ್‌ಪ್ರೆಸ್‌ನಲ್ಲಿ ಈ ರಿಯಾಯಿತಿ ಅನ್ವಯಿಸುವುದಿಲ್ಲ. ಈ ರೈಲುಗಳಲ್ಲಿ ಅಸ್ತಿತ್ವದಲ್ಲಿರುವ ರಿಯಾಯಿತಿ ಯೋಜನೆ ಅನ್ವಯವಾಗಲಿದೆ ಎಂದು ರೈಲ್ವೆ ಇಲಾಖೆ ಮಾಹತಿ ನೀಡಿದೆ.

ಆರು ತಿಂಗಳವರೆಗೆ ಈ ರಿಯಾಯಿತಿ ಯೋಜನೆ ಅನ್ವಯ:
ಶತಾಬ್ಡಿ, ಗತಿಮಾನ್, ತೇಜಸ್, ಡಬಲ್ ಡೆಕ್ಕರ್, ಇಂಟರ್ಸಿಟಿ ಎಕ್ಸ್‌ಪ್ರೆಸ್ ಶುಲ್ಕದಲ್ಲಿ ರೈಲ್ವೆಗೆ 25 ಪ್ರತಿಶತದಷ್ಟು ರಿಯಾಯಿತಿ ನೀಡಲಾಗುವುದು. ಅದಕ್ಕಾಗಿ ಷರತ್ತು ಏನೆಂದರೆ, ಕೇವಲ 50 ಪ್ರತಿಶತದಷ್ಟು ಟಿಕೆಟ್‌ಗಳನ್ನು ಆಯಾ ರೈಲಿನಲ್ಲಿ ಕಾಯ್ದಿರಿಸಲಾಗಿದೆ. ಈ ನಿರ್ಧಾರವನ್ನು ತಿಂಗಳ ಅಂತ್ಯದೊಳಗೆ ಜಾರಿಗೆ ತರಲಾಗುವುದು. ಎಲ್ಲಾ ವಲಯ ರೈಲ್ವೆಗಳಿಗೆ ದರದಲ್ಲಿ ವಿನಾಯಿತಿ ನೀಡುವಂತೆ ಈ ಕುರಿತು ಸೂಚನೆಗಳನ್ನು ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವಲಯ ರೈಲ್ವೆ ಆರು ತಿಂಗಳವರೆಗೆ ಶುಲ್ಕ ರಿಯಾಯಿತಿ ನೀಡುವ ಯೋಜನೆಯನ್ನು ಪ್ರಯೋಗಿಕವಾಗಿ ಜಾರಿಗೆ ತರಲಿದೆ.

ವಂದೇ ಭಾರತ ರೈಲಿನ ಶುಲ್ಕದಲ್ಲಿ ಕೂಡ ದೊರೆಯಲಿದೆ ರಿಯಾಯಿತಿ:
ಆರು ತಿಂಗಳ ನಂತರ ಈ ರಿಯಾಯಿತಿಯನ್ನು ವಿಸ್ತರಿಸಬಹುದು ಎಂದು ನಿರೀಕ್ಷಿಸಲಾಗಿದೆ. ರೈಲ್ವೆ ನೀಡುವ ಈ ರಿಯಾಯಿತಿಯನ್ನು ರೈಲಿನ ಆರಂಭದ ನಿಲ್ದಾಣದಿಂದ ಕೊನೆ ನಿಲ್ದಾಣದವರೆಗೆ ಅಥವಾ ಮಧ್ಯದ ಯಾವುದೇ ರೈಲು ನಿಲ್ದಾಣಕ್ಕೆ ನೀಡಬಹುದು. ಪ್ರಯಾಣದ ಯಾವ ಭಾಗವು ಟಿಕೆಟ್ ಬುಕಿಂಗ್ 50 ಪ್ರತಿಶತಕ್ಕಿಂತ ಕಡಿಮೆಯಾಗುತ್ತಿದೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಈ ವರ್ಷ ಪ್ರಾರಂಭವಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೂ ಈ ರಿಯಾಯಿತಿ ಅನ್ವಯವಾಗಲಿದೆ. ಮೂಲ ದರದಲ್ಲಿ ಮಾತ್ರ ರಿಯಾಯಿತಿ ನೀಡಲಾಗುವುದು. ಜಿಎಸ್‌ಟಿ, ಮೀಸಲಾತಿ ಶುಲ್ಕ, ಸೂಪರ್‌ಫಾಸ್ಟ್ ಸುಂಕ ಮತ್ತು ಇತರ ಶುಲ್ಕಗಳಿಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

Read More